ದೊಡ್ಡ ಮೌಲ್ಯದ ವಹಿವಾಟುಗಳನ್ನು ನಡೆಸುವ ಮುನ್ನ ಎಚ್ಚರ; ತಪ್ಪು ಆಧಾರ್ ಮಾಹಿತಿ ನೀಡಿದರೆ ಬಿಳ್ಳುತ್ತೆ ಭಾರಿ ದಂಡ!!

0
121

ಆಧಾರ್ ಕಾರ್ಡ್ ಬಂದಾಗಿನಿಂದ ಪ್ರತಿಯೊಂದು ವ್ಯವಹಾರಕ್ಕೆ ಆಧಾರ್ ಬೇಕೇಬೇಕು, ಅದಕ್ಕಾಗಿ ಮೊನ್ನೆ ತಾನೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯಲ್ಲಿ, ಆದಾಯ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಕಡ್ಡಾಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈಗೀಗ ಎಲ್ಲದಕ್ಕೂ ಆಧಾರ್ ಕಾರ್ಡ್ ಮಾನ್ಯತೆ ಮಾಡಲಾಗಿದೆ, ಹಾಗಂತ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವಾಗ ತಪ್ಪು ಆಧಾರ್ ಸಂಖ್ಯೆ ನಮೂದಿಸಿದರೆ ಭಾರಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Also read: ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಂಪರ್; ಜುಲೈ ಅಂತ್ಯಕ್ಕೆ ಸಿಗಲಿದೆ ನಿರೀಕ್ಷೆಗಿಂತ ಹೆಚ್ಚಿನ ವೇತನ..

ಹೌದು ದೊಡ್ಡ ಮೊತ್ತದ ವ್ಯವಹಾರ ಸೇರಿದಂತೆ ಮನೆ ಅಥವಾ ಕಾರು ಖರೀದಿ, ವಿದೇಶ ಪ್ರವಾಸ ಮತ್ತು ಹಣ ಹೂಡಿಕೆ ಹೀಗೆ ದೊಡ್ಡ ಮೌಲ್ಯದ ವಹಿವಾಟುಗಳನ್ನು ನಡೆಸುವಾಗ ಪಾನ್ ನಂಬರ್ ಬದಲು ಆಧಾರ್ ಸಂಖ್ಯೆಯನ್ನು ನಮೂದಿಸಲು ಅವಕಾಶ ನೀಡಲಾಗಿದೆ. ಆದರೆ ನೀವು ತಪ್ಪಾಗಿ ಆಧಾರ್ ಸಂಖ್ಯೆಯನ್ನು ನೀಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ, ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತಂದು, ಅಧಿಸೂಚನೆ ಹೊರಡಿಸಿದ ಬಳಿಕ ಈ ಹೊಸ ದಂಡನಾ ಕ್ರಮ 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಿಯಮಕ್ಕೆ ಕಾರಣ?

ಪಾನ್​ ಕಾರ್ಡ್​ ಇಲ್ಲದವರು ಆಧಾರ್ ಕಾರ್ಡ್​​​ ಮೂಲಕ ಐ-ಟಿ ರಿಟರ್ನ್ಸ್​​ ಸಲ್ಲಿಸಬಹುದು. ಅಲ್ಲದೆ, ಪಾನ್​ ಕಾರ್ಡ್​​ ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆಯೋ ಅಲ್ಲಿ ಆಧಾರ್​ ಕಾರ್ಡ್​​ ಬಳಕೆ ಮಾಡಬಹುದು ಇದು ಜಾರಿಗೆ ಬರಲು ತೆರಿಗೆ ಇಲಾಖೆ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕಿದೆ. ಇದರ ಜೊತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ವೇಳೆ ತಪ್ಪು ಆಧಾರ್​ ಸಂಖ್ಯೆ ನಮೂದಿಸಿದರೆ ದಂಡ ವಿಧಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಹಾಗಾಗಿ, ಸೆಪ್ಟೆಂಬರ್​ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಅದರಂತೆ ಅಧಿಕ ಮೌಲ್ಯದ ವಹಿವಾಟಿನ ವೇಳೆ ನಿಖರವಾದ ಆಧಾರ್ ಸಂಖ್ಯೆಯನ್ನು ನಮೂದಿಸಲು ವಿಫಲವಾಗುವ ವ್ಯಕ್ತಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಹಾಗೂ ಈ ಗುರುತಿನ ಸಂಖ್ಯೆಯನ್ನು ದೃಢೀಕರಿಸಬೇಕಾದ ವ್ಯಕ್ತಿಗೂ ಇಷ್ಟೇ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಂಡ ವಿಧಿಸುವ ಆದೇಶಕ್ಕೆ ಮುನ್ನ ವ್ಯಕ್ತಿಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ.

Also read: ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

ಪಾನ್ ಹಾಗೂ ಆಧಾರ್ ಸಂಖ್ಯೆಯನ್ನು ಪರ್ಯಾಯವಾಗಿ ಬಳಸುವ ಸಂಬಂಧ ಜು. 5ರಂದು ಮಾಡಿದ ಬಜೆಟ್ ಘೋಷಣೆಗೆ ಅನುಸಾರವಾಗಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ. 120 ಕೋಟಿ ಭಾರತೀಯರು ಇದೀಗ ಆಧಾರ್ ಸಂಖ್ಯೆ ಹೊಂದಿದ್ದಾರೆ. ಆದರೆ ಪಾನ್ ಸಂಖ್ಯೆ ಹೊಂದಿರುವವರು 22 ಕೋಟಿ ಮಾತ್ರ ಎನ್ನುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದರು. ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಘೋಷಿಸಿದ್ದರು. ಅದರಂತೆ ದೇಶದಲ್ಲಿ 120 ಕೋಟಿ ಆಧಾರ್​ ಕಾರ್ಡ್​​ ನೀಡಲಾಗಿದೆ. 41 ಕೋಟಿ ಜನರು ಪಾನ್​ಕಾರ್ಡ್​​ ಹೊಂದಿದ್ದಾರೆ. ಇದರಲ್ಲಿ 22 ಕೋಟಿ ಪಾನ್​ ಕಾರ್ಡ್​​-ಆಧಾರ್​ ಕಾರ್ಡ್​ ಲಿಂಕ್​ ಆಗಿವೆ.