ಫೇಸ್ಬುಕ್ ನಲ್ಲಿ ಅವಮಾನಕರವಾಗಿ ದೇವರ ಬಗ್ಗೆ ಟೀಕೆ ಮಾಡಿದಕ್ಕೆ ಮನೆಯವರು ಅಸ್ವಸ್ಥ , ಮುಂದೇನಾಯ್ತು ನೋಡಿ…

0
549

ಫೇಸ್ಬುಕ್ ನಲ್ಲಿ ಅವಮಾನಕರವಾಗಿ ಟೀಕೆ ಮಾಡಿದಕ್ಕೆ ಮನೆಯವರು ಅಸ್ವಸ್ಥ , ಎಷ್ಟೇ ಬುದ್ದಿ ಹೇಳಿದರು ಕೇಳದ ಇವನಿಗೆ ದೇವರೇ ಬುದ್ದಿ ಕಳಿಸಿದ. ಅಷ್ಟಕ್ಕೂ ಯಾವ ದೇವರು , ಎಲ್ಲಿದೆ ಆ ದೇವಸ್ಥಾನ ಅಂತೀರಾ. ಅದು ತುಳುನಾಡಿನ ಕಾರಣಿಕದ ಪ್ರಭಾವಿ ದೈವ , ಬೇಡಿದ ಇಷ್ಟಾರ್ಥಗಳನ್ನು ಪೂರೈಸುವ ದೇವರು ಎಂದೇ ಹೆಸರುವಾಸಿ , ತುಳುನಾಡಿನ ಕೊರಗಜ್ಜ.

ಈ ಘಟನೆ ನಡೆದದ್ದು ಎರಡು ತಿಂಗಳ ಹಿಂದೆ , ಫೇಸ್ ಬುಕ್ ನಲ್ಲಿ ಬಾಯಿಗೆ ಬಂದಂತೆ ತುಳುನಾಡಿನ ಕೊರಗಜ್ಜನ ಬಗ್ಗೆ ನಿಂದಿಸಿದ್ದ ಈ ಯುವಕನ ಹೆಸರು ಮನೋಜ್ ಪಂಡಿತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ.

ಈಗ ಇವನ ತಾಯಿ ಮತ್ತು ಇವನಿಗೂ ಅನಾರೋಗ್ಯ ಶುರುವಾಗಿದೆ ಆದ ಕಾರಣ ಅವನು ಮಾಡಿದ ತಪ್ಪು ಅರಿವಾಗಿ , ಮಂಗಳೂರಿನ ಪದವಿನಂಗಡಿಯ ಬಂಗೇರ ಎಂಬವರು ಆರಾಧಿಸೋ ಕೊರಗಜ್ಜನ ಗುಡಿಯ ಮುಂದೆ ಈತ ತಪ್ಪೊಪ್ಪಿಕೊಂಡು ಉದ್ದಂಡ ನಮಸ್ಕಾರ ಹಾಕಿ ಕ್ಷಮೆ ಯಾಚಿಸಿದ.

ಇದಕ್ಕೂ ಮೊದಲು ಮಂಗಳೂರಿನ ಹಿಂದು ಹಿತರಕ್ಷಣಾ ಸಮಿತಿ ಎನ್ನುವ ಸಂಘಟನೆ ಮನೋಜ್ ಪಂಡಿತ್ ವಿರುದ್ಧ ಬಂದರು ಠಾಣೆಯಲ್ಲಿ ದೂರು ಕೂಡ ದಾಖಲಿಸಿತ್ತು. ಫೇಸ್ಬುಕ್ ನಲ್ಲಿಯೂ ಇವನ ಉದ್ದಟ್ಟತನಕ್ಕೆ ಜನ ಸರಿಯಾಗಿಯೇ ಉತ್ತರ ನೀಡಿದ್ದರು ಆದರೆ ಇವನು ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ , ಈವಾಗ ಇವನಿಗೆ ಬುದ್ದಿಬಂದಂತಿದೆ.

ಹೀಗೆ ದೇವರ ಬಗ್ಗೆ ನಿಂದನೆ ಮಾಡುವವರಿಗೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.