ಇದನ್ನು ನೀವು ಪಾಲಿಸಿದರೆ ಎಷ್ಟೋ ಜನರ ಜೀವ ಉಳಿಸಬಹುದು..!

0
392

ನಿಜವಾಗಿ ಹೇಳಬೇಕೆಂದರೆ ಇದನ್ನು ಪಾಲಿಸಲು ನಮ್ಮೆಲ್ಲರಿಂದ ಸ್ವಲ್ಪ ಅರಿವು ಹಾಗೂ ಸ್ವಲ್ಪ ಕ್ರಮ ಮಾತ್ರ ಸಾಕು. ಇದರಿಂದ ಬಹಳಷ್ಟು ಬದಲಾವಣೆ ಸಾಧ್ಯ.

ಇದನ್ನು ಉದಾಹರಣೆಯಲ್ಲಿ ಹೇಳುವುದಾದರೆ , ನಮ್ಮ ವಾಹನದ ಹಿಂದೆ ಆಂಬ್ಯುಲೆನ್ಸ್ ಬರುತ್ತಿದ್ದುದು ನಮ್ಮ ಗಮನಕ್ಕೆ ಬಂದೊಡನೆ , ಪ್ರತಿಯೊಬ್ಬರೂ ಮಾಡಬೇಕಾಗಿದ್ದು ಅಥವಾ , ನಾವು ಪ್ರಯಾಣಿಸುತ್ತಿರುವ ವಾಹನದ ಚಾಲಕನಿಗೆ ಹೇಳಬೇಕಾದದ್ದು ಇಷ್ಟೇ – ಅತೀ ಸಾಮಾನ್ಯ ಸಂಗತಿ. ಚಾಲಕನು ನಿಮ್ಮ ಸ್ವಂತ ವಾಹನದ , ಆಟೋ , ಟ್ಯಾಕ್ಸಿ /ಕ್ಯಾಬ್ , ಅಥವಾ ಬಸ್ಸಿನ ಚಾಲಕನಾಗಿರಬಹುದು.

  • ನಿಮ್ಮ ವಾಹನದ ವೇಗ ತಗ್ಗಿಸಿ.
  • ಎಡ ಇಂಡಿಕೇಟರ್ ಹೊತ್ತಿಸಿ.
  • ಎಡ ಲೇನ್ಗೆ ಸರಿಯಿರಿ.

  • ಬಲಗಡೆಯ ಲೇನ್ ಖಾಲಿ ಬಿಡಿ.
  • ನಿಧಾನವಾಗಿ ಚಲಿಸುತ್ತ ಇರಿ , ನಿಲ್ಲಕೂಡದು.
  • ಆಂಬ್ಯುಲೆನ್ಸ್ ಗೆ (ಅಗ್ನಿಶಾಮಕ ವಾಹನ ಅಥವಾ ಯಾವುದೇ ತುರ್ತು ಸೇವಾ ವಾಹನ) ನಿಮ್ಮ ಬಲಗಡೆಯಿಂದ ಸಾಗಲು ಅನುವು/ಆಸ್ಪದ/ಅವಕಾಶ ಮಾಡಿಕೊಡಿ.

  • ಆಂಬುಲೆನ್ಸ್ ನಿಮ್ಮಿಂದ ಕನಿಷ್ಠ ೧೦ ಮೀಟರ್ ಮುಂದೆ ಸಾಗುವವರೆಗೂ ವಾಹನವನ್ನು ನಿಧಾನವಾಗಿ ಚಲಿಸುತ್ತಿರಿ.
  • ಅಗತ್ಯವಿದ್ದರೆ ಆಂಬುಲೆನ್ಸ್ ಗೆ ಹಿಂದೆ ಬರಲು ಆವಕಾಶ ಇರಬೇಕು. ಆದ್ದರಿಂದ ಬಹಳಷ್ಟು ಹತ್ತಿರ ಹೋಗಕೂಡದು.
  • ಈ ಮೇಲಿನ ಕ್ರಮಗಳೆನ್ನೆಲ್ಲಾ ಪರಿಪಾಲಿಸುತ್ತಿರುವಾಗಲೇ , ಇತರ ವಾಹನಗಳ ಚಾಲಕರಿಗೆ ನಿಮ್ಮಂತೆಯೇ ಅನುಸರಿಸಲು ನಿದೇ೯ಶಿಸುತ್ತಿರಿ .

  • ನೀವು ಅಥವಾ ನಿಮ್ಮ ಚಾಲಕ ಮಾಡಿದ್ದಕ್ಕಾಗಿ, ಒಬ್ಬ ಪ್ರಜ್ಞಾಪೂರ್ವಕ ನಾಗರೀಕನ ಹೊಣೆಗಾರಿಕೆಯನ್ನು ನಿವ೯ಹಿಸಿದ್ದಕ್ಕಾಗಿ ಸಂತೋಷ ಪಡಿ. ನೀವು ಬಹುಶಃ ಒಬ್ಬ ಸ್ನೇಹಿತನ ಸಂಭಂಧಿಯ , ಅಥವಾ ಸಂಭಂಧಿಯ ಸ್ನೇಹಿತನ , ಅಥವಾ ನಿಮ್ಮಂತಹ ಯಾರಾದರೊಬ್ಬರ ಜೀವನವನ್ನು ಉಳಿಸಿದ್ದಿರಬಹುದು. ಹೆಮ್ಮೆ ಪಡೆಯುವ ವಿಷಯ.

ನಾನು ಪ್ರಯಾಣಿಸಿದ ವಾಹನಗಳ ಬಹುತೇಕ ಚಾಲಕರು ಇದರ ಬಗ್ಗೆ ಏನನ್ನಾದರೂ ಮಾಡಬೇಕೆಂದು ಬಯಸುವುದನ್ನು ನಾನು ಗಮನಿಸಿದ್ದೇನೆ. ಆದರೆ ಪ್ರತಿಯೊಬ್ಬರೂ ತಮ್ಮ ಗೊಂದಲಮಯ ರೀತಿಯಲ್ಲಿ ಏನಾದರೂ ಮಾಡುತ್ತಾರೆ. ಕೆಲವರು ಎಡಕ್ಕೆ ಹೋಗುತ್ತಾರೆ , ಕೆಲವರು ಬಲಕ್ಕೆ ಹೋಗುತ್ತಾರೆ , ಕೆಲವರು ಅಸಡ್ಡೆಯಿಂದ ಏನೂ ಗಮನಿಸದವರಂತೆ ಸಾಗುತ್ತಿರುತ್ತಾರೆ. ಈ ಮೂಲಕ ನಾವು ಏನನ್ನೂ ಸಾಧಿಸುವುದಿಲ್ಲ. ಆದರೆ ಮೇಲೆ ಹೇಳ್ದಂತೆ ನಾವೆಲ್ಲಾ ಮಾಡಿದರೆ ಯಾವುದೇ ಗೊಂದಲವಿರದಂತೆ ಒಂದು ಜೀವ ಕಾಪಾಡುವ ಘನ ಕಾರ್ಯದಲ್ಲಿ ಭಾಗಿಯಾಗಬಹುದು.

ಏಕೆ ಎಡ ಭಾಗದಲ್ಲಿ (ಲೇನ್ ನಲ್ಲಿ) ಸಾಗಬೇಕು :
ಭಾರತದಲ್ಲಿ ನಾವು ಎಡಗಡೆ ಚಲಿಸಬೇಕೆಂಬ , ಮತ್ತು ವೇಗವಾಗಿ ಹೋಗಬೇಕಾದ ವಾಹನಗಳು ಬಲಗಡೆಯ ಲೇನ್-ನಲ್ಲಿ ಚಲಿಸಬೇಕು ಎನ್ನುವ ಸಂಚಾರ ನಿಯಮವಿದೆ , ಹಾಗಾಗಿ ಅದನ್ನು ನಾವು ಪಾಲಿಸೋಣ.