ಊರ್ವಶಿ ಥಿಯೇಟರ್ ಕಾನೂನು ಉಲ್ಲಂಘನೆ ‘ತಮಿಳು ಚಿತ್ರಕ್ಕೆ’

0
1547

ಊರ್ವಶಿ ಥಿಯೇಟರ್ “ಏನ್ ನಿಮ್ ಪ್ರಾಬ್ಲಮ್ಮು”…

ಲಾಲ್ ಬಾಗ್ ಹತ್ತಿರ ಕಾಣ ಸಿಗುವ ಊರ್ವಶಿ ಚಿತ್ರಮಂದಿರ ಯಾರಿಗೆ ಗೊತ್ತಿಲ್ಲಾ ಹೇಳಿ… ಎಲ್ಲರಿಗೂ ತಿಳಿದಿರುವಂತೆ ಈ ಚಿತ್ರಮಂದಿರ ಬಹಳ ಸೊಗಸಾಗಿದ್ದು, 1100 ಹೆಚ್ಚು ಆಸನವುಳ್ಳ ಬೃಹತ್ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಚಿತ್ರಮಂದಿರದ ಮತ್ತೊಂದು ಮುಖ ಎಷ್ಟೋ ಜನಕ್ಕೆ ತಿಳಿದೇ ಇಲ್ಲ ಎಂಬುದು ಅಷ್ಟೇ ಸತ್ಯ…

ಸರಿ ಸುಮಾರು 25 ವರ್ಷಗಳ ಕಾಲ ಪರಭಾಷೆಯ ಚಿತ್ರಗಳಿಗೆ ಮಣೆ ಹಾಕುತ್ತ ಬಂದಿರುವ, ಊರ್ವಶಿ ಚಿತ್ರಮಂದಿರ ಆಶ್ಚರ್ಯವೆಂಬಂತೆ ಕನ್ನಡದ ಚಿತ್ರ ಜೂಮ್(zoom) ಬಿಡುಗಡೆ ಮಾಡಿತ್ತು. ಅದನ್ನು ನೋಡಿದ ಕನ್ನಡಿಗರು ಅಂತೂ ಇಂತು ಊರ್ವಶಿ ಚಿತ್ರಮಂದಿರಕ್ಕೆ ಬುದ್ದಿ ಬಂತು ಅಂದುಕೊಳ್ಳುವಷ್ಟರಲ್ಲೇ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ ಚಿತ್ರಮಂದಿರ, ಬೇರೆ ಚಿತ್ರಮಂದಿರಗಳಲ್ಲಿ ಚಿತ್ರ ಯಶಸ್ವಿ ಪ್ರದರ್ಶನಗೊಳ್ಳುತಿದ್ದರೂ ಕನ್ನಡ ಸಿನಿಮಾವನ್ನು ಕಡೆಗಣಿಸಿ ‘ಕಬಾಲಿ’ ಚಿತ್ರದ ಪ್ರದರ್ಶನವನ್ನು ಬೆಳಗಿನ ಜಾವ 4 ಗಂಟೆಗೆ ಪ್ರದರ್ಶನ ಕೊಟ್ಟು ತಾನು ಕನ್ನಡ,

ಕರ್ನಾಟಕ, ಕನ್ನಡಿಗರ ವಿರೋಧಿ ಎಂದು ಸಾರಿ ಸಾರಿ ಹೇಳಿತ್ತು…

ಅದಕ್ಕೆ ಸಾಕ್ಷಿ ಎಂಬಂತೆ ಪಾಲಿಕೆ ನಿಯಮದ ಪ್ರಕಾರ ಕೇವಲ 2 ಫಿಲಂ ಪೋಸ್ಟರ್ ಗಳಿಗೆ ಮಾತ್ರ ಅವಕಾಶವಿದ್ದರೂ ತನ್ನ ಚಿತ್ರಮಂದಿರದ ಆವರಣದಲ್ಲಿ 20 ಕ್ಕೂ ಹೆಚ್ಚು ಕಬಾಲಿ ಸಿನಿಮಾ ಪೋಸ್ಟರ್ ಗಳನ್ನೂ ಅಂಟಿಸಿ ತಾನು ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿರುವುದು ನೋಡಿದರೆ ಕನ್ನಡಿಗರು ವಿಶಾಲ ಹೃದಯದವರು ಎಂಬ ಮಾತಿಗೆ ಹಿಡಿದ ಕನ್ನಡಿಯಾಗಿದೆ.

ಇಲ್ಲಿಯವರೆಗೂ ಪಾಲಿಕೆ ಸುಮ್ಮನಿರುವುದೇಕೆ ಎಂದು ಪ್ರಶ್ನೆ ಮಾಡಲು ಹೊರಟ TheNewsism.com ತಂಡಕ್ಕೆ ಚಿಕ್ಕಪೇಟೆ ಕ್ಷೇತ್ರದ ಶಾಸಕರಾದ ಆರ್.ವಿ ದೇವರಾಜ್ ಅವರ ಕುಮ್ಮಕ್ಕಿದೆ ಎಂದು ತಿಳಿದು ಬಂದಿದ್ದು, ಈ ಕ್ಷೇತ್ರದ ತಮಿಳು ಮತದಾರರನ್ನು ಓಲೈಸಲು; ಶಾಸಕರು ಈ ತಂತ್ರಗಾರಿಕೆ ಮಾಡಿರುವುದು ನಮ್ಮ ತಂಡಕ್ಕೆ ಧೃಡಪಟ್ಟಿದೆ.

ಇದನ್ನು ಹೀಗೆಯೇ ಬಿಟ್ಟರೆ ವೋಟ್ ಬ್ಯಾಂಕ್ ಎಂಬ ಗಾಳಕ್ಕೆ ಬಿದ್ದು ವಿಧಾನಸೌದದಲ್ಲೂ ಪರಭಾಷಿಗರ ಪರ ದನಿ ಎತ್ತುವ ಕಾಲ ದೂರವಿಲ್ಲ, ಸಿನಿಮಾ ರಂಗವೂ ಮತ್ತು ಪಾಲಿಕೆ ಪ್ರಜ್ಞಾಹೀನ ಸ್ಥಿತಿ ಇಂದ ಹೊರಬಂದು, ಕಾರ್ಯಪ್ರವೃತ್ತರಾಗಿ ಕೂಡಲೇ ಫಿಲಂ ಪೋಸ್ಟರ್ ತೆಗಿಸಿ ಹಾಕಬೇಕುಂಬುದೇ ನಮ್ಮೆಲ್ಲರ ಆಶೆಯ.

-ಗಿರೀಶ್ ಗೌಡ