ನೀವು ನೇರವಾಗಿ ಉಪೇಂದ್ರ ಪಕ್ಷ ಸೇರಬೇಕು ಅಂದ್ರೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ..!

2
1318

ಪ್ರಜಾಕಾರಣ, ಪ್ರಜಾನೀತಿ, ಪ್ರಜಾಕೀಯ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ತಮ್ಮ ಅಭಿಪ್ರಾಯಗಳನ್ನು ತಮ್ಮ ಅಭಿಮಾನಿಗಳ ಮುಂದೆ ವಿಚಾರಗಳನ್ನು ಇಂದು ಹಂಚಿಕೊಂಡಿದ್ದಾರೆ.

ತಮ್ಮ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ನಮ್ಮಲ್ಲಿ ರಾಜಕೀಯ, ರಾಜನೀತಿ, ರಾಜಕಾರಣ, ರಾಜತಂತ್ರ ಎಂಬ ಮಾತುಗಳೇ ಹೆಚ್ಚಾಗಿದೆ. ಇಲ್ಲಿ ‘ರಾಜ’ ಎಂಬು ಏಕೆ ಎಂಬುದೇ ಗೊತ್ತಿಲ್ಲ. ಪ್ರಜೆಗಳನ್ನು ಜನ ಸಾಮಾನ್ಯ, ಸ್ತ್ರೀ ಸಾಮಾನ್ಯ ಎಂದು ಕರೆಯಲಾಗುತ್ತದೆ. ಆದರೆ ಪ್ರಜೆಗಳು ಸಾಮಾನ್ಯ ಅಲ್ಲ. ಆತ ಅಸಮಾನ್ಯ.

source:TeluguMirchi

ನಮ್ಮ ರಾಜ್ಯದ ವಾರ್ಷಿಕ ಬಜೆಟ್ 2 ಲಕ್ಷ ಕೋಟಿ. ಇದು ಕೇವಲ ರಾಜ್ಯದ ಬಜೆಟ್ ಇದರ ಜತೆಗೆ ಕೇಂದ್ರಕ್ಕೂ ತೆರಿಗೆಯ ಮೂಲಕ ಹಣ ನೀಡುತ್ತಿರುವ ನಾವು ಹೇಗೆ ಸಾಮಾನ್ಯರಾಗುತ್ತೇವೆ. ನಾವು ಕೊಟ್ಟ ತೆರಿಗೆ ಹಣದಿಂದ ಪೌರ ಕಾರ್ಮಿಕರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಸಂಬಳ ನೀಡುತ್ತಿದೆ. ಇವರಿಗೆ ಸಂಬಳ ನೀಡಿ ಮಿಕ್ಕ ಹಣವನ್ನು ಪಾರದರ್ಶಕವಾಗಿ ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಹಿಂದಿರುಗಿಸಬೇಕು.

ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷ ಕಟ್ಟಬೇಕು ಅಂದ್ರೆ ಕೋಟಿಗಟ್ಟಲೆ ಹಣ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ನಿಲ್ಲಿಸುವಾಗ ಅವರಿದಂದ ಹಣ ಪಡೆದರೆ, ಆತ ಗೆದ್ದ ಮೇಲೆ ಸುಮ್ಮನಿರುತ್ತಾನಾ? ತಾನು ಹಾಕಿದ ಹಣವನ್ನು ಲಾಭದ ಸಮೇತ ವಾಪಸ್ ಪಡೆಯಲು ಇಚ್ಛಿಸುತ್ತಾನೆ. ಆ ರೀತಿ ನಡೆಯ ಬಾರದು ಎಂಬುದೇ ನನ್ನ ಈ ಒಂದು ಪರಿಕಲ್ಪನೆ. ದುಡ್ಡು ಯಾಕೆ ಬೇಕು? ಜಾತಿ ಯಾರಿಗೆ ಬೇಕು? ಧರ್ಮ ಯಾರಿಗೆ ಬೇಕು? ಜನರಿಗೆ ಮುಖ್ಯವಾಗಿ ಬೇಕಿರುವುದು ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳು ಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ನೀವು ಉಪೇಂದ್ರರವರ ಪಕ್ಷದ ಜೊತೆ ಗುರ್ತಿಸಿಕೊಳ್ಳಬೇಕು ಮತ್ತು ಪಕ್ಷಕ್ಕೆ ನಿಮ್ಮ ಅಭಿಪ್ರಾಯ ತಿಳಿಸಲು ಅಥವಾ ನೀವು ಆ ಪಕ್ಷದ ಅಭ್ಯರ್ಥಿಯಾಗ ಬೇಕು ಅಂದ್ರೆ ನೀವು ನಿಮ್ಮ ಅಭಿಪ್ರಾಯ ಮತ್ತು ಸಮಸ್ಯೆಗಳ ಬಗ್ಗೆ ಪರಿಹಾರ ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಕಳುಹಿಸಿ ಕೊಡಿ.
prajaakaarana1@gmail .com ,prajaakaarana2@gmail .com ,prajaakaarana3@gmail .com
ಮೆಲ್ ಗೆ ನಿಮ್ಮ ಅನಿಸೇಕೆ ಮತ್ತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಬರೆದು ಕಳುಹಿಸಿ.