ಒಂದೇ ರುಪಾಯಿ ಕೊಟ್ರೂ ಸಿಗುತ್ತೆ ಸ್ಮಾರ್ಟ್ ಫೋನ್ | ಇದು ಸಂಗೀತಾ ಆಫ್ ರ್

0
2227

ಸಂದರ್ಶನ: ನೀವು ಒಮ್ಮೆ ಸಂಗೀತಾಕ್ಕೆ ಭೇಟಿ ನೀಡಿ…‘ಎಕ್ಸ್ಪಿರೀಯೆನ್ಸ್ ವಿತ್ ಸಂಗೀತಾ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸಂಗೀತಾ ಮೊಬೈಲ್ ತನ್ನ ಗ್ರಾಹಕರಿಗೆ ವಿಶಿಷ್ಟ ಸೇವೆ ಒದಗಿಸುವ ಮೂಲಕ ಇತರ ಮೊಬೈಲ್ ಮಳಿಗಗಳಿಗಿಂತ ಭಿನ್ನವೆನಿಸಿಕೊಂಡಿದೆ. ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುವ ನಿಟ್ಟಿನಲ್ಲಿ ಸಾಗುತ್ತಿದೆ.

ಸಂಗೀತಾ ಕೇರಳ ಬಿಟ್ಟು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಹಲವೆಡೆ ಹಾಗೂ ದೆಹಲಿ, ಪಟನಾ, ಅಲಹಬಾದ್‌ಗಳಲ್ಲೂ ಮಳಿಗೆಗಳನ್ನು ಹೊಂದಿದೆ. 1974ರಲ್ಲಿ ಪಾರಂಭವಾದ ಸಂಗೀತಾ ಮೊಬೈಲ್ ಮೊಬೈಲ್ ಸ್ಟೋರ್ ಈಗ 42 ವರ್ಷ ಪೂರೈಸಿದೆ. ಎಲ್ಲವೂ ಸ್ಪರ್ಧಾತ್ಮಕವಾಗಿಯೇ ನಡೆಯುವ ಇಂದಿನ ದಿನಗಳಲ್ಲಿ ಸಂಗೀತಾ ಮೊಬೈಲ್ ಮಳಿಗೆ ಕೂಡಾ ಜನರು ಬಯಸುವ ಹಾಗೇ ಹೊಸ ಹೊಸ ಯೋಜನೆಗಳನ್ನು ನೀಡುತ್ತಿದೆ. ಈ ಕುರಿತು ‘ವಿಶ್ವವಾಣಿ’ ಸಂಗೀತಾ ಸ್ಟೋರ್‌ನ ವ್ಯವಸ್ಥಾಪಕ ನಿರ್ದೇಶ ಸುಭಾಸ್ ಚಂದ್ರ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

ಯೂನಿವರ್ಸೆಲ್ ಸೇಲ್‌ನ ವಿಶೇಷತೆ ಏನು?

ಯೂನಿವರ್ಸೆಲ್ ಸೇಲ್ ಎಂಬ ಯೋಜನೆಯನ್ನು 2012 ರಿಂದ ಶುರುಮಾಡಿದ್ದ ಸಂಗೀತಾ ಇದಕ್ಕೂ ಮುನ್ನ ಕೇವಲ ಎರಡು ಮಳಿಗೆಗಳನ್ನು ಹೊಂದಿತ್ತು. ಇಂದು 300 ಮಳಿಗೆಗಳಿವೆ. ಮೇ 31 ಸಂಗೀತಾಗೆ ವಾರ್ಷಿಕೋತ್ಸವ ಸಂಭ್ರಮ. ಹೀಗಾಗಿ 2002ರಿಂದ ‘ವಾರ್ಷಿಕೋತ್ಸವ ಮಾರಾಟ’ ಯೋಜನೆ ಪ್ರತಿ ವರ್ಷ ಮೇ 31ರಂದು ಒಂದು ತಿಂಗಳ ಕಾಲ ಜಾರಿಯಲ್ಲಿರುತ್ತದೆ. ಸಂಗೀತಾ ಮೊಬೈಲ್ ಮಳಿಗೆ ಪ್ರಾರಂಭಕ್ಕೂ ಮುನ್ನಾ ಮೊಬೈಲ್‌ಗಳು ಎಂಆರ್‌ಪಿ ದರದಲ್ಲಿ ಮಾರಾಟವಾಗುತ್ತಿತ್ತು. ನಾವು 2002ರಲ್ಲಿ ಈ ಸ್ಕೀಂ ಪರಿಚಯಿಸಿದಾಗ ಬಿಗ್ ಹಿಟ್ ಆಗಿತ್ತು. ಈ ಸೇಲ್ ಅವಧಿಯಲ್ಲಿ ಸಂಗೀತಾ ಮೊಬೈಲ್ ಶಾಪ್‌ಗಳಲ್ಲಿ ಮೊಬೈಲ್ ತೆಗೆದುಕೊಂಡ ಪ್ರತಿಯೊಬ್ಬ ಗ್ರಾಹಕನಿಗೆ ಗರಿಷ್ಠ ಮಾರಾಟ ದರಕ್ಕಿಂತ ಕಡಿಮೆ ದರದಲ್ಲಿ ಮೊಬೈಲ್ ನೀಡುವುದು ಮಾತ್ರವಲ್ಲದೆ ನಿಶ್ಚಿತ ಕೊಡುಗೆ ನೀಡಲಾಗುತ್ತದೆ.

ಪ್ರೈಸ್ ಡೌನ್ ಕೊಡುಗೆಯ ಮಹತ್ವವೇನು ?

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ದರ ಏರಿಕೆಗಿಂತ ಇಳಿಕೆಯಾಗುವುದು ಹೆಚ್ಚು . ಹಾಗಾಗಿ ಗ್ರಾಹಕ ಹೆಚ್ಚು ಬೆಲೆಗೆ ಮೊಬೈಲ್ ಕೊಂಡ ನಂತರ ಅದೇ ದಿನ ಮತ್ತೆ ಮೊಬೈಲ್ ದರ ಇಳಿಕೆ ಆದರೆ ಗ್ರಾಹಕ ಅಯ್ಯೋ ನೆನ್ನೆ ತಾನೆ ಅಷ್ಟು ಹಣ ಕೊಟ್ಟು ಖರೀದಿ ಮಾಡಿದ್ದೆ. ಇವತ್ತು ದರ ಇಳಿಕೆ ಆಗಿದೆ ಅಂತಾ ಬೇಸರ ಮಾಡಿಕೊಳ್ಳುತ್ತಾನೆ. ಆದ್ರೆ ಸಂಗೀತಾದಲ್ಲಿ ಇದಕ್ಕೂ ಒಂದು ದಾರಿ ಇದೆ. ಗ್ರಾಹಕ ಖರೀದಿ ಮಾಡಿದ ಮೊಬೈಲ್ ದರ ಒಂದು ತಿಂಗಳಿನೊಳಗೆ ಇಳಿಕೆಯಾದರೆ ಸಂಗೀತಾದಿಂದ ಗ್ರಾಹಕನನ್ನು ಹುಡುಕಿ ಪ್ರೈಸ್ ಡೌನ್ ಹಣವನ್ನು ನೀಡುತ್ತಾರೆ. ಪ್ರೈಸ್ ಡೌನ್ ಹಣದಲ್ಲಿ ಸಂಗೀತಾದಲ್ಲಿ ಸಿಗುವ ಯಾವುದೇ ವಸ್ತುವನ್ನು ಗ್ರಾಹಕ ಕೊಳ್ಳಬಹುದು.

ಗೋ ಕ್ಯಾಶ್ ಎಂದರೇನು ?

ಗೋ ಐಬಿಒ ಕಂಪನಿ ಜತೆ ಟೈ ಅಪ್ ಆಗಿರುವ ಸಂಗೀತಾ ಇನ್ನೂ ಒಂದು ಹೊಸ ಯೋಜನೆಯನ್ನು ಗ್ರಾಹಕರಿಗೆ ನೀಡಿದೆ. ಈ ಯೋಜನೆ ಇತ್ತೀಚೆಗಷ್ಟೆ ಆರಂಭವಾಗಿದೆ. ಗೋ ಕ್ಯಾಶ್ ಅನ್ನೊ ಒಂದು ನೂತನ ಸ್ಕೀಂ ಇದು. ಗೋ ಕ್ಯಾಶ್‌ನಲ್ಲಿ 15 ಸಾವಿರಕ್ಕೆ ಒಳಪಟ್ಟ ಆಯ್ಕೆಯಾದ ಮೊಬೈಲ್‌ಗಳಿಗೆ 10 ಸಾವಿರ ಹಣ ಮತ್ತು 15 ಸಾವಿರ ಮೇಲ್ಪಟ್ಟ ಮೊಬೈಲ್‌ಗಳಿಗೆ 15 ಸಾವಿರ ಗೋ ಕ್ಯಾಶ್ ನೀಡುತ್ತಾರೆ. ಈ ಗೊ ಕ್ಯಾಶ್‌ನಲ್ಲಿ ಇಂಟರ್ ಸಿಟಿ, ಇಂಟರ್ ಸ್ಟೇಟ್ ಬಸ್ ಟಿಕೆಟ್, ಡೊಮ್ಯಾಸ್ಟಿಕ್ ಮತ್ತು ಇಂಟರ್ನ್ಯಾಶನಲ್ ಪ್ಲೈಟ್ ಟಿಕೆಟ್, ಜತೆಗೆ ಪ್ರತಿಷ್ಠಿತ 3 ಸ್ಟಾರ್, 5 ಸ್ಟಾರ್ ಹೋಟೆಲ್‌ಗಲ್ಲಿ ತಂಗಬಹುದು. 6 ತಿಂಗಳ ಅವಧಿ ಈ ಗೋ ಐಬಿಒ ಯೋಜನೆಯಲ್ಲಿದೆ. ಗ್ರಾಹಕ ಮತ್ತು ಆತನ ಕುಟುಂಬಸ್ಥರು, ಇಲ್ಲವೇ ಸ್ನೇಹಿತರು ಯಾರು ಬೇಕಾದರೂ ಈ ಸ್ಕ್ರೀಂ ಲಾಭ ಪಡೆಯಬಹುದು. ಗ್ರಾಹಕರಿಗೆ ಇದೆಲ್ಲಾ ನಿಜಾನ ಅನ್ನಿಸಬಹುದು. ಆದರೆ ಸಂಗೀತಾ ಗ್ರಾಹಕರನ್ನು ಸೆಳೆಯಲೂ ಇಂತಹ ಹಲವು ಯೋಜನೆಗನ್ನು ಜನರಿಗೆ ನೀಡಿ ಒಳ್ಳೆಯ ಸ್ಥಾನದಲ್ಲಂತೂ ಇದೆ ಎಂದರೆ ತಪ್ಪಿಲ್ಲ.

ಒಂದು ರುಪಾಯಿ ಸ್ಕೀಂ ನಲ್ಲಿ ಏನೇನಿದೆ?

ಸಂಗೀತಾ ಪ್ರತಿವರ್ಷದಂತೆ 42ನೇ ವಾರ್ಷಿಕೋತ್ಸವಕ್ಕೆ ಬಜಾಜ್ ಫೈನಾನ್ಸ್ ಜತೆಗೂಡಿ ಒಂದು ರುಪಾಯಿಗೆ ಸ್ಮಾರ್ಟ್ ಫೋನ್ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಯಾವುದೇ ಡೌನ್ ಪೇಮೆಂಟ್ ತೆಗೆದುಕೊಳ್ಳದೆ ಸಂಗೀತಾ ತನ್ನ ಗ್ರಾಹಕರಿಂದ ಕೇವಲ 42 ರು ಪಡೆದುಕೊಂಡು ಯಾವುದೇ ಕಂಪನಿ ಮೊಬೈಲನ್ನು ನೀಡುತ್ತಿದೆ. ಜತೆಗೆ ವೊಡಾಫೋನ್ ಜತೆ ಟೈ ಅಪ್ ಮಾಡಿಕೊಂಡು ವೊಡಾಫೋನ್ ಜಿಎಂಎಸ್ ಸೀಮ್ ಕಾರ್ಡ್ ಕೊಟ್ಟು ಒಂದು ಜಿಬಿ ಡೆಟಾವನ್ನು ಉಚಿತವಾಗಿ ನೀಡುತ್ತಿದೆ. ಮತ್ತು ರಿಲೆಯನ್ಸ್ ಲೈ- ಕಂಪನಿ ಮೊಬೈಲ್ ತೆಗೆದುಕೊಂಡವರಿಗೆ ಅನ್‌ಲಿಮಿಟೆಡ್ ವಾಯ್ಸ್ ಜತೆಗೆ ಅನ್‌ಲಿಮಿಟೆಡ್ ಡೆಟಾವನ್ನು ಮೂರು ತಿಂಗಳು ಉಚಿತವಾಗಿ ನೀಡುತ್ತಿದೆ . ಒಟ್ಟಾರೆ ಸಂಗೀತಾ 2002ರಿಂದ ಇಂದಿನವರೆಗೆ ವಾರ್ಷಿಕೋತ್ಸವ ಮಾರಾಟದ ಸ್ಕ್ರೀಂ ಪ್ರಾರಂಭಿ ಸಿದಾಗಿನಿಂದ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದೆ.

ಆನ್‌ಲೈನ್ ಮಾರುಕಟ್ಟೆಗಳು ನಿಮಗೆ ಯಾವ ರೀತಿ ಪೈಪೋಟಿ ನೀಡುತ್ತಿವೆ ?

ಆನ್‌ಲೈನ್ ಮೊದಲಿಗೆ ತುಂಬಾ ಪ್ರಚಲಿತದಲ್ಲಿತ್ತು. ಎಲ್ಲರು ಕೂಡ ಆನ್‌ಲೈನ್ ಶಾಪಿಂಗ್ ಇಷ್ಟ ಪಡುತ್ತಿದ್ದರು. ಇಂದು ಆನ್‌ಲೈನ್ ಶಾಪಿಂಗ್ ತನ್ನ ಮಹತ್ವ ಕಳೆದು ಕೊಂಡಿದೆ. ಆನ್ ಲೈನ್ ಶಾಪಿಂಗ್‌ನಿಂದ ನಮ್ಮ ಆಪ್ ಲೈನ್ ಶಾಪ್ ಸಂಗೀತಾಗೆ ಯಾವುದೇ ನಷ್ಟ ಆಗಿಲ್ಲ. ನಮ್ಮ ಮಹತ್ವ ನಮಗೆ ಇಂದಿಗೂ ಇದೆ.

43 ನೇ ವಸಂತಕ್ಕೆ ಯಾವ ಸ್ಕೀಂ ಜಾರಿಗೆ ಬರಲಿದೆ?

ಸಂಗೀತಾದ 43ನೇ ವಾರ್ಷಿಕೋತ್ಸವಕ್ಕೆ ಗ್ರಾಹಕರಿಗೆ ‘ಅಶ್ಯೂರ‍್ಡ್ ಬೈ ಬ್ಯಾಕ್’ ಎಂಬ ಇನ್ನೊಂದು ನೂತನ ಸ್ಕ್ರೀಂ ಪರಿಚಯಿಸಲಿದೆ. ಇದರಲ್ಲಿ ಗ್ರಾಹಕ ತೆಗೆದುಕೊಂಡ ಮೊಬೈಲ್ ಖರೀದಿಸಿದ ನಂತರ ಇಷ್ಟವಾಗದೆ ಇದ್ದರೆ ಖರೀದಿಸಿ ಒಂದು ತಿಂಗಳೊಳಗೆ ಶೇ.80ರಷ್ಟು ಹಣ ಕೊಟ್ಟು ಮತ್ತೆ ಹೊಸ ಫೋನ್ ಖರೀದಿಸಬಹುದಾಗಿದೆ. ಒಟ್ಟಾರೇ ತನ್ನ ಬಳಕೆದಾರರನ್ನು ಖುಷಿಪಡಿಸುವುದೇ ಸಂಗೀತಾ ಡಿಲೈಟ್ನ ಮುಖ್ಯ ಉದ್ದೇಶ.

ಸಂಗೀತಾದ ಮೊಬೈಲ್‌ಗಳು ಅನ್ ಬ್ರೇಕೆಬಲ್ ಹೇಗೆ ?

ಸಂಗೀತಾದಲ್ಲಿ ತೆಗೆದುಕೊಂಡ ಎಲ್ಲ ಮೊಬೈಲ್‌ಗಳು ಅನ್ ಬ್ರೇಕೆಬಲ್ ಎಂಬ ಟ್ಯಾಗ್ ಲೈನ್ ನೀವು ನೋಡಿರಬಹುದು. ಏನಿದು ಅನ್ ಬ್ರೇಕೆಬಲ್ ಮೊಬೈಲ್‌ಗಳು ಸಂಗೀತಾದಲ್ಲಿ ಹೇಗೆ ಸಿಗುತ್ತೆ ಅನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಅಂದರೆ ಸಂಗೀತಾದಲ್ಲಿ ನೀವು ಫೋನ್ ತಗೊಂಡರೆ ಗ್ಯಾರಂಟಿ ಇರುತ್ತದೆ ಅಂತ. ಉದಾಹರಣೆಗೆ ನಿಮ್ಮ ಫೋನ್ ಒಡೆದು ಹೋದ್ರೆ, ಕಳ್ಳತನವಾದರೆ, ಎಷ್ಟೇ ಬೆಲೆಬಾಳುವ ಫೋನ್ ಆದ್ರೂ ಕೂಡ ಸಂಗೀತಾ ನಿಮಗೆ ಮತ್ತೊಂದು ಹೊಸ ಫೋನ್ ಕೊಡುತ್ತದೆ. ಕೇವಲ ನೀವು ಮೊಬೈಲ್ ತೆಗೆದುಕೊಂಡ ಬಿಲ್ ಮತ್ತು ಕಳ್ಳತನವಾದ ಮೊಬೈಲ್‌ಗೆ ಪೊಲೀಸ್ ಠಾಣೆಯಲ್ಲಿ ಕೊಟ್ಟಿರುವ ಒಂದು ಕಂಪ್ಲೇಟ್ ಅರ್ಜಿಕೊಟ್ಟರೆ ಸಾಕು ನಿಮಗೆ ಇನ್ನೊಂದು ಹೊಸ ಮೊಬೈಲ್ ಸಿಗುತ್ತೆ.

Source: vishwavani