ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದಿಂದ ಭರ್ಜರಿ ರಿಯಾಯತಿ..

0
476

ಬೆಂಗಳೂರು ಎಂದ ತಕ್ಷಣ ಮೊದಲಿಗೆ ನೆನಪು ಬರುವುದು ಇಲ್ಲಿನ ಟ್ರಾಪಿಕ್ ಮತ್ತು ಪ್ರಯಾಣ. ಅದರಲ್ಲಿ ಕಡಿಮೆ ದರದಲ್ಲಿ ಸುರಕ್ಷಿತವಾದ ಪ್ರಯಾಣ ಎಂದರೆ BMTC ಬಸ್ ಗಳ ಪ್ರಯಾಣ. ಅದರಲ್ಲಿ ನೋಡಲು ಮತ್ತು ಜರ್ನಿ ಮಾಡಲು ಮನಸೆಳೆಯುವ ಬಸ್ ಅಂದ್ರೆ ವಜ್ರ ಬಸ್. ಇವುಗಳು ಹೆಸರಿಗೆ ತಕ್ಕಹಾಗೆನೆ ಚಾರ್ಜ್ ಇರುತ್ತೆ ಆದಕಾರಣ ಪ್ರವಾಸಿಗರು ಮತ್ತು ದಿನನಿತ್ಯದ ಪ್ರಯಾಣಿಕರಿಗೆ ಈ ವಜ್ರ ಬಸ್ ಗಳಲ್ಲಿ ಪ್ರಯಾಣಿಸುವುದು ಸ್ವಲ್ಪ ದುಬಾರಿಯಾಗುತ್ತೆ. ಇದೆ ಕಾರಣಕ್ಕೆ ಸುಮಾರು ಜನರು ವಜ್ರಬಸ್- ನಲ್ಲಿ ಹೋಗದೆ ಬೇರೊಂದು ಬಸ್ ಗಳಲ್ಲಿ ಹೋಗುತ್ತಿದರು. ಇಂತಹ ಪ್ರಯಾಣಿಕರಿಗೆ BMTC ಭರ್ಜರಿ ಆಪರ್ ಒಂದನ್ನು ನೀಡಿದೆ ಅದು ಏನ್ ಅಂದ್ರೆ ಇಲ್ಲಿದೆ ನೋಡಿ.

ಹೌದು ಡಿಸೆಂಬರ್ ತಿಂಗಳು ಕ್ರಿಸ್‌ಮಸ್‌ ಇರುವ ಕಾರಣ ಹೆಚ್ಚಿನ ರಜೆಗಳಿವೆ ಆದರಿಂದ ಬೆಂಗಳೂರಿನತ್ತ ಪ್ರತಿವರ್ಷದಂತೆ ಹೆಚ್ಚಿನ ಜನರು ಬರುವುದು ಸಾಮಾನ್ಯವಾಗಿದೆ. ಇಂತಹ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ವಜ್ರ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಡಿಜಿಟಲ್‌ ಮಾದರಿ ದೈನಿಕ ಪಾಸ್‌ ಖರೀದಿಸಿದಲ್ಲಿ. 140 ಬಸ್‌ಪಾಸ್‌ಗೆ ಶೇ.25ರವರೆಗೆ ರಿಯಾಯಿತಿ ಘೋಷಿಸಿದ್ದು, ಜ.1ರ ವರೆಗೂ ಪ್ರಯಾಣಿಕರಿಗೆ ಈ ಕೊಡುಗೆ ಲಭ್ಯವಾಗಲಿದೆ.

Online- ಟಿಕೆಟ್ ಪಡೆಯುವುದು ಹೇಗೆ?

ಬಿಎಂಟಿಸಿಯು ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಸೀರೀಸ್‌ 5 ಲ್ಯಾಬ್ಸ್‌ ಕಂಪನಿ ಸಹಯೋಗದಲ್ಲಿ ಇತ್ತೀಚೆಗೆ ‘ನಮ್ಮ ಪಾಸ್‌’ ಯೋಜನೆ ಆರಂಭಿಸಿದೆ. ಡಿಜಿಟೆಲ್‌ ಪಾಸ್‌ಗಾಗಿ ಸೀರೀಸ್‌ 5 ಲ್ಯಾಬ್ಸ್‌ ಕಂಪನಿ ‘ರಿಸಚ್‌ರ್‍’ ಆ್ಯಪ್‌ ರೂಪಿಸಿದೆ. Play store -ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ಕೇವಲ ವಜ್ರ ಬಸ್‌ ದಿನದ ಪಾಸು ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆ್ಯಪ್‌ ಮೂಲಕ ಪ್ರಯಾಣಿಕರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ, ನಿಗದಿತ ಗುರುತಿನ ಚೀಟಿ(ಆಧಾರ್‌, ಪ್ಯಾನ್‌ಕಾರ್ಡ್‌, ವೋಟರ್‌ ಐಡಿ ಅಥವಾ ಚಾಲನಾ ಪರವಾನಗಿ) ಮತ್ತು ಗುರುತಿನ ಚೀಟಿ ಸಂಖ್ಯೆ ನಮೂದಿಸಿ ಪಾಸ್‌ ಮೊತ್ತ .140 ಗಳನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕು. ತದನಂತರ ಪ್ರಯಾಣಿಕರ ಹೆಸರಿನಲ್ಲಿ ಡಿಜಿಟಲ್‌ ಪಾಸ್‌ ಮುದ್ರಣವಾಗಲಿದೆ.

ಹೀಗೆ ಪ್ರತಿ ದಿನ ನಿಗದಿತ ಸಂಖ್ಯೆಯ ರಿಯಾಯಿತಿ ಪಾಸ್‌ಗಳನ್ನು ಆ್ಯಪ್‌ ಮೂಲಕ ಮಾರಾಟ ಮಾಡಲಾಗುವುದು. ಬೆಳಗ್ಗೆ 8 ರೊಳಗೆ ಪಾಸ್‌ ಖರೀದಿಸುವವರಿಗೆ ಈ ಕೊಡುಗೆ ಲಭ್ಯವಾಗಲಿದೆ. ಒಮ್ಮೆ ಮುದ್ರಣವಾದ ಡಿಜಿಟಲ್‌ ಪಾಸ್‌ 3.15 ನಿಮಿಷ ಮೊಬೈಲ್‌-ನಲ್ಲಿ ಕಾಣಿಸುತ್ತದೆ ನಂತರ ಕ್ಲೋಸ್ ಆಗುತ್ತೆ. ಮತ್ತೆ ಮುಂದಿನ ಪ್ರಯಾಣ ಹೇಗೆ ಅಂತ ಹೆದರುವ ಅವಶ್ಯಕತೆ ಇಲ್ಲ. ಮತ್ತೆ ಪ್ರಯಾಣಿಕರು ಮತ್ತೊಮ್ಮೆ ವೆಬ್‌ಸೈಟ್‌ಗೆ ಭೇಟಿ ನೀಡಿ ‘ಶೋ ಪಾಸ್‌’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವೇಳೆ ಮತ್ತೊಮ್ಮೆ ಮೊಬೈಲ್‌ ನಂಬರ್‌ ನಮೂದಿಸಬೇಕು. ಬರುವಂತಹ ಒನ್‌ ಟೈಂ ಪಾಸ್‌ವರ್ಡ್‌ ನಮೂದಿಸಿದರೆ ಡಿಜಿಟಲ್‌ ಪಾಸ್‌ ಮತ್ತೆ ಲಭ್ಯವಾಗಲಿದೆ.

ಡಿಜಿಟಲ್‌ ಪಾಸ್‌ ಟೈಮಿಂಗ್?

ಕಾಗದದ ಪಾಸ್‌ ಮಾದರಿಯಲ್ಲೇ ದಿನದಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಡಿಜಿಟಲ್‌ ಪಾಸ್‌ ಅವಧಿಯಿರಲಿದೆ ಎಂದು ಬಿಎಂಟಿಸಿಯ ತಿಳಿಸಿದೆ. ಆದರಿಂದ ಪ್ರಯಾಣಿಕರು BMTC ಯ ಈ ಕೊಡುಗೆಯನ್ನು ಉಪಯೋಗ ಮಾಡಿಕೊಂಡು A/c ಒಳಗೊಂಡ ವಜ್ರ ಬಸ್- ಗಳಲ್ಲಿ ಪ್ರಯಾಣಿಸಿ ಕ್ರಿಸ್‌ಮಸ್‌ ಹಬ್ಬವನ್ನು ಸಿಲಿಕಾನ್ ಸಿಟಿ ತುಂಬೆಲ್ಲ ಆಚರಣೆ ಮಾಡಿ.