ಅಂಬಾರಿ ಹೊತ್ತು ಬೆಂಗಳೂರು ಏರ್ ಫೋರ್ಟ್ ಗೆ ಬಂದ ಅರ್ಜುನ

0
927

ಮೈಸೂರಿನ ಅಂಬಾರಿ ಹೊರುವ ಅರ್ಜುನ ಬೆಂಗಳೂರಿನ ಅಂತರರಾಷ್ಟ್ತೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ! ಈ ಕೆಳಗಿನ ಚಿತ್ರ ನೋಡಿ ಆಶ್ಚರ್ಯಚಕಿತರಾದ್ರಾ?

ನಿಜ ಇದು ಆನೆಯೇ, ಅಂಬಾರಿ ಹೊತ್ತಿರುವ ಆನೆ. ಆದ್ರೆ ಕೃತಕ ಆನೆ. ಸದಾ ಯಾಂತ್ರಿಕವಾಗಿರುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಪ್ರಯುಕ್ತ ನಾಡಿನ ಸಂಭ್ರಮ, ಸಂಪ್ರದಾಯಗಳು, ಸಂಸ್ಕೃತಿಯನ್ನು ಈ ಬಾರಿ ಅನಾವರಣಗೊಳಿಸಲಾಗಿದೆ. ಆ ಮೂಲಕ ಕನ್ನಡ ನಾಡಿನ, ಅದರಲ್ಲೂ ಮೈಸೂರು ಸಂಸ್ಥಾನದ ಸಂಸ್ಕೃತಿಯನ್ನು ಹರವಿಡಲಾಗಿದೆ. ಇಲ್ಲಿ ಕೇವಲ ಅಂಬಾರಿ ಹೊತ್ತ ಅರ್ಜುನ ಮಾತ್ರ ಇಲ್ಲ. ಚೆನ್ನಪಟ್ಟಳದ ಬಗೆ ಬಗೆಯ ಬೊಂಬೆಗಳೂ ಇವೆ. ಇವು ಬೊಂಬೆಗಳಾ ಅಥವಾ ನೈಜವೋ ಎನ್ನುವ ಮಟ್ಟದ ಅಂದವಾದ ಬೊಂಬೆಗಳು ಅವು. ಪ್ರತಿ ಬೊಂಬೆಗಳೂ ಕೂಡ ನೋಡುಗರ ಮೈಮನ ತಣಿಸುತ್ತಿವೆ.

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ. ದಸರೆಗೆ ವಾಸ್ತವವಾಗಿ ಖ್ಯಾತಿ ಬಂದಿದ್ದೇ ಮೈಸೂರಿನಿಂದ. ಮೈಸೂರು ಸಂಪ್ರದಾಯದ ದಸರೆಯ ವೈಭವ ಮತ್ತೆಲ್ಲೂ ಕಾಣಲು ಸಾಧ್ಯವೇ ಇಲ್ಲ. ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಹಬ್ಬದ ಆಚರಣೆ ನಡೆಯುತ್ತದೆ.

whatsapp-image-2016-10-04-at-5-39-55-pm

ಇಂತಹ ಸಂಪ್ರದಾಯಬದ್ದ ಆಚರಣೆಯನ್ನ ಏರ್ ಫೋರ್ಟ್ ಗೆ ಬರುವ ಎಲ್ಲರಿಗೆ ಪರಿಚಯಿಸುವುದು ಇದರ ಉದ್ದೇಶ. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಹೀಗಾಗಿ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿ ಇಡುವ ಪ್ರತಿಯಬ್ಬರೂ ಈ ವಸ್ತು ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿದೇಶಿಗರಿಗಂತೂ ಇದು ಅಂತ್ಯಂತ ಕಣ್ಮನ ಸೆಳೆಯುವ ತಾಣವಾಗಿರುವುದಂತೂ ಸತ್ಯ… ಒಮ್ಮೆ ಇದನ್ನೂ ನೀವೂ ನೋಡಬೇಕು ಎನಿಸಿದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬನ್ನಿ…

whatsapp-image-2016-10-04-at-5-39-57-pm