ಭಾರತದ ಅತಿ ಕಿರಿಯ ಪೈಲೆಟ್, ಕಾಶ್ಮೀರದವಳು…!

0
1345

ಕರ್ಗಿಲ್ ಕದನ.. ಉಗ್ರರ ನುಸುಳುವಿಕೆ.. ಭಾರತದ ಸೇನೆ ನಡೆಸಿದ ಗುಂಡಿನ ಚಕಮಕಿ.. ಹೀಗೆ ಜಮ್ಮು ಮತ್ತು ಕಾಶ್ಮೀರ ಅಂದರೆ ನಮಗೆ ಥಟ್ಟನೆ ನೆನಪಾಗುವುದು ಕದನ ಹೋರಾಟ, ಗುಂಡಿನ ಸದ್ದು.

ಆದರೆ ಗುಂಡಿನ ಸದ್ದು ಮಾತ್ರ ಕೇಳುವ ಈ ಕಾಶ್ಮೀರದ ಕಣಿವೆಯಲ್ಲಿ ಸಾಧನೆಯ ಮಾತೆಲ್ಲಿ? ಎಂದು ಕೇಳುವಂತಿಲ್ಲ. ಏಕೆಂದರೆ ಭಾರತದ ಅತ್ಯಂತ ಕಿರಿಯ ವಿಮಾನದ ಪೈಲೆಟ್ ಈ ಊರಿನವಳೆ.

ಹೆಸರು ಆಯೆಷಾ ಅಜಿಜ್. ವಯಸ್ಸು ೨೦. ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಖ್ವಾಜಾ ಭಾಗ್ ನಿವಾಸಿ. ಮುಸ್ಲಿಂ ಮನೆತನದವಳು.

aziz2_1462708366
ಕನಸಿನ ಬೆನ್ನೇರಿ…

ಬಾಲ್ಯದಲ್ಲಿ ಕಂಡ ಕನಸನ್ನು ಯೌವನಕ್ಕೆ ಕಾಲಿಡುತ್ತಿದ್ದಂತೆ ನನಸು ಮಾಡಿಕೊಂಡ ಚತುರೆ ಆಯೆಷಾ. ಬಾಲ್ಯದಲ್ಲಿ ಶಾಲೆಗೆ ಹೋಗುತ್ತಿದ್ದಾಗ ತಲೆಯ ಮೇಲೆ, ಆಕಾಶದಲ್ಲಿ ಗುಡುಗಿನಂತಹ ಸದ್ದು ಮಾಡಿ ಹಾರಾಡುತ್ತಿದ್ದ ವಿಮಾನ ನೋಡಿ ನಾನು ಪೈಲೆಟ್ ಆಗಬೇಕು ಎಂದು ಕನಸು ಕಾಣುತ್ತಿದ್ದಳು. ಸ್ವಲ್ಪ ಸಮಯದ ನಂತರ ಅಣ್ಣನೊಂದಿಗೆ ಮುಂಬೈಗೆ ತೆರಳಬೇಕಾಯಿತು. ಹಾಗೆ ಕಾಶ್ಮೀರ ಮತ್ತು ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತಿತ್ತು. ವರ್ಷದಲ್ಲಿ ಕನಿಷ್ಠ ಮೂರು ಬಾರಿ ಈ ಅವಕಾಶ ಲಭಿಸುತ್ತಿತ್ತು. ಅವಗೆಲ್ಲಾ ಈಕೆಯ ಕನಸು ಗರಿಗೆದರತೊಡಗಿತು.

ಆದರೆ ಇದು ಗಂಡಸರು ಮಾಡುವ ಕೆಲಸ. ಹೆಂಗಸರಿಗೆ ಇದು ಆಗದ ಕೆಲಸ ಅಂತೆಲ್ಲಾ ಮಾತಾಡುವುದು ಕೇಳಿಸುತ್ತಿತ್ತು. ಆದರೆ ಈಗ ಎಲ್ಲರ ನಿರೀಕ್ಷೆ ಮಾಡಿದ್ದಕ್ಕಾಗಿ ಆಕಾಶದಲ್ಲಿ ತೇಲುತ್ತಿದ್ದಾಳೆ.

ಪ್ರತಿಬಾರಿಯೂ ಅಣ್ಣನೊಂದಿಗೆ ವಿಮಾನದಲ್ಲಿ ಕುಳಿತಾಗ ಟೇಕಾಫ್ ಮತ್ತು ಲ್ಯಾಂಡಿಂಗ್ ತುಂಬಾ ಇಷ್ಟಪಟ್ಟು ಕಿಟಕಿಯಲ್ಲಿ ಹೊರಗೆ ನೋಡುತ್ತಾ ಕುಳಿತಿರುತ್ತಿದ್ದೆ. ಆದರೆ ಅಣ್ಣ ಭಯದಿಂದ ಮಲಗಿಬಿಡುತ್ತಿದ್ದ ಎಂದು ತನ್ನ ಬಾಲ್ಯದ ನೆನಪನ್ನು ಆಯೇಷಾ ಹೇಳಿಕೊಂಡಿದ್ದಾಳೆ.

ನಾಸಾಗೆ ಭೇಟಿ

ಮುಂಬೈನ ಕ್ರೈಸ್ಟ್ ಚರ್ಚ್ ಶಾಲೆಯಲ್ಲಿ ೧೨ನೇ ತರಗತಿ ಓದುತ್ತಿದ್ದಾಗ ನಾಸಾಗೆ ಭೇಟಿ ಮಾಡಲು ಮೂವರನ್ನು ಆಯ್ಕೆ ಮಾಡಲಾಗಿತ್ತು. ಇಬ್ಬರು ಹುಡುಗರೊಂದಿಗೆ ಆಯೇಷಾ ಕೂಡ ಆಯ್ಕೆಯಾಗಿದ್ದಳು. ಈ ಸಂದರ್ಭದಲ್ಲಿ ಸ್ಕೂಬಾ ಡೈವ್ ಪರಿಣಿತ ಜಾನ್ ಮೆಕ್‌ಬ್ರೈಡ್ ಅವರನ್ನು ಭೇಟಿ ಮಾಡಿದ ಆಯೆಷಾ ಸಂತಸಕ್ಕೆ ಪಾರವೇ ಇರಲಿಲ್ಲ.

೨೦೧೪ರಲ್ಲಿ ವ್ರೋಲಿ ಪ್ರವಾಸಕ್ಕೆ ತೆರಳಿದ್ದಾಗ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿ ಮಾಡಿದಳು. ಆಗ ನಾಸಾದಲ್ಲಿನ ಸುನೀತಾ ವಿಲಿಯಮ್ಸ್ ಅನುಭವ ಕೇಳಿದ ಮೇಲೆ ಸಾಧನೆಗೆ ಎಲ್ಲೆ ಎಲ್ಲಿದೆ ಎಂದು ಅನಿಸಿತು. ಕನಸುಗಳನ್ನು ಬೆಂಬತ್ತುವ ಗುರಿ ಆಗಲೇ ಮೂಡಿದ್ದು ಅನ್ನುತ್ತಾರೆ ಆಯೆಷಾ.

3368456036

ಕುಟುಂಬದ ನೆರವು

ಯಾರೇ ಸಾಧನೆ ಮಾಡಿದರೂ ಅವರ ಕುಟುಂಬದ ಸಹಕಾರ ಅತ್ಯಗತ್ಯ. ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರಿಗೆ ಇರುತ್ತಿದ್ದ ಕಡಿವಾಣ ಆಯೆಷಾಗೆ ಇರಲಿಲ್ಲ. ಅದಕ್ಕೆ ಕಾರಣ ಅವರ ಹೆತ್ತವರು. ೧೦ಬನೇ ತರಗತಿ ಪೂರೈಸಿದ ನಂತರ ೧೫ನೇ ವಯಸ್ಸಿಗೆ ವಿಮಾನ ಹಾರಾಟದ ತರಬೇತಿಗೆ ಸೇರುವ ಆಸೆಯನ್ನು ಹೆತ್ತವರು ಪೂರೈಸಿದರು. ೧೬ ವರ್ಷ ಮೂರು ತಿಂಗಳು ಆಗಿದ್ದಾಗ ಮೊದಲ ಬಾರಿ ಕಾಕ್‌ಪಿಟ್‌ನಲ್ಲಿ ಕೂರುವ ಅನುಭವ ದೊರೆಯಿತು. ೨೦೧೨ ಜನವರಿಯಲ್ಲಿ ಸೆಸ್ನಾಗೆ ವಿಮಾನ ಹಾರಾಟ ನಡೆಸಿದಳು.

ಸಾಧನೆ

೪೦ ಜನ ವಿದ್ಯಾರ್ಥಿಗಳ ಜತೆ ಆಯೆಷಾ ಪೈಲೆಟ್ ತರಬೇತಿಗೆ ಸೇರಿಕೊಂಡಾಗ ಎಲ್ಲರೂ ಮಗು ಎಂದೇ ನಡೆಸಿಕೊಳ್ಳುತ್ತಿದ್ದರು. ಮೂವರು ಮಹಿಳೆಯರೊಂದಿಗೆ ಕಾಕ್‌ಪಿಟ್‌ನಲ್ಲಿ ಮೊದಲ ಬಾರಿ ಕುಳಿತಾಗ ಅದೇನೋ ವಿಶೇಷ ಅನುಭವ. ಅತ್ಯಂತ ಕಿರಿಯ ಪೈಲೆಟ್ ಎನಿಸಿಕೊಂಡಿರುವ ಆಯೆಷಾ ಇದುವರೆಗೆ ೨೦೦ ಗಂಟೆ ಹಾರಾಟ ನಡೆಸಿದ್ದಾಳೆ. ಅಕ್ಟೋಬರ್ ೩ಕ್ಕೆ ಆಯೆಷಾಗೆ ೧೮ ವರ್ಷ ತುಂಬಿದಾಗ ಲೈಸೆನ್ಸ್ ಲಭಿಸಿತು.