ಆನ್ಲೈನ್ ಫುಡ್-ನಲ್ಲಿ ಗ್ರಾಹಕರಿಗೆ ಮೋಸ; ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ ಮಾಡಿದ ಝೊಮ್ಯಾಟೊಗೆ 55 ಸಾವಿರ ರೂ. ದಂಡ..

0
197

ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರುವ ಆನ್ಲೈನ್ ಫುಡ್, ಪ್ರಕರಣಗಳು ಕೇಳಿಬರುತ್ತಿರುವುದು ಹೆಚ್ಚಾಗಿದೆ. ಸ್ವಿಗ್ಗಿ, ಝೊಮ್ಯಾಟೊ ಅಂತಹ ಹಲವು app ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವ ಫುಡ್- ನಲ್ಲಿ ಹಲವು ರೀತಿಯ ಮೋಸವಾಗುತ್ತಿದೆ. ಎನ್ನುವ ಆರೋಪ ಮೊದಲಿನಿಂದ ಕೇಳಿ ಬರುತ್ತಿತ್ತು, ಆದರೆ ಈಗ ಅದು ಸತ್ಯವಾಗಿದ್ದು. ನೀವೂ ಆರ್ಡರ್ ಮಾಡಿರುವ ಊಟದ ಬದಲು ಬೇರೆಯದೇ ಊಟ ಸಿಗುತ್ತದೆ. ಇಂತಹದೆ ಒಂದು ಘಟನೆ ನಡೆದಿದ್ದು ಪನೀರ್ ಡೆಲಿವರಿ ಮಾಡುವ ಬದಲು ಚಿಕನ್ ಡೆಲಿವರಿ ಮಾಡಿದ್ದಕ್ಕೆ ಗ್ರಾಹಕರ ನ್ಯಾಯಾಲಯ ಆನ್‍ಲೈನ್ ಆಹಾರ ಮಾರಾಟ ಸಂಸ್ಥೆ ಝೊಮ್ಯಾಟೊ ಹಾಗೂ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದೆ.

Also read: ಭಾರತದಲ್ಲಿ ತಯಾರಾಗುವ ವಿವಿಧ ಬ್ರಾಂಡ್ ಉಪ್ಪುಗಳು ಕ್ಯಾನ್ಸರ್ ಕಾರಕವಂತೆ; ಅಮೆರಿಕಾದ ಲ್ಯಾಬ್-ನಿಂದ ಪತ್ತೆಯಾಯಿತು ಆಘಾತಕಾರಿ ಸುದ್ದಿ!!

ಹೌದು ಗ್ರಾಹಕರೊಬ್ಬರು ಆನ್‍ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೊದಲ್ಲಿ ಪನೀರ್ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಬಾಯ್ ಮಾತ್ರ ಚಿಕನ್ ತಂದು ಕೊಟ್ಟಿದ್ದಾನೆ. ಈ ಕುರಿತು ವಕೀಲ ಷಣ್ಮುಖ ದೇಶಮುಖ್ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರು. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಈ ಕುರಿತು ಮಾತನಾಡಿದ ಗ್ರಾಹಕ (ವಕೀಲ) ದೇಶಮುಖ್ ನಮಗೆ ಈ ಸಂಸ್ಥೆಯು ಕೇವಲ ಒಂದು ಬಾರಿಯಲ್ಲ ಎರಡು ಬಾರಿ ಇದೇ ರೀತಿ ಮಾಡಿದ್ದು, ಪನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದರೆ ಸಂಸ್ಥೆ ಬಟರ್ ಚಿಕನ್ ಡೆಲಿವರಿ ಮಾಡಿದೆ. ಎರಡೂ ಒಂದೇ ರೀತಿ ಕಾಣುವುದರಿಂದ ಅರಿವಾಗದೆ ಅದನ್ನು ತಿಂದಿದ್ದೇವೆ ಎಂದು ಹೇಳಿದ ಅವರು ಪ್ರತಿನಿತ್ಯವೂ ಎಷ್ಟು ಗ್ರಾಹಕರಿಗೆ ಈ ರೀತಿಯ ಮೋಸ ವಾಗುತ್ತಿದೆ ತಿಳಿಯುತ್ತಿಲ್ಲ, ಎಂದು ಹೇಳಿದ್ದಾರೆ. ಆದರೆ ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ.

ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಝೊಮ್ಯಾಟೊ ಹಾಗೂ ಹೋಟೆಲ್ ಎರಡೂ ಸೇರಿ ಕೆಲಸದಲ್ಲಿನ ಎಡವಟ್ಟು ಹಾಗೂ ಮಾನಸಿಕ ಕಿರುಕುಳ ನೀಡಿದ್ದಕ್ಕೆ 50 ಸಾವಿರ ರೂ. ದಂಡ ನೀಡುವಂತೆ ಸೂಚಿಸಿದೆ. ಇದರಂತೆ ಹಲವು ಪ್ರಕರಣಗಳು ಕೇಳಿಬರುತ್ತಿದ್ದು.

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಈ ಹಿಂದೆವೂ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ ಎನ್ನುವುದು ಪತ್ತೆಯಾಗಿತ್ತು, ಫುಡ್ ಡೆಲಿವರಿ ಮಾಡುವಲ್ಲಿ ಸ್ವಚ್ಛತೆಯನ್ನೇ ಹೋಟೆಲ್‍ಗಳು ಮರೆಯುತ್ತಿವೆ ಎನ್ನುವುದು ಸುದ್ದಿಯಾಗಿತ್ತು, ಫ್ರಿಜ್‍ನಲ್ಲಿ ಹೆಪ್ಪುಗಟ್ಟಿರುವ ಮಟನ್, ಚಿಕನ್ ಪೀಸ್‍ಗಳು, ಟಾಯ್ಲೆಟ್ ರೂಮಿನಲ್ಲಿ ಕಬಾಬ್ ಹಾಗೂ ರೈಸ್ ಬೇಯಿಸುವ ಕಡಾಯಿಗಳು ಹಾಗೂ ಕೊಳೆತ ಸ್ಥಿತಿಯಲ್ಲಿರುವ ಸೊಪ್ಪು ಪದಾರ್ಥಗಳು ಕಂಡು ಬಂದಿದವು, ಈಗ ಮತ್ತೆ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದು ಆರ್ಡರ್ ಮಾಡಿದ ಫುಡ್ ಬದಲು ಬೇರೆ ಫುಡ್ ನೀಡಿ ಗ್ರಾಹಕರನ್ನು ಯಾಮಾರಿಸುತ್ತಿದ್ದಾರೆ. ಎನ್ನುವುದು ಬೆಳಕಿಗೆ ಬಂದಿದೆ.