2011ರ ವಿಶ್ವಕಪ್-ನಲ್ಲಿ ಸರಣಿ ಶ್ರೇಷ್ಠ, ಸ್ಫೋಟಕ ಬ್ಯಾಟ್ಸ್-ಮನ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್-ಗೆ ಪೂರ್ಣ ವಿದಾಯ!!

0
337

ನಿನ್ನೆ ತಾನೇ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಪದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲುವು ಕಂಡು ಸಂಭ್ರಮದಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ನಿರಾಸೆ ಮೂಡಿದ್ದು, 2011 ರ ವರ್ಲ್ಡ್-ಕಪ್ ಗೆಲುವಿಗೆ ಪಾತ್ರವಹಿಸಿದ. ಸಿಕ್ಸರ್ ಕಿಂಗ್, ಯುವರಾಜ್ ಸಿಂಗ್ ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರರಾಗಿದ್ದು, ಈ ಕುರಿತಂತೆ ಮುಂಬೈನ ಹೋಟೆಲ್ ವೊಂದರಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಇಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿದ್ದಾರೆ.

Also read: ಕ್ರಿಕೆಟ್-ನಿಂದ ನಿವೃತ್ತಿಯ ನಂತರವೂ ಸೂಪರ್ ಹೀರೋ ಆಗಿ ಮಿಂಚುತ್ತಿದ್ದಾರೆ, ‘ಗೋಡೆ’ ಖ್ಯಾತಿಯ ಕನ್ನಡಿಗ, ರಾಹುಲ್ ದ್ರಾವಿಡ್….!

ಯುವರಾಜ್ ಸಿಂಗ್ ರಾಜೀನಾಮೆ?

ಹೌದು ನಿನ್ನೆಯಿಂದ ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ, ಯುವರಾಜ್ ಸಿಂಗ್, ಕ್ರಿಕೆಟ್ ವಿಧಾಯಕ್ಕೆ ಇಂದು ಸ್ಪಷ್ಟನೆ ಸಿಕ್ಕಿದ್ದು, ಬಿಸಿಸಿಐ ಜೊತೆ ಚರ್ಚಿಸಿ ಮುಂಬೈನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿಕ್ಸರ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು ನಿವೃತ್ತಿ ಘೋಷಿಸಿದ್ದಾರೆ. ವಿಡಿಯೋ ಮೂಲಕ ಕ್ರಿಕೆಟ್ ನೆನಪುಗಳನ್ನು ಯುವಿ ಬಿಚ್ಚಿಟ್ಟಿದ್ದಾರೆ. ಅದರಂತೆ 2000 ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಯುವಿ, ಟೀಂ ಇಂಡಿಯಾಗೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ತನಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳು, ಟ್ರೋಫಿಗಳು, ಸ್ಮರಣಿಕೆಗಳು, ಬ್ಯಾಟ್ ಮತ್ತು ತಮ್ಮ 12ನೇ ನಂಬರಿನ ಜೆರ್ಸಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಈ ಹಿಂದೆ ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರು.

Also read: ಇದನ್ನು ಓದಿ ದ್ರಾವಿಡ್ ಕ್ರಿಕೆಟ್-ನಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ಒಂದು ಚೂರು ಅಹಂಕಾರ ಪಡೋದಿಲ್ಲ ಅಂತ ನಿಮಗೇ ಅರಿವಾಗುತ್ತೆ..

ಈ ಸಮಯದಲ್ಲಿ ಮಾತನಾಡಿದ ಅವರು ನಾನೀಗ ವಿದಾಯ ಹೇಳುವ ಸಮಯ. ಅತ್ಯದ್ಭುತ ಪಯಣ ನನ್ನದು. ಆದರೆ ಈಗ ಅದನ್ನು ಅಂತಿಮಗೊಳಿಸುವ ಸಮಯ ಬಂದಿದೆ’ ಕ್ರಿಕೆಟ್ ನನಗೆ ಎಲ್ಲವನ್ನು ನೀಡಿದೆ. ಹೋರಾಡುವುದನ್ನು ಕಲಿಸಿದೆ. 6 ಸಿಕ್ಸರ್ ಸಿಡಿಸಿದ್ದು, ಏಕದಿನ ವಿಶ್ವಕಪ್ ಜಯಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದು ನನ್ನ ವೃತ್ತಿಜೀವನದ ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ತಂದೆ-ತಾಯಿ, ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ಮುಂದೆ ಏನು ಮಾಡುವುದು ಎನ್ನುವುದಕ್ಕೆ ಉತ್ತರಿಸಿದ ಅವರು. ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದರೂ ಜಿಟಿ20 (ಕೆನಡಾ), ಯುರೋ ಟಿ20 ಹಾಗೂ ಐಪಿಎಲ್‍ನಲ್ಲಿ ಆಡುವುದಾಗಿ ಯುವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವರೆಗೆ ಒಟ್ಟು 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ 8701 ರನ್ ಕಲೆಹಾಕಿದ್ದಾರೆ. ಇದರಲ್ಲಿ 52 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ. ಗರಿಷ್ಠ ಸ್ಖೋರ್ 150 ಆಗಿದೆ. ಜೊತೆಗೆ 111 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂತೆಯೆ 40 ಟೆಸ್ಟ್​ ಪಂದ್ಯಗಳನ್ನಾಡಿ 3277 ರನ್ ಕಲೆಹಾಕಿದ್ದಾರೆ. ಟಿ-20 ಪಂದ್ಯಗಳ ಪೈಕಿ 58 ಪಂದ್ಯಗಳಲ್ಲಿ 1177 ರನ್ ಬಾರಿಸಿದ್ದಾರೆ. ಕೀನ್ಯಾ ತಂಡದ ವಿರುದ್ಧ 2000 ರಲ್ಲಿ ಅಂತರಾಷ್ಟ್ರೀ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಯುವಿ ತನ್ನ ಕೊನೆಯ ಪಂದ್ಯವನ್ನು ವೆಸ್ಟ್​ ಇಂಡೀಸ್ ವಿರುದ್ಧ 2017 ರಲ್ಲಿ ಆಡಿದ್ದರು.

ಕ್ಯಾನ್ಸರ್ ಗೆದ್ದ ಸಿಂಗ್:

Also read: ಭಾರತ ಕ್ರಿಕೆಟ್ ತಂಡದ ನಾಯಕರ ಬಗ್ಗೆ ಈ ಕುತೂಹಲಕಾರಿ quiz ಅನ್ನು ಆಡಿ..

ಕ್ಯಾನ್ಸರ್​ನಿಂದ ಗುಣಮುಖರಾದ ಯುವರಾಜ್​ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಸಿಗುವ ಅವಕಾಶ ಬಳಸಿಕೊಂಡು ತಮ್ಮ ವೃತ್ತಿ​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.