ಅದ್ಭುತ ಗೋಪುರ ಗಡಿಯಾರಗಳಿವು

0
958

ಅಬ್ರಾಜ್ ಅಲ್-ಬೈಟ್ ಟವರ್ಸ್, ಮೆಕ್ಕಾ

abraj-al-bait-towers

ಸೌದೆ ಅರೇಬಿಯಾದ ಮೆಕ್ಕಾದಲ್ಲಿರುವ ವಿಶ್ವದ ಅತಿ ದೊಡ್ಡ ಅಲ್-ಹರಾಮ್ ಮಸೀದಿಯಿಂದ ಕೆಲವೇ ಮೀಟರ್ ದೂರದಲ್ಲಿದೆ. ಸರ್ಕಾರಿ ಒಡೆತನದ ಅತಿ ದೊಡ್ಡ ಕಟ್ಟಡದಲ್ಲಿದೆ. ಇದು ವಿಶ್ವದ ಅತಿ ದೊಡ್ಡ ಗೋಪುರ ಗಡಿಯಾರ. ಇದನ್ನು ಮೆಕ್ಕಾ ರಾಯಲ್ ಹೋಟೆಲ್ ಕ್ಲಾಕ್ ಟವರ್ ಎಂದೂ ಕರೆಯಲಾಗುವ ಇದರ ಎತ್ತರ 601 ಮೀಟರ್.

ಎಲಿಜಬೆತ್ ಟವರ್

elizabeth-tower

ಲಂಡನ್ನಿನ ವೆಸ್ಟ್‍ಮಿನ್‍ಸ್ಟರ್ ಅರಮನೆಯ ಉತ್ತರದ ಕೊನೆಯಲ್ಲಿದೆ. ಅಧಿಕೃತ ಹೆಸರನ್ನು ಹೊರಪಡಿಸಿ ಇದನ್ನು ಬಿಗ್‍ಬೆನ್ ಎಂದೂ ಕರೆಯಲಾಗುತ್ತದೆ. ವಿಶ್ವದ ಎರಡನೇ ಗೋಪುರ ಗಡಿಯಾರದ ಎತ್ತರ 96 ಮೀಟರ್. ಯುನೈಟೆಡ್ ಕಿಂಗ್‍ಡಮ್‍ನ ಪ್ರಮುಖ ಸಂಕೇತವಷ್ಟೇ ಅಲ್ಲದೆ, ಚಿತ್ರೀಕರಣಕ್ಕೆ ಪ್ರಮುಖ ತಾಣವಾಗಿದೆ.

ಜೋಸೆಫ್ ಚಂಬೆರಲೈನ್ ಮೆಮೋರಿಯಲ್ ಕ್ಲಾಕ್ ಟವರ್

joseph-camberalain-memorial-clock-tower

ಎಡ್ಜ್‍ಬಾಸ್ಟನ್ ಉಪನಗರದ ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾಲಯದ ಚಾನ್ಸೆಲರ್ ಕೋರ್ಟ್‍ನಲ್ಲಿದೆ. ಸಾಮಾನ್ಯವಾಗಿ ಓಲ್ಡ್ ಜೋಯಿ ಎಂದು ಕರೆಯಲ್ಪಡುವ ಇದರ ಎತ್ತರ 110 ಮೀಟರ್ ಎಂದಿದ್ದರೂ ಕೆಲವು ಮೂಲವು 99- 100 ಮೀಟರ್ ಎಂದಿದೆ. ಇದೊಂದು ಸ್ವಾಧಾರಿತ ಗಡಿಯಾರ ಗೋಪುರ.

ಜಿಟ್‍ಗ್ಲೋಗಿ

jitglogi

ಸ್ವಿಜರ್‍ಲೆಂಡಿನ ಬೆರ್ನ್‍ನಲ್ಲಿರುವ ಈ ಗೋಪುರ ಗಡಿಯಾರವನ್ನು 13ನೇ ಶತಮಾನದಲ್ಲಿ ಜೈಲುಸಿಬ್ಬಂದಿ ಗೋಪುರ, ನಾಗರಿಕ ಸ್ಮಾರಕ ಹಾಗೂ ನಗರ ಜೀವನದ ಕೇಂದ್ರವಾಗಿ ನಿರ್ಮಿಸಲಾಯಿತು. ಈ ಖಗೋಳೀಯ ಗಡಿಯಾರ ಹಲವಾರು ಮರುಬದಲಾವಣೆಗೆ ಒಳಗಾದರೂ, ವೈಶಿಷ್ಟ್ಯಪೂರ್ಣವಾಗಿದೆ. ಯುನೆಸ್ಕೋದ ವಿಶ್ವಪರಂಪರೆಯ ತಾಣದಲ್ಲೊಂದಾಗಿದೆ

ಅಲೆನ್-ಬ್ರಾಡ್ಲಿ ಕ್ಲಾಕ್ ಟವರ್

Allen Bradley Clock Tower in Milwaukee, Largest Four-sided Clock in the World 807093

ಅಲೆನ್ ಬ್ರಾಡ್ಲಿ ಸಂಸ್ಥೆಯ ಸಂಶೋಧನಾ ಮತ್ತ ಕಚೇರಿ ಆವರಣದ ಮಿಲ್‍ವಾಕೀ, ವಿಸ್ಕಾನ್ಸಿನ್ನಲ್ಲಿರುವ ರಾಕ್‍ವೆಲ್ ಆಟೊಮೇಷನ್ ಹೆಡ್‍ಕ್ವಾರ್ಟರ್ಸ್‍ನಲ್ಲಿದೆ. ಗಿನ್ನಿಸ್ ದಾಖಲೆಯ ಪ್ರಕಾರ ಇದು ವಿಶ್ವದ ಅತಿ ದೊಡ್ಡ ನಾಲ್ಕು ಮುಖದ ಗಡಿಯಾರ. ಇದರ ಎತ್ತರ 86.26 ಮೀಟರ್.

ಪ್ರೇಗ್ ಅಸ್ಟ್ರನಾಮಿಕಲ್ ಕ್ಲಾಕ್ ಟವರ್

clock-tower-prague-1

 

 

ಜೆಕ್ ರಿಪಬ್ಲಿಕ್ ಪ್ರೇಗ್‍ನ ಓಲ್ಡ್ ಟೌನ್ ಸಿಟಿಯ ದಕ್ಷಿಣ ಗೋಡೆಯಲ್ಲಿರುವ ಈ ಗೋಪುರ ಗಡಿಯಾರವನ್ನು ಪ್ರೇಗ್ ಓರ್ಲೇಜ್ ಎಂದೂ ಕರೆಯುತ್ತಾರೆ. 1410ರಲ್ಲಿ ಸ್ಥಾಪಿಸಲಾದ ಈ ಗಡಿಯಾರ ಈಗಲೂ ಸುಸ್ಥಿತಿಯಲ್ಲಿರುವ ವಿಶ್ವದ ಅತಿ ಪುರಾತನ ಹಾಗೂ ಪುರಾತನ ಖಗೋಳ ಗಡಿಯಾರದಲ್ಲಿ ಮೂರನೆಯವೆನಿಸಿದೆ.

ಮಿನ್ನಿಯಾಪೋಲಿಸ್ ಸಿಟಿ ಹಾಲ್

%e0%b2%ae%e0%b2%bf%e0%b2%a8%e0%b3%8d%e0%b2%a8%e0%b2%bf%e0%b2%af%e0%b2%be%e0%b2%aa%e0%b3%8b%e0%b2%b2%e0%b2%bf%e0%b2%b8%e0%b3%8d-%e0%b2%b8%e0%b2%bf%e0%b2%9f%e0%b2%bf-%e0%b2%b9%e0%b2%be%e0%b2%b2%e0%b3%8d

ಮಿನ್ನಿಯಾಪೋಲಿಸ್ ಸಿಟಿ ಹಾಲ್ ಮತ್ತು ಹೆನ್ನೆಪಿನ್ ಕೌಂಟಿ ಕೋರ್ಟ್‍ಹೌಸ್ ಮಿನ್ನೇಸೋಟದಲ್ಲಿದೆ. ಮಿನ್ನಿಯಾಪೋಲಿಸ್ ನಗರಾಡಳಿತ ಹಾಗೂ ಹೆನ್ನೆಪಿನ್ ಕೌಂಟೆ ಬಳಸಲ್ಪಡುವ ಮುಖ್ಯ ಕಟ್ಟಡವೂ ಆಗಿದೆ. 105 ಮೀಟರ್ ಎತ್ತರ ಹಾಗೂ ತಲಾ 7.5ಮೀಟರಿನ ನಾಲ್ಕು ಮುಖಗಳ ರಿಂಗಣಿಸುವ ಗಡಿಯಾರವಿದು.

ಎನ್‍ಟಿಟಿ ಡೊಕೊಮೊ ಯೋಯೋಗಿ ಬಿಲ್ಡಿಂಗ್

%e0%b2%8e%e0%b2%a8%e0%b3%8d%e2%80%8d%e0%b2%9f%e0%b2%bf%e0%b2%9f%e0%b2%bf-%e0%b2%a1%e0%b3%8a%e0%b2%95%e0%b3%8a%e0%b2%ae%e0%b3%8a-%e0%b2%af%e0%b3%8b%e0%b2%af%e0%b3%8b%e0%b2%97%e0%b2%bf-%e0%b2%ac

ಜಪಾನಿನ ಟೋಕಿಯೋದ ಶಿಬುಯಾದಲ್ಲಿದೆ. ಕಟ್ಟಡದಲ್ಲಿ ಅನುಸ್ಥಾಪಿಸಲಾಗಿರುವ 15ಮೀಟರ್ ವ್ಯಾಸದ ಗಡಿಯಾರ ಆಧುನಿಕ ಕಾಲದ ಗಡಿಯಾರಕ್ಕೆ ಸೂಕ್ತವಾಗಿದೆ. 240 ಮೀ ಎತ್ತರವಿದ್ದು, ವಿಶ್ವದ ಎತ್ತರದ ಗಡಿಯಾರಗಳಲ್ಲೊಂದಾಗಿದೆ. ಹವಾಮಾನ ಸೂಚಿಸಲು ಗೋಪುರದ ಮೇಲ್ಭಾಗದಲ್ಲಿ ದೀಪಗಳ ವ್ಯವಸ್ಥೆಯಿದೆ.

ರಾಥೌಸ್-ಗ್ಲಾಕನ್ಸ್ಪೀಲ್

Neues Rathaus (München) fotografiert am 23. April 2004

ಮುನಿಚ್‍ನ ಮೇರಿಯನ್‍ಪ್ಲಾಂಟ್ಸ್‍ನಲ್ಲಿರುವ ಈ ಗಡಿಯಾರ ಪ್ರವಾಸಿಗರ ಆಕರ್ಷಣೆಯ ಸ್ಥಳ. ನ್ಯೂಟೌನ್ ಹಾಲ್‍ನ ಭಾಗವಾಗಿರುವ ಇದರ ಎರಡನೆ ಹಂತದ ನಿರ್ಮಾಣವಾಗಿದ್ದು 1908ರಲ್ಲಿ. ಇದರಲ್ಲಿ 32 ಮಾನವಾಕೃತಿಗಳಿದ್ದು, ಬೇಸಿಗೆಯಲ್ಲಿ ನಿತ್ಯ ಬೆಳಿಗ್ಗೆ 11, ಮಧ್ಯಾಹ್ನ 12, ಸಂಜೆ ಐದಕ್ಕೆ ಜೀವತಳೆದು 16ನೇ ಶತಮಾನದ ಕಥೆಗಳನ್ನು ಅಭಿನಯಿಸುತ್ತವೆ.