ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಲಾಡೆನ್ ಪುತ್ರ

0
1569

ದುಬೈ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ, ಒಸಾಮಾ ಬಿನ್ ಲಾಡೆನ್ ನನ್ನು, ಅಮೆರಿಕ ಪಡೆಗಳು 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ನಲ್ಲಿರುವ ಅಡಗುತಾಣದಲ್ಲಿ ಹತ್ಯೆ ಮಾಡಿದ್ದವು. ಇದೀಗ ಒಸಾಮಾ ಪುತ್ರ ಹಂಜಾ ಬಿನ್ ಲಾಡೆನ್ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ.

ಅಮೆರಿಕದ ಟ್ವಿನ್ ಟವರ್ಸ್ ಮೇಲೆ 2001ರಲ್ಲಿ ದಾಳಿ ಮಾಡಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪುತ್ರನಾಗಿರುವ ಹಂಜಾ ಬಿನ್ ಲಾಡೆನ್ ಗೆ ಸುಮಾರು 24 ವರ್ಷ ವಯಸ್ಸು. ಈತ ಆನ್ ಲೈನ್ ನಲ್ಲಿ 21 ನಿಮಿಷದ ‘ನಾವೆಲ್ಲರೂ ಒಸಾಮಾ’ ಎಂಬ ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ತಂದೆಯನ್ನು ಕೊಂದ ಅಮೆರಿಕವನ್ನು ಸುಮ್ಮನೆ ಬಿಡುವುದಿಲ್ಲ. ಸೇಡನ್ನು ತೀರಿಸಿಕೊಳ್ಳುತ್ತೇವೆ. ಅಮೆರಿಕನ್ನರ ವಿರುದ್ಧ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ.

ಅಫ್ಘಾನಿಸ್ತಾನ, ಸಿರಿಯಾ, ಇರಾಕ್, ಪ್ಯಾಲೇಸ್ತೀನ್, ಯೆಮನ್, ಸೊಮಾಲಿಯಾ ಮೊದಲಾದ ಮುಸ್ಲಿಂ ದೇಶಗಳ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ನಡೆಸಿದ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಲಾಡೆನ್ ಪುತ್ರ ಹಂಜಾ ಬಿನ್ ಲಾಡೆನ್ ಹೇಳಿದ್ದಾನೆ.