ನೀವು ಬೇರೆಯವರಿಗಿಂತ ಹೆಚ್ಚು ಬುದ್ದಿವಂತರು ಮತ್ತು ಕ್ರಿಯಾಶೀಲರು ಆಗ್ಬೇಕಾ?? ಹಾಗಿದ್ರೆ ಹಗಲು ಕನಸು ಕಾಣ್ರಿ… ಯಾಕಪ್ಪ ಅಂತೀರಾ ಮುಂದೆ ಓದಿ ನಿಮಗೆ ತಿಳಿಯುತ್ತೆ..

0
508

ಕೆಲವೊಮ್ಮೆ ಇಂಪಾರ್ಟೆಂಟ್ ಕ್ಲಾಸ್ ನಡಿತಿರ್ಬೇಕಾದ್ರೆನೋ ಅಥವಾ ಮೀಟಿಂಗ್ ನಲ್ಲಿದ್ದಾಗಲೋ, ಯಾರ್ದಾದ್ರೂ ಮಾತು ಕೇಳ್ತಿರಬೇಕಾದ್ರೆ ನಮಗೆ ಗೊತ್ತಿಲ್ದೆ ನಮ್ಮದೇ ಒಂದು ಲೋಕ ಸೃಷ್ಟಿಸಿ ಅದರೊಳಗೆ ವಿಹರಿಸ್ತಾ ಇದ್ಬಿಡ್ತೀವಿ.. ಇದಿರಿಂದ ಸಾಕಷ್ಟು ಬಾರಿ ಮುಜುಗರ ಅವಮಾನ ಬೈಗುಳಗಳನ್ನು ಅನುಭವಿಸಿದರೂ ಈ ಚಾಳೀ ನಮ್ಮನ್ನ ಬಿಡಲ್ಲ..

ಹಗಲು ಕನಸು ಕಾಣೋದನ್ನ ನಿಲ್ಸಿ ಕೆಲಸ ಮಾಡು ಅನ್ನೋ ಬುದ್ಧಿವಾದಗಳನ್ನ ಕೇಳಿ ಕೇಳಿ ಸಾಕಾಗಿದಿಯ.. ಯೋಚ್ನೆ ಮಾಡ್ಬೇಡಿ ಹಗಲು ಕನಸು ಕಾಣೊವ್ರ ಮೆದುಳು ಅತ್ಯಂತ ಬುದ್ದಿ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುತ್ತೆ ಆನೊಂದು ಸಂಶೋಧನೆಯಿಂದ ತಿಳಿದು ಬಂದಿದೆ.


ವಿಜ್ಞಾನಿಗಳು ನೂರು ಜನರನ್ನು ಸೆಲೆಕ್ಟ್ ಮಾಡಿಕೊಂಡು ಒಂದು MRI ಮಷಿನ್ ಒಳಗಡೆ ಮಲಗಿಸಿ ಒಂದು ಬಿಂದುವನ್ನು ೫ ನಿಮಿಷಗಳ ಕಾಲ ದಿಟ್ಟಿಸುವಂತೆ ಹೇಳಿದರು. ಹಗಲು ಕನಸು ಕಾಣಬೇಕಾದರೆ ಮೆದುಳಿನಲ್ಲಾದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿರುವ ಡಿಫಾಲ್ಟ್ ಮೋಡ್ ನೆಟ್ವರ್ಕ್ ಎಂಬ ಭಾಗವು ಅತ್ಯಂತ ಕ್ರಿಯಾಶೀಲವಾಗಿರುವುದು ಕಂಡುಬಂದಿತು. ನಂತರ ಅದೇ ಜನಕ್ಕೆ ಕೆಲವು ಇಂಟಲೆಕ್ಚುಯಲ್ ಮತ್ತು ಕ್ರಿಯೇಟಿವ್ ಎಬಿಲಿಟಿಯ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಿದಾಗ ಹಗಲು ಕನಸು ಕಾಣುವ ಹೆಚ್ಚು ಮಂದಿ ಉತ್ತರ ಕೊಟ್ಟಿದ್ದರಂತೆ. ಇದರ ಪ್ರಕಾರ ಹಗಲು ಕನಸು ಕಾಣುವವರು ಮೆದಳು ಏನನ್ನು ಚಿಂತಿಸದೆ ಇರುವವರ ಮೆದುಳಿಗಿಂತ ಹೆಚ್ಚು ಬುದ್ಧಿ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುವುದು ದೃಢಪಟ್ಟಿದೆ.


ಹಗಲು ಕನಸು ಕಾಣುವುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ… ಯಾವಾಗ ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿದ್ದಲ್ಲಿ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ನಿಮ್ಮ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಹಗಲು ಕನಸು ಕಾಣೋದ್ರಲ್ಲಿ ತಪ್ಪೇನಿಲ್ಲ ಅಲ್ವ…