ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

0
1176

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಬಳಕೆ ಹೆಚ್ಚಾಗಿದ್ದು. ಜನರು ಅವುಗಳನ್ನು ಬಳಸಿಕೊಂಡು ಕೋಟ್ಯಾಂತರ ಹಣ ಗಳಿಸುತ್ತಿದ್ದಾರೆ. ಅದರಲ್ಲಿ youtube ಚಾನೆಲ್ ಕೂಡ ಒಂದಾಗಿದ್ದು, ಹೆಚ್ಚು ಜನರು ಇದರ ಮೂಲಕವೇ ಹೆಸರು ಮಾಡುತ್ತಿದ್ದಾರೆ. ಅದರಂತೆ ಜೀವನಕ್ಕೆ ಬೇಕಾದಷ್ಟು ಹಣವನ್ನು ಮಾಡಿಕೊಂಡು ಮೆರೆಯುತ್ತಿದ್ದಾರೆ. ಇದೇ ರೀತಿಯ ವೇದಿಕೆಯನ್ನು ಕಲ್ಪಿಸಿಕೊಂಡು ಇಲ್ಲೊಬ್ಬ 12 ನೂರು ಅನಾಥ ಮಕ್ಕಳಿಗೆ ಇಷ್ಟ ಊಟವನ್ನು ಮಾಡಿ ಹೊಟ್ಟೆ ತುಂಬಿಸುತ್ತಿದ್ದಾನೆ. ಇವನ ಈ ಸಾಮಾಜಿಕ ಕಳವಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


Also read: ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸಿ ಭಾರತದ ನೂತನ ಬಿಲಿಯನೇರ್ ಆದ ಬೆಂಗಳೂರಿನ ಶಿಕ್ಷಕ; ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ..

ಏನಿದು ಅನಾಥ ಮಕ್ಕಳಿಗೆ ವರವಾದ ಚಾನೆಲ್?

ಹೈದ್ರಾಬಾದ ಮೂಲದ ಖ್ವಾಜಾ ಮೋಯಿನುದ್ದಿನ್ ಅವರು ‘ನವಾಬ್ಸ್ ಕಿಚನ್’ ಹೆಸರಿನ ಯೂಟ್ಯೂಬ್ ಚಾನಲ್‌ ನಡೆಸುತ್ತಿದ್ದು, ಇವರು ಮಾಡುವ ವೇರೈಟಿ ನಾನ್‌ವೆಜ್, ದೊಡ್ಡ ಗಾತ್ರದ ಕೇಕ್, ಅಮ್ಲೇಟ್‌ ಖ್ಯಾದ್ಯಗಳಿಂದ ಚಾನಲ್ ಸಬ್‌ಸ್ಕ್ರೈಬರ್ಸ್‌ ಸಂಖ್ಯೆ ಒಂದು ಮಿಲಿಯನ್‌ಗಿಂತಲೂ ಅಧಿಕವಾಗಿದೆ. ಈ ನಡುವೆ ಅವರು ಪ್ರತಿ ತಿಂಗಳು ಅನಾಥಾಶ್ರಮದ ಸುಮಾರು 1200 ಮಕ್ಕಳಿಗೆ ಅವರಿಗೆ ಇಷ್ಟವಾದ ತರಹೇವಾರಿ ತಿಂಡಿ ತಿನಿಸುಗಳನ್ನು ಮಾಡಿ ಕೊಡುವ ಬಾಣಸಿಗರಾಗಿದ್ದಾರೆ. ಆ ಮೂಲಕ ಅವರನ್ನು ಖುಷಿ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಮೋಯಿನುದ್ದಿನ್ ಅವರು ಮಾಡಿರುವ ವಿವಿಧ ರುಚಿಕರ ಅಡುಗೆಯನ್ನು ಅನಾಥ ಮಕ್ಕಳಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ, ಹೀಗೆ ಪ್ರತಿ ತಿಂಗಳು ಸುಮಾರು 1200 ಅನಾಥಾಶ್ರಮಗಳ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಾರೆ. ಈ ಸಂಖ್ಯೆ ವಿಸ್ತರಿಸುತ್ತ ಸಾಗಿದೆ. ಮಕ್ಕಳಿಗಾಗಿ 25ಕಿ.ಗ್ರಾಂ ಬ್ಲ್ಯಾಕ್ ಫಾರೆಸ್ಟ್‌ ಕೇಕ್, ದೊಡ್ಡ ಪ್ರಮಾಣದಲ್ಲಿ ನೂಡೆಲ್ಸ್ ಮಾಡಿ ಕೊಟ್ಟಿದ್ದಾರೆ.


Also read: ಕಷ್ಟಪಟ್ಟರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಆಟೋ ಚಾಲಕ ದೊಡ್ಡ ಲಾರಿ ಕಂಪನಿಯ ಮಾಲೀಕನಾಗಿರುವುದೇ ಸಾಕ್ಷಿ!!

ಮೋಯಿನುದ್ದಿನ್ ಅವರು ಯೂಟ್ಯೂಬ್ ಚಾನಲ್ ಆರಂಭಿಸುವುದಕ್ಕೂ ಮೊದಲು ಹೈದ್ರಾಬಾದನ ಪ್ರಮುಖ ಸುದ್ದಿ ವಾಹಿನಿನೊಂದರಲ್ಲಿ ಪತ್ರಕರ್ತರಾಗಿರು. ಆದ್ರೆ ಮೋಯಿನುದ್ದಿನ್ ಅವರಿಗೆ ಸ್ವಂತ ಏನನ್ನಾದರೂ ಮಾಡಬೇಕೆ ಎನ್ನುವ ತುಡಿತ ಇತ್ತು. ಆಗ ಅವರ ಆಲೋಚನೆಗೆ ಬಂದದ್ದೆ ಅಡುಗೆ ಚಾನಲ್ ಶುರುಮಾಡುವ ಯೋಚನೆ ಹೊಳೆದು. ಹೀಗೆ ಶುರುವಾದ ಐಡಿಯಾ ಇಂದು ನಿರೀಕ್ಷೆಯಂತೆ ಜನಪ್ರಿಯತೆ ಗಳಿಸುತ್ತಿದೆ. ಈ ಚಾನೆಲ್ ಅಲ್ಲಿ ಹೊರಾಂಗಣದಲ್ಲಿ ಅಡುಗೆ ಮಾಡುವುದು ವಿಶೇಷವಾಗಿದ್ದು, ಅವರು ಮಾಡುವ ಖ್ಯಾದ್ಯಗಳಲ್ಲಿ ನಾನ್‌ವೆಜ್ ಪ್ರಮುಖವಾದ ಅಡುಗೆ ಆಗಿದೆ. ನಾನ್‌ವೆಜ್‌ನಲ್ಲಿ ಸ್ಪೆಷಲ್ ತಂದೂರಿ, ಬಿರಿಯಾನಿ ರೆಸಪಿಗಳ ವಿಡಿಯೊಗಳು ಹೆಚ್ಚು. ದೊಡ್ಡ ಗಾತ್ರದಲ್ಲಿ ಇವರು ತಯಾರಿಸಿದ ಅಮ್ಲೆಟ್‌, ನೂಡೆಲ್ಸ್ ಮತ್ತು ಬ್ಲ್ಯಾಕ್‌ ಫಾರೆಸ್ಟ್‌ ಕೇಕ್ ವಿಡಿಯೊಗಳು ಹೆಚ್ಚು ವೀಕ್ಷಣೆ ಮಾಡಿದ್ದಾರೆ.


Also read: ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದು ಹೆಸರುವಾಸಿಯಾದ ಈ ವ್ಯಕ್ತಿ, 47 ಏಡ್ಸ್ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ರಿಯಲ್ ಹೀರೋ ಯಾರು ಗೊತ್ತಾ??

ಪತ್ರಕರ್ತರಾಗಿದ್ದ ಮೋಯಿನುದ್ದಿನ್ ಆ ಹುದ್ದೆಯನ್ನು ಬಿಟ್ಟು, 2017ರಲ್ಲಿ ಗೆಳೆಯರಾದ ಶ್ರೀನಾಥ ಮತ್ತು ಭಗತ್ ಜೊತೆ ಸೇರಿ ನವಾಬ್ಸ್‌ ಕಿಚನ್ ಯೂಟ್ಯೂಬ್ ಚಾನಲ್ ಆರಂಭಿಸಿದರು. ಮೋಯಿನುದ್ದಿನ್ ಹಲವು ತರಹದ ಅಡುಗೆ ಮಾಡುತ್ತಾರೆ ಮತ್ತು ಅವರ ಗೆಳೆಯರು ವಿಡಿಯೊ ಮಾಡುವುದು ಮತ್ತು ಎಡಿಟ್ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಮೊದಲು ಚಾನಲ್ ಆರಂಭಿಸಿದ್ದಾಗ ಸ್ಪಲ್ಪ ದಿನಗಳಲ್ಲೇ ಹಣಕಾಸಿನ ಸಂಕಷ್ಟ ಎದುರಾಯಿತು. ಆಗ ನಮ್ಮ ಬಳಿ ಕೇವಲ 5000ರೂಪಾಯಿಗಳು ಮಾತ್ರ ಉಳಿದಿದ್ದವು, ಕೊನೆಯದೊಂದು ವಿಡಿಯೊ ಮಾಡಿ ನವಾಬ್ ಕಿಚನ್ಸ್‌ ಅಡುಗೆ ಚಾನೆಲ್ ಮುಚ್ಚಿ ಮತ್ತೆ ಉದ್ಯೋಗಕ್ಕೆ ಹೋರಡುವ ಆಲೋಚನೆಗಳನ್ನು ಮಾಡಿದ್ದೆವೂ ಅದರಂತೆ ಕೊನೆಯ ವಿಡಿಯೋದಲ್ಲಿ ನಾವು ಚಾನಲ್ ಮುಚ್ಚುವ ಸ್ಥಿತಿಯಲ್ಲಿದೆ. ಚಾನಲ್ ಉಳಿಯಲು ಹಣಕಾಸಿನ ನೆರವಿನ ಅಗತ್ಯವಿದೆ ಎಂದು ವೀಕ್ಷಕರಲ್ಲಿ ಮನವಿ ಮಾಡಿದ್ವಿ. ಅದೇ ರಾತ್ರಿ ನಮಗೆ 18 ಮೇಲ್‌ಗಳು ಬಂದಿದ್ದವು. ಮಕ್ಕಳಿಗೆ ಆಹಾರ ನೀಡುತ್ತಿರುವುದು ಖುಷಿ ಎನಿಸಿದೆ ಅದಕ್ಕಾಗಿ ಸಹಾಯ ನೀಡುತ್ತವೆ ಚಾನೆಲ್ ಮುಂದುವರೆಸಿ ಎಂದು ವೀಕ್ಷಕರು ತಿಳಿಸಿದ್ದರು. ಅದರಂತೆ ಸಾಕಷ್ಟು ಹಣವನ್ನು ಈಗ ಗಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.