ಕಣ್ಣಿರಿಟ್ಟ ಮಾಹನ್ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ

0
1384

ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಂಗೀತ ಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ ರವರ ಸಂಗೀತ ಗೌರವವನ್ನು ಆಯೋಜಿಸಲಾಗಿತ್ತು, ಸಂಗೀತ ಗೌರವದ ನಂತರ ಗಾಯಕ ಎಸ್ ಪಿ ಬಾಲಸುಬ್ರಂಮಣ್ಯ ರವರು ಮಹಾಸಭೆಯ ಕೊನೆಯಲ್ಲಿ ತಿರುಪತಿಯಲ್ಲಿರುವ ಕಲಾವಿದ ಪ್ರತಿಮೆಗೆ ಆದ ಸ್ಥಿತಿ ಯನ್ನು ಹೇಳಿ ಕಣ್ಣೀರಿಟ್ಟರು.

ಇದರ ಬಗ್ಗೆ ಅವರು ತಮ್ಮ ಫೇಸ್ಬುಕ್ ನಲ್ಲಿ ಕೂಡ ತಮ್ಮ ಬೇಸರವನ್ನು ಆಗಸ್ಟ್ 29 ರಂದು ಹೈಲೈಟ್ ಮಾಡಿದ್ದಾರೆ.

“ತಂಪುರ ನಲ್ಲಿ ಇರುವ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರತಿಮೆ ದುರದೃಷ್ಟಕರ ಸ್ಥಿತಿ ನೋಡಿ ಅಳುತ್ತೆನೆ. ಪ್ರತಿಮೆಗೆ ಅಡ್ಡಲಾಗಿ ಬಂದಿರುವ ಅಡ್ಡದಿಡ್ಡಿ ಕೇಬಲ್ ಕಂಬಗಳು ಹಾಗೂ ಪಿಲ್ಲರ್ ಗೆ ಆಶ್ರಯವಾಗಿರುವ ಗೋಡೆ ಏರುವ ದೃಶ್ಯವನ್ನು ನೋಡಲಾರೆ, ಏನು ಈ ಅವಮಾನ” ಎಂದು ಅವರ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

ಅಲ್ಲಿ ಉಪಸ್ಥಿತರಿದ್ದವರು SPB ರವರ ಸೂಚನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಕೆಲವು ಪ್ರತಿಮೆಗಳನ್ನು ಸ್ವಚ್ಚಗೊಳಿಸಲು ಯಾರೂ ತಾಯರಿಲ್ಲ ಎಂದು ಟೀಕಿಸಿದರು.

ಪ್ರತಿಮೆಯ ಭಾವಚಿತ್ರ ಸಹಿತ ಸ್ಥಿತಿ ಅಪ್ಡೇಟ್ ಪೋಸ್ಟ್ ಮಾಡಿದ ನಂತರ ಅಲ್ಲಿನ ಕಾರ್ಯನಿರ್ವಾಹಕ ಅಧಿಕಾರಿಗಳು ಇದರ ಬಗ್ಗೆ ವಿಚಾರಣೆ ಮಾಡುವುದಾಗಿ ಭರವಸೆಯಿಂದ ಬರೆದು ಕೊಟ್ಟರು.

ತಿರುಪತಿ ನಗರಾಭಿವೃದ್ಧಿ ಪ್ರಾಧಿಕಾರ ( TUDA ) ಅನುಸ್ಥಾಪಿಸಿದ ಪ್ರತಿಮೆ, ತಿರುಪತಿಯಲ್ಲಿರುವ ಪೂರ್ಣಕುಂಬಮ್ ವೃತ್ತದಲ್ಲಿ 2006 ರಲ್ಲಿ ಆಗಿನ ಮುಖ್ಯಮಂತ್ರಿ ಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಅವರಿಂದ ಅನಾವರಣಗೊಳಿಸಲಾಗಿತ್ತು.

“the hindu” ಪತ್ರಿಕೆಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಡಿ ಸಾಂಬಶಿವ ರಾವ್ ಆರಂಭಿಕ ಅಗತ್ಯ ರಿಪೇರಿ ಮಾಡಲು ಮುಖ್ಯ ಇಂಜಿನಿಯರ್ ಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

2016 ಪ್ರಸಿದ್ಧ ಸಂಗೀತಗಾರ್ತಿ ಹುಟ್ಟಿದ ವಾರ್ಷಿಕೋತ್ಸವದ ಶತಮಾನೋತ್ಸವ ವರ್ಷ.