6 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಯುವರಾಜ್

0
531

ಕಟಕ್: ಭಾರತ– ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಯುವರಾಜ್‌ ಸಿಂಗ್‌ ಪಾತ್ರರಾದರು. ಆರು ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್‌ ಸಿಂಗ್‌, ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.

Cricket - India v England - Second One Day International - Barabati Stadium, Cuttack, India - 19/01/17. India's Yuvraj Singh celebrates after scoring a century. REUTERS/Adnan Abidi

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ, 6 ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್ ಸಿಂಗ್ 100*(98 ಎಸೆತ), ಭಾರತ 3 ವಿಕೆಟ್ ನಷ್ಟಕ್ಕೆ 190(33 ಓವರ್)

2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 113 ರನ್ ಸಿಡಿಸಿದ್ದೇ ಕೊನೆ. ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ತೆರಳಿದ್ದ ಯುವಿ ಚೇತರಿಸಿಕೊಂಡು ಬಂದ ಬಳಿಕ ಫಾರ್ಮ್`ಗೆ ಮರಳಲು ಪರಿತಪಿಸುತ್ತಿದ್ರು. 6 ವರ್ಷಗಳ ಬಳಿಕ ಇದೀಗ, ಶತಕ ಸಿಡಿಸಿ ತಮ್ಮ ಫಿಸಿಕಲ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.

ಯುವರಾಜ್ ಸಿಂಗ್

150 ರನ್ ಸಿಡಿಸಿದ ಯುವಿ ಬಟ್ಲರ್`ಗೆ ಕ್ಯಾಚಿತ್ತು ನಿರ್ಗಮಿಸಿದರು. ಯುವಿಯ ಈ ಭರ್ಜರಿ ಶತಕದಲ್ಲಿ 21 ಬೌಂಡರಿ ಮತ್ತು 3 ಸಿಕ್ಸರ್ ಇದ್ದವು.

ನಾಯಕ ವಿರಾಟ್‌ ಕೊಹ್ಲಿ ನನ್ನ ಮೇಲಿಟ್ಟ ಮಹತ್ವದ ನಂಬಿಕೆಯೇ ಶತಕ ಸಿಡಿಸಲು ಸ್ಫೂರ್ತಿಯಾಯಿತು ಎಂದು ಯುವರಾಜ್‌ ಸಿಂಗ್‌ ಹೇಳಿದ್ದಾರೆ.