ಯೂಟ್ಯೂಬ್-ನಿಂದ ಪ್ರೇರಿತರಾಗಿ ದರೋಡೆಕೋರರಾದ ಪದವೀಧರರು!!

0
618
ನಾವು ಬಳಸುವ ಸೌಲಭ್ಯವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೋ ಹಾಗೆ ಪ್ರತಿಫಲವನ್ನು ನೀಡುತ್ತವೆ. ಕೆಲವು ಜನ ಯೂಟ್ಯೂಬ ನೋಡಿ ಅಡುಗೆ, ಹೊಲಿಗೆ, ಟ್ಯೂಶನ್ ಹೀಗೆ ಉಪಯೋಗ ಪಡೆದು ಜ್ಞಾನ ವೃದ್ಧಿಸಿಕೊಳ್ಳುವರು ಇದ್ದಾರೆ. ಆದರೆ ಇವರೇ ಬೇರೆ ಇವರ ಸ್ಟೈಲ್ ಬೇರೆ.
ಐಶಾರಾಮಿ ಜೀವನ… ಕುಳಿತಲ್ಲೇ ಹಣವನ್ನು ಪಡೆಯುವು ಬುದ್ಧಿಯನ್ನು ಬೆಳಿಸಿಕೊಂಡ ವಿದ್ಯಾವಂತ ಯುವಕರು ತಮ್ಮ ಜ್ಞಾನದಿಂದ ಕುಟುಂಬವನ್ನು ನಡೆಸುವುದನ್ನು ಬಿಟ್ಟು, ಶಾರ್ಟ್ ಕಟ್ ಹಿಡಿದಿದ್ದಾರೆ. ಎಸ್ ಇವರು ಯೂಟ್ಯೂಬ್ ನೋಡಿ ದರೋಡೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಇವರ ಯೋಜನೆ ಇವರ ಕೈ ಸುಟ್ಟಿದೆ.
ಪ್ರಕರಣ ಏನು? ಇವರು ನೋಡಲು ವಿದ್ಯಾವಂತರು.. ಸಭ್ಯರಂತೆ ಡ್ರೆಸ್ ಮಾಡಿಕೊಂಡಿರುತ್ತಾರೆ.. ಆದರೆ ಮನದಲ್ಲಿ ಮಾತ್ರ ಕೊಳಕು ಯೋಚನೆ. ನಾವು ನವ ವಿವಾಹಿತರು ಎಂದು ಮನೆ ನೋಡುತ್ತಾರೆ. ಇವರು ಹೊಸೂರಿನ ಲಕ್ಷಿ ಮತ್ತು ಸುರೇಶ್ ದಂಪತಿ ಮನೆಯಲ್ಲಿ ಮಾರ್ಚ್ ೭ ರಂದು ಟು-ಲೆಟ್ ಬೋರ್ಡ್ ನೋಡಿ ಎಂಜಿನಿಯರ್‌ಗಳಾದ ಸುವೇತ ಮತ್ತು ಯತೀಶ್ ಮನೆ ಬಾಡಿಗೆ ಕೇಳುವ ನೆಪದಲ್ಲಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಇವರು ಮನೆ ನೋಡಿ ೨ ಸಾವಿರ ಅಡ್ವಾನ್ಸ್ ನೀಡಿ ಅನಂತರ ನೀರು ಕೇಳುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ, ಕೊಲೆಗೆ ಸಂಚು ರೂಪಿಸಿದ್ದರು. ಈ ದುಷ್ಕರ್ಮಿಗಳು ಮನೆಯ ಒಡತಿ ಲಕ್ಷ್ಮಿ ಅವರನ್ನು ಬಾಯಿಯನ್ನು ಬಟ್ಟೆಯಿಂದ ಮುಚ್ಚಿದ್ದರು.
Source: Public TV

ಒಂಟಿ ಹೆಂಗಸರೆ ಇವರ ಮೊದಲ ಟಾರ್ಗೆಟ್.. ಇವರು ಒಳ ಹೊಕ್ಕು ತಮ್ಮ ಕೈಯಲ್ಲಿನ ಬ್ಯಾಗ್ ಓಪನ್ ಮಾಡಿ ಸುತ್ತಿಗೆ, ಚಾಕು, ವೈಯರ್ ತೆಗೆದು ದುಷ್ಕೃತ್ಯ ನಡೆಸಲು ಸಂಚು ರೂಪಿಸುತ್ತಾರೆ.

ಹೇಗೆ ಸಿಕ್ಕರು?: ಮನೆಯಲ್ಲಿ ಲಕ್ಷ್ಮಿ ಅವರು ಒಬ್ಬರೆ ಇರೋದನ್ನು ಗಮನಿಸಿ, ಒಳಹೋದ ಇವರು ಅವರ ಕೊಲೆಗೆ ಯತ್ನಸಿದರು. ಈ ವೇಳೆ ಸುತ್ತಿಗೆಯಿಂದ ಹೊಡೆಯುವ ವೇಳೆ ಮನೆಯ ಒಡತಿ ಕಿರುಚಿಕೊಂಡರು. ರಸ್ತೆಯ ಜನ ಓಡಿ ಬಂದು ಇವರಿಬ್ಬರನ್ನು ಹಿಡಿದುಕೊಂಡಿದ್ದಾರೆ. ಬ್ಯಾಗ್ ಓಪನ್ ಮಾಡಿದಾಗ ಚಾಕು, ವೈರ್, ಸುತ್ತಿಗೆ ಇರೋದು ಗೊತ್ತಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಬಂದ ಇಬ್ಬರನ್ನು ಕೃಷ್ಣನ ಜನ್ಮ ಭೂಮಿಗೆ ಕರೆದುಕೊಂಡು ನಡೆದರು.