ಕೇರಳ ಪ್ರವಾಹ ಪೀಡಿತರಿಗೆ ನೀವೀಗ Amazon ಮೂಲಕ ಅಗತ್ಯ ವಸ್ತುಗಳನ್ನು ಕಳಿಸಬಹುದು, ಹೇಗೆ ಅಂತ ಹೇಳ್ತೀವಿ ಓದಿ!!

0
548

ಪ್ರಪಂಚದ ಮನೆ ಮನಸ್ಸುಗಳಲ್ಲಿ ಸಂಚಲನ ಮೂಡಿಸಿದ ‘amazon’ ಕೇವಲ ಗ್ರಾಹಕರ ಸೇವೆಗಾಗಿ ಮಾತ್ರವಲ್ಲ ಕೇರಳ ಪ್ರವಾಹ ದಲ್ಲಿರುವ ಜನರಿಗೆ ದೇವರ ರೂಪದಲ್ಲಿ ಸಹಾಯ ಮಾಡುತ್ತಿದೆ. ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ.

Also read: ಕೇವಲ ಕೇರಳ ಮಾತ್ರವಲ್ಲ, ನಮ್ಮ ಕೊಡಗು ಸಹ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ!! ಅವರಿಗೂ ನಮ್ಮೆಲ್ಲರ ಸಹಾಯ ಬೇಕಿದೆ!!!

ಒಬ್ಬತ್ತು ದಶಕಗಳ ನಂತರ ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ಜನರು ದಿಕ್ಕಾಪಾಲಾಗಿದ್ದಾರೆ ಲಕ್ಷಗಟ್ಟಲೆ ಜನರು ತೊಂದರೆಗೀಡಾಗಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಸಹಾಯಕ್ಕಾಗಿ ಬಾಯಿಬಿಟ್ಟಿದಾರೆ ಇವರೆಲ್ಲರಿಗೂ ಸಹಾಯ ಮಾಡಲು ಪ್ರಪಂಚದ ಎಲ್ಲರಿಗೂ ಮನಸ್ಸುಯಿದೆ ಆದ್ರೆ ಅಲ್ಲಿಬೇಕಾದ ವಸ್ತುಗಳನ್ನು ಕಳುಹಿಸಲು ಆಗದೆ ಅಸಾಹಾಯಕರಾಗಿ ಸುಮ್ಮನಾಗುತ್ತಾರೆ. ಇದನೆಲ್ಲಾ ಅರಿತ amazon ಸಹಾಯಮಾಡಲು ಅನುಷ್ಠಾನ ಪಾಲುದಾರರು ಮತ್ತು ರಾಜ್ಯ, ರಾಷ್ಟ್ರೀಯ ದುರಂತದ ಸಮನ್ವಯ ಸಮಿತಿಗಳೊಂದಿಗೆ ಕೈಜೋಡಿಸಿ ಪ್ರಪಂಚವೇ ಮೆಚ್ಚುವ ಹಾಗೆ ಕಾರ್ಯನಿರ್ವಹಿಸುತ್ತಿದೆ.

amazon ಮಖ್ಯಪುಟದಲ್ಲಿ ಬರುವ bit.ly /amazonkerala ದಲ್ಲಿ ಪ್ರಪಂಚದಾದ್ಯಂತದ ಯಾರೇಆಗಲಿ ಆಹಾರ ಪದಾರ್ಥಗಳು ಮತ್ತು ಬೆಡ್ ಸಿಟ್, ಪಾತ್ರೆ, ಹಾಗ ನೈರ್ಮಲ್ಯ ಉತ್ಪನ್ನಗಳನ್ನು ಬುಕ್ ಮಾಡಿ ಕಳುಹಿಸಬಹುದು ಇಂತಹ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಮಾಡಿದೆ. amazon ಮಖ್ಯಪುಟದಲ್ಲಿ ಕೇರಳದ ಜನರಿಗೆ ಅವಶ್ಯಕವಿರುವ ವಸ್ತುಗಳ ಪಟ್ಟಿಯನ್ನು ತೋರಿಸುತ್ತದೆ ಸಹಾಯ ಮಾಡುವರು ಆ ಪಟ್ಟಿಯಲ್ಲಿರುವ ವಸ್ತುಗಳನ್ನು ಆಯ್ಕೆಮಾಡಿ ಕಳುಹಿಸಬಹುದು, ಆಯ್ಕೆ ಮಾಡಿದ ವಸ್ತುವನ್ನು amazon CART ಗೆ ಸೇರಿಸಿ ಪರಿಶೀಲಿಸಿಲನೆ ಮಾಡಿ, ಅವುಗಳನ್ನು ಕೇರಳದ ಗಿಫ್ಟ್ ರಿಜಿಸ್ಟ್ರಿ ವಿಳಾಸಕ್ಕೆ ಸೇರಿಸಲಾಗುತ್ತಿದೆ. ಇಂತಹ ವಸ್ತುಗಳನ್ನು ರವಾನೆಮಾಡುವ ಹುಡುಗರಿಗೆ ವಿಶೇಷವಾಗಿ ತರಬೇತಿಯನ್ನು ನೀಡಲಾಗಿದೆ. amazon ಹೇಳುವಹಾಗೆ ಪ್ರಪಂಚದ ಜನರ ಬೆಂಬಲದೊಂದಿಗೆ, ಕೇರಳದ ಜನರ ಕಷ್ಟಕ್ಕೆ ನೆರೆವಾಗುತ್ತಿದೇವೆ ಆದರಿಂದ ದಯಮಾಡಿ ಎಲ್ಲರೂ ಸಹಾಯಮಾಡಿ ಇದರಿಂದ ದುರಂತದ ಪರಿಣಾಮಗಳನ್ನು ತಗ್ಗಿಸಬಹುದು ಮತ್ತು ಪ್ರವಾಹಕ್ಕೆ ಒಳಗಾದವರಿಗೆ ತಕ್ಷಣ ಆಹಾರ,ಬಟ್ಟೆ, ಮೂಲ ಪರಿಹಾರ ಒದಗಿಸಬಹುದು ಎಂದು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಅಮೆಜಾನ್ ಪ್ರಕಾರ, HABITAT FOR HUMANITY, WORLD VISION INDIA, GOONJ ಈ ಮೂರೂ ಸಮಸ್ಥೆಗಳು ಕೇರಳ ರಾಜ್ಯದಾದ್ಯಂತ ಪ್ರವಾಹದಲ್ಲಿರುವ ಸಾವಿರಾರು ಜನರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತಿವೆ ಅಂತೆ. ಪಥನಂತಿಟ್ಟ, ಅಲಪ್ಪುಳ, ಎರ್ನಾಕುಲಂ, ತ್ರಿಶೂರ್, ಇಡುಕ್ಕಿ, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳು ಕೇರಳ ರಾಜ್ಯದ ಅತ್ಯಂತ ಪ್ರವಾಹ ಪ್ರದೇಶಗಳಾಗಿವೆ, ಇಲ್ಲಿ ಎಲ್ಲಾ ನದಿಗಳು ಪೂರ್ಣ ಪ್ರವಾಹದಲ್ಲಿವೆ ಇದರಲ್ಲಿ ಸಹಾಯದ ವಸ್ತುವನ್ನು ನೀಡುತ್ತಿರುವ ಹುಡುಗರ ಕೆಲಸ ಸಾಹಸಮಯವೆ. ಕೇರಳದ ಅತೀಯಾದ ಹಿಟ್ ಜಿಲ್ಲೆಗಳಾದ ವಯನಾಡ್, ಇಡುಕ್ಕಿ, ಅಲೆಪ್ಪಿ ಮತ್ತು ಪಥನಂತಿಟ್ಟಾಗಳಲ್ಲಿ ದೂರವಾಣಿ ಸಂಪರ್ಕ ನಿಂತುಹೋಗಿದೆ, ದೂರುಗಳನ್ನು ಅನುಸರಿಸಿ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಕೂಡಾ ಪರಿಹಾರದ ಕಾರ್ಯಾಚರಣೆಗಳಲ್ಲಿ ಬಾಗಿಯಾದ BSNL ಶುಕ್ರವಾರ ಅನಿಯಮಿತ ಉಚಿತ ಕಾಲ್ ಮತ್ತು ಮೆಸೇಜ್ ನೀಡುವುದಾಗಿ ಮತ್ತು ಈ ಸೇವೆಯಲ್ಲಿ ಬಿಎಸ್ಎನ್ಎಲ್ ಅಲ್ಲದ ಸಂಖ್ಯೆಗಳಿಗೆ 20 ನಿಮಿಷಗಳ ಉಚಿತ ಕರೆಗಳು ಸೇರಿವೆ ಎಂದು ಘೋಷಿಸಿದೆ.