ಮತ್ತೊಂದು ಟಿಕ್‍ಟಾಕ್ ಅವಘಡ; ಸಾಹಸ ಮಾಡಲು ಹೋಗಿ ಕತ್ತು ಮುರಿದುಕೊಂಡ ಯುವಕನ ವಿಡಿಯೋ ವೈರಲ್..

0
554

ದೇಶದಲ್ಲಿ ಬಾರಿ ಅಪಾಯ ತರುತ್ತಿರುವ ಟಿಕ್‍ಟಾಕ್ App ಮತ್ತೊಂದು ಅವಘಡಕ್ಕೆ ಕಾರಣವಾಗಿದ್ದು, ಟಿಕ್‍ಟಾಕ್ ಪ್ರಿಯರನ್ನು ಬೆಚ್ಚಿ ಬಿಳಿಸಿದ್ದು, ಟಿಕ್‍ಟಾಕ್-ನಲ್ಲಿ ಸಾಹಸ ಮಾಡಲು ಹೋದ ಯುವಕ ದೊಡ್ಡ ಅಪಾಯದಲಿ ಸಿಲುಕಿದ್ದಾನೆ, ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡಲು ಹೋದ ಹುಡುಗ ಅದು ಯಾವ ರೀತಿಯಲ್ಲಿ ಬಿದಿದ್ದಾನೆ ಎಂದರೆ ಬಿದ್ದ ರಬಸಕ್ಕೆ ಕತ್ತು ಮುರಿದು ಚಿದ್ರವಾಗಿ ಬೆನ್ನ ಮೂಳೆ ಸಹ ಮುರಿದು ಹೋಗಿದ್ದು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದು, ಯುವಕ ಕತ್ತು ಮುರಿದುಕೊಂಡ ವೀಡಿಯೊ ಬಾರಿ ವೈರಲ್ ಆಗಿದೆ.

ವೀಡಿಯೊ ಕೃಪೆ: Public tv

ಏನಿದು ಟಿಕ್‍ಟಾಕ್ ಅವಘಡ?

ಮಾರಕ app ಎಂದು ಹೊರಡುತ್ತಿರುವ ಟಿಕ್‍ಟಾಕ್-ಗೆ ಯುವಕ-ಯುವತಿಯರು ಅಪಾಯಕ್ಕೆ ಮೋಸಕ್ಕೆ ಬಲಿಯಾಗುತ್ತಿದ್ದಾರೆ, ಕೆಲವರಂತೂ ಈಗಾಗಲೇ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈಕಾಲು ಕಳೆದುಕೊಂಡು ಮೂಲೆಗುಂಪಾಗಿದ್ದಾರೆ. ಇದರ ಭಯದಲ್ಲೇ ಇದ್ದ ಜನರಿಗೆ ತುಮಕೂರಿನಲ್ಲಿ ನಡೆದ ಮತ್ತೊಂದು ಘಟನೆ ಭಯಹುಟ್ಟಿಸಿದೆ. ಹೌದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಯುವಕನೊಬ್ಬ ಟಿಕ್‍ಟಾಕ್ ಮಾಡಲು ಹೋಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಕುಮಾರ್ ಟಿಕ್‍ಟಾಕ್ ಮಾಡುವಾಗ ಕುತ್ತಿಗೆ, ಮತ್ತು ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಆಗಿದ್ದು ಏನು?

ಗಾಯಾಳು ಕುಮಾರ್ ಸ್ನೇಹಿತನ ಜೊತೆ ಟಿಕ್‍ಟಾಕ್ ನಲ್ಲಿ ಸಾಹಸ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

Also read: ಪಾಲಕರೆ ಎಚ್ಚರ; ವಿದೇಶದಿಂದ ಲೂಸಿಯಾ ಮಾತ್ರೆಗಳು ನಿಮ್ಮ ಮಕ್ಕಳ ಕೈ ಸೇರುತ್ತಿವೆ; ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್..

ಕೆಲವು ದಿನಗಳ ಹಿಂದೆವೂ ಕೂಡ ಇದೆ ರೀತಿಯ ಘಟನೆ ನಡೆದಿದ್ದು, ಬಾಲಕನೊಬ್ಬ ಗನ್ ತೆಗೆದುಕೊಂಡು ಟಿಕ್‍ಟಾಕ್ ಮಾಡುವಾಗ ಶೂಟ್ ಮಾಡಿಕೊಂಡ ಬಾಲಕನೊಬ್ಬ ಮೃತಪಟ್ಟಿದ್ದನು. ಇನ್ನೂ ಟಿಕ್‍ಟಾಕ್ ಮಾಡೋದು ಬಿಟ್ಟು ಮಕ್ಕಳನ್ನು ನೋಡಿಕೋ ಎಂದು ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಗೃಹಿಣಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ರೀತಿ ಟಿಕ್‍ಟಾಕ್ ನಿಂದ ಅನೇಕ ಘಟನೆಗಳು ನಡೆಯುತ್ತಿದೆ. ಕೇವಲ ಮನರಂಜನೆಗಾಗಿ ಬರು app-ಗಳಿಂದ ಇಂತಹ ದುರ್ಘಟನೆ ನಡೆಯುತ್ತಿರುವುದು ಮನೆಯ ಮಂದಿಗೆ ಭಯಹುಟ್ಟಿಸಿದೆ. ಅದರಂತೆ ಪಾಲಕರು ಕೂಡ ಎಚ್ಚರವಹಿಸಿ ನಿಮ್ಮ ಮಕ್ಕಳು ಇಂತಹ ಸಾಹಸಕ್ಕೆ ಮುಂದಾಗಿದರೆ ಬುದ್ದಿಹೇಳಿ ಆಗುವ ಅಪಾಯವನ್ನು ಇಗಲೇ ತಡೆಯುವುದು ಒಳ್ಳೆಯದು.