ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಎಂಥ ಪರಿಸ್ಥಿತಿ ಬಂದಿದೆ ಅಂದ್ರೆ, ಒಂದು ವಾರಕ್ಕೆ ಒಂದು ಕ್ರೆಡಿಟ್-ನಲ್ಲಿ ಇರುವಷ್ಟು ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ ಅಂತೆ!!

0
359

ದೇಶದ ಎಲ್ಲೆಡೆಯಲ್ಲಿ ಪ್ಲಾಸ್ಟಿಕ್-ಗಳದೆ ಸದ್ದು ಒಂದು ಚಿಕ್ಕ ಚಾಕ್ಲೆಟ್ ನಿಂದ ಹಿಡಿದು ಮನೆಯ ಹಾಸಿಗೆಯವರೆಗೆ ಪ್ಲಾಸ್ಟಿಕ್-ಗಳದೆ ರಾಜಕೀಯ. ಅದರಂತೆ ದಿನನಿತ್ಯದ ಕುಡಿಯಿವ ನೀರಿನ ಬಾಟಲ್, ಹೋಟೆಲ್-ಗಳಲ್ಲಿ ಊಟ ಕೊಡುವ ಪ್ಲಾಸ್ಟಿಕ್ ಪೇಪರ್ ಗಳಲ್ಲಿ ಬಿಸಿ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುತ್ತಿವೆ, ಅಷ್ಟೇ ಅಲ್ಲದೆ ಮನೆಯ ತರುವ ಪ್ರತಿಯೊಂದು ವಸ್ತುಗಳು ಪ್ಲಾಸ್ಟಿಕ್ ರೋಗದ ಜೊತೆಗೆ ಬರುತ್ತಿವೆ ಇದರಿಂದ ದಿನನಿತ್ಯವೂ ಮಾನವನ ದೇಹದಲ್ಲಿ ಪ್ಲಾಸ್ಟಿಕ್ ಸೇರುತ್ತಿದೆ. ಈ ವಿಷಯವಾಗಿ ಹಲವು ಜಾಗೃತಿಗಳು ಹರಡಿದರು ಲೆಕ್ಕಿಸದೆ ಜನರು ಪ್ಲಾಸ್ಟಿಕ್ ಜೀವನವನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಅಧ್ಯಯನ ಒಂದು ತಿಳಿಸಿದ್ದು, ಒಂದು ವಾರಕ್ಕೆ 5 ಗ್ರಾಂ ನಷ್ಟು ಸೂಕ್ಷ್ಮ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರುತ್ತಿದೆ ಎಂದು ಅಧ್ಯಯನಯೊಂದು ಆಘಾತಕರ ವಿಷಯವನ್ನು ತಿಳಿಸಿದೆ.

Also read: ಇನ್ಮುಂದೆ ದೇವಾಲಯಗಳಿಗೆ ಪ್ಲಾಸ್ಟಿಕ್‌ ಚೀಲಗಳನ್ನು ತಂದರೆ ದೇವರ ದರ್ಶನ ಇಲ್ಲ; ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿಯ ಆದೇಶ..

ಹೌದು ದಿನದ ಕೆಲಸದಲ್ಲಿ ಜನರಿಗೆ ಅನುಕೂಲವಾಗುವಂತೆ ಪ್ಲಾಸ್ಟಿಕ್ ವಸ್ತುವನ್ನು ಕಂಡು ಹಿಡಿಯಲಾಗಿತ್ತು, ಅದರಂತೆ ಪ್ರತಿಯೊಂದು ವಸ್ತುಗಳು ಪ್ಲಾಸ್ಟಿಕ್-ನಿಂದಲೇ ತಯಾರಾಗುತ್ತಿದ್ದು ಜನರಿಗೆ ಹಗುರವಾಗಿದೆ. ಆದ್ರೆ ಅದೇ ಈಗ ಜೀವನಕ್ಕೆ ಮುಳುವಾಗಿದೆ ಎನ್ನುವ ಸತ್ಯವನ್ನು ಪರಿಸರ ಚಾರಿಟಿ ಡಬ್ಲ್ಯುಡಬ್ಲ್ಯುಎಫ್ ಇಂಟರ್ನ್ಯಾಷನಲ್ ನೇಮಿಸಿದ ಮತ್ತು ಆಸ್ಟ್ರೇಲಿಯಾದ ಯುನಿವರ್ಸಿಟಿ ಆಫ್ ನ್ಯೂ ಕ್ಯಾಸ್ಟಲ್ ನಡೆಸಿದ ಅಧ್ಯಯನಯೊಂದು ಬಯಲಿಗೆಳೆದಿದೆ. ಒಂದು ವಾರಕ್ಕೆ ದೇಹಕ್ಕೆ ಸೇರುವ ಪ್ಲಾಸ್ಟಿಕ್ ಒಂದು ಕ್ರೆಡಿಟ್ ಕಾರ್ಡ್ ತೂಕಕ್ಕೆ ಸಮವಾಗಿದೆ ಎಂದು ತಿಳಿಸಿದೆ.

ಏನಿದು ಅಧ್ಯಯನ?

ಆಸ್ಟ್ರೇಲಿಯಾದ ಯುನಿವರ್ಸಿಟಿ ಆಫ್ ನ್ಯೂ ಕ್ಯಾಸ್ಟಲ್ ನಡೆಸಿದ ಅಧ್ಯಯನ ಜೂನ್ 12 ರಂದು ಪ್ರಕಟವಾಗಿದ್ದು, ಈ ಅಧ್ಯಯನದ ಪ್ರಕಾರ ಪ್ರತಿವರ್ಷ 2000ಗ್ರಾಂ ಸಣ್ಣ ಪ್ಲಾಸ್ಟಿಕ್, ಪ್ರತಿ ವಾರ 21 ಗ್ರಾಂ ಮತ್ತು 250 ಗ್ರಾಂ ನಷ್ಟು ಮಾನವನ ದೇಹಕ್ಕೆ ಸೇರುತ್ತಿದೆ. ಇದು ನೀರಿನ ಟ್ಯಾಪ್-ಗಳಿಂದ ಎಂದು ಸಂಶೋಧಕರು ಕಂಡುಹಿಡಿದಿದ್ದು, ಅಮೇರಿಕ ಮತ್ತು ಭಾರತ ಹೆಚ್ಚಿನ ಅಪಾಯದಲ್ಲಿದೆ ಎಂದು ತಿಳಿಸಿದೆ. ಯುನೈಟೆಡ್ ಸ್ಟೇಟ್-ಗಳಲ್ಲಿ 94.4% ನಷ್ಟು ನೀರಿನ ಟ್ಯಾಪ್-ಗಳು ಮತ್ತು ವಾಟರ್ ಮಾದರಿಗಳು ಪ್ಲಾಸ್ಟಿಕ್ ಫೈಬರ್ ಗಳು ಹೊಂದಿದ್ದು, ಯೂರೋಪ್ ಸ್ಟೇಟ್ ಅಲ್ಲಿ 72.2% ನೀರಿನ ಮಾದರಿಗಳಲ್ಲಿ ಲೀಟರ್-ಗೆ 3.8 ಫೈಬರ್-ಗಳಲ್ಲಿ ಪ್ಲಾಸ್ಟಿಕ್ ಫೈಬರ್ ಗೆ ಹೋಲಿಸಿದರೆ. ಲೀಟರ್ ಒಂದಕ್ಕೆ ಸರಾಸರಿ 9.6 ಫೈಬರ್ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.

ದೇಹಕ್ಕೆ ಪ್ಲಾಸ್ಟಿಕ್ ಸೇರಿಸುವ ಎರಡನೇ ಮೂಲವೆಂದರೆ ಚಿಪ್ಪುಮೀನು, ಇದರ ಜೀರ್ಣಾಂಗ ವ್ಯವಸ್ಥೆಯಲ್ಲಿ ಒಳಗೊಂಡಿದೆ, ಅದರಂತೆ ಬಿಯರ್ ಮತ್ತು ಉಪ್ಪು ಕೂಡ ಕಾರಣವಾಗಿದೆ. ಹಾಗೆಯೇ ಸೂಕ್ಷ್ಮ ಪ್ಲಾಸ್ಟಿಕ್ ಸೇವನೆಯ ಬಗ್ಗೆ 50 ಕ್ಕೂ ಹೆಚ್ಚಿನ ಅಧ್ಯಯನಗಳು ನಡೆದಿವೆ ಇದರೆಲ್ಲ ಪಲಿತಾಂಶವನ್ನು ವಿಶ್ವವಿದ್ಯಾಲಯವು ಕಂಡುಹಿಡಿದ್ದು, ಟರ್ನ್ಯಾಷನಲ್ ಡೈರೆಕ್ಟರ್ ಜನರಲ್ ಮಾರ್ಕೋ ಲ್ಯಾಂಬರ್ಟಿನಿ ಅಧ್ಯಯನ ಸರ್ಕಾರವನ್ನು ಎಚ್ಚರಿಸುತ್ತ ಬಂದಿದ್ದು, ಮುಖ್ಯವಾಗಿ ಪ್ಲಾಸ್ಟಿಕ್ ಸಮುದ್ರಗಳ ಮತ್ತು ಜಲಮಾರ್ಗಗಳನ್ನು ಕಲುಷಿತಗೊಳಿಸುತ್ತ, ಸಮುದ್ರದ ಜೀವಿಗಳನ್ನು ಕೊಳ್ಳುತ್ತಿದೆ. ಅದರಂತೆ ಮಾನವನನ್ನು ಸಾವಿಗೆ ತಳ್ಳುತ್ತಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಶೀಘ್ರವಾಗಿ. ತುರ್ತು ಮತ್ತು ಅವಶ್ಯಕವಾಗಿದೆ.ಕ್ರಮ ಕೈಗೊಳ್ಳಬೇಕು ಎಂದು ಅಧ್ಯಯನ ತಿಳಿಸಿದೆ.

Also read: ನೀವು ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಹಸುಗಳಿಗೆ ಎಷ್ಟು ಮಾರಕ ಅಂತ ಗೊತ್ತಿದ್ಯಾ? ಈ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿತು 80 ಕೆಜಿ ಪ್ಲಾಸ್ಟಿಕ್.

ಗ್ರಾಂಡ್ ವ್ಯೂ ರಿಸರ್ಚ್ ಮೂಲಕ ಕಳೆದ ಎರಡು ದಶಕಗಳಲ್ಲಿ, ಭೂಮಿಯು ಇತಿಹಾಸದಲ್ಲಿ ಹಿಂದೆಂದೂ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಪ್ಲಾಸ್ಟಿಕ್ ಹೊಂದಿದೆ. ಆದರು ಇದನ್ನು ಕಡಿಮೆ ಮಾಡುವ ಯಾವುದೇ ಯೋಚನೆಗಳು ಬರುತ್ತಿಲ್ಲ, 2025 ಒಳಗೆ ಇದು ನಾಲ್ಕರಷ್ಟು ಏರಿಕೆಯಾಗಲಿದೆ. ಇದೆ ಮುಂದುವರೆದರೆ 2025 ರ ಹೊತ್ತಿಗೆ ಸಾಗರದ ಪ್ರತಿ ಮೆಟ್ರಿಕ್ ಟನ್-ಗಳಿಗೆ ಒಂದು ಮೆಟ್ರಿಕ್ ಟನ್ ಪ್ಲಾಸ್ಟಿಕ್ ಹೊಂದಿರುತ್ತದೆ ಎಂದು ಎಚ್ಚರಿಸಿದ್ದಾರೆ.