ಕಿರುತೆರೆಗೇಕೆ ಹಿಂಗ್ಲೀಷ್ ಮೋಹ?

0
1433

ಖಾಸಗಿವಾಹಿನಿಯೊಂದರ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹಿಂದಿ ನಟಿ ಶಿಲ್ಪಾ ಶೆಟ್ಟಿ ಅತಿಥಿಯಾಗಿ ಅಗಮಿಸಿದ್ದರು, ಅಬ್ಬಾ,ಅಂದು ಕಾರ್ಯಕ್ರಮ ನಿರುಪಕ ಅಕುಲ್ ಬಾಲಾಜಿ ನೆಲದ ಮೇಲೆ ಇರಲಿಲ್ಲಾ? ಹಿಂದಿ ಜೊತೆಗೆ ಠಸ್ಸು ಪುಸ್ಸು ಇಂಗ್ಲೀಷ್‍ನಲ್ಲಿ ಪೂರ್ತಿ ಕಾರ್ಯಕ್ರಮ ನಿರ್ವಹಿಸಿದ್ದೆ ಇವರ ಹೆಮ್ಮೆ!! ಇದು ಉದಾಹರಣೆಯಷ್ಟೆ!!

13-1455347410-2-shilpa-shetty-dance-dance

ಕನ್ನಡದ ಹಲವಾರು ಖಾಸಗಿ ವಾಹಿನಿಗಳಲ್ಲಿ ಇದೆ ಗೋಳು, ಸೆಲೆಬ್ರಟಿಗಳ ಸಂದರ್ಶನ ಮಾಡುವ ಕಿರುತೆರೆ ನಿರುಪಕರಂತೂ ಹೆಚ್ಚಾಗಿ ಇಂಗ್ಲೀಷ್ ಪದಗಳನ್ನೇ ಬಳಸುವುದು ಸಂದರ್ಶನಕ್ಕೆ ಬಂದವರು ಕೂಡ ಹಿಂದಿ ಇಂಗ್ಲೀಷ್ ಪದ ಬಳಕೆ ಮಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ,ಕನ್ನಡ ಮಾತನಾಡಿದರೂ ಕೂಡ “ಅ”ಕಾರಕ್ಕೆ “ಹ’ಕಾರ ಉಕಾರ ಮಾತನಾಡುವುದು ಕನ್ನಡವನ್ನು ಮಾತನಾಡಲೋ ಬೇಡವೋ ಏಂದು ಮಾತನಾಡುವುದು ಸಾಮಾನ್ಯ, ಕೆಲವರಿಗಂತು ನನಗೆ ಕನ್ನಡ ಅಷ್ಟಾಗೆ ಬರಲ್ಲಾ ಏಂದು ವ್ಯೆಯ್ಯಾರದಿಂದ ಹೆಳುವುದೆ ಒಂದು ದೊಡ್ಡಸ್ತಿಕೆಯಾಗಿದೆ, ಹುಟ್ಟಿಬೆಳೆದ ನೆಲದ ಮಾತೃಭಾಷೆಯ ಮೇಲೆ ಇರುವ ತಾತ್ಸರವೋ? ಅಥವಾ ಕನ್ನಡ ಮಾತನಾಡಿದರೆ ಎಲ್ಲಿ ನನ್ನ ಘನತೆಗೆ ಕುತ್ತು ಬರುತ್ತದೋ ಎಂಬ ಬ್ರಮೆಯೋ? ಇನ್ನು ಕನ್ನಡ ರಾಜ್ಯೋತ್ಸವ ಬಂತೆಂದರೆ ಈ ಖಾಸಗಿವಾಹಿನಿಗಳ ಕನ್ನಡ ಉಕ್ಕಿ ಉಕ್ಕಿ ಹರಿಯುತ್ತದೆ, ಅ ಒಂದುದಿನ ಮಾತ್ರ! ಕನ್ನಡ ರಾಜ್ಯೋತ್ಸವ ‘ಸೆಲೆಬ್ರೆಟ್” ಮಾಡ್ತಾ ಇದಿವಿ ಎಂದು ಉದ್ಗರಿಸುವ ನಿರುಪಕರಿಗೆನೂ ಕಡಿಮೆ ಇಲ್ಲಾ!! ಇಂಗ್ಲೀಷ್ ಪದ ಬಳಕೆ ಮಾಡದೆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲವೇನೋ ಎಂಬಂತೆ ವರ್ತಿಸುತ್ತಾರೆ, ಇನ್ನೂ ಟಿವಿ ಪರದೆಯ ಮೇಲೆ ಮೂಡುವ ಅಯಾ ಕನ್ನಡ ಚಾನಲ್‍ಗಳ ಹೆಸರಿರುವುದು ಇಂಗ್ಲೀಷ್‍ನಲ್ಲೆ? ಏಕೆ ಅನ್ಯಭಾಷೆಯವರು ನಿಮ್ಮ ಚಾನೆಲ್ ಕಾರ್ಯಕ್ರಮ ನೋಡಲು ಅನುಕೂಲವಾಗಲೆಂದೆ ಇಂಗ್ಲೀಷ್ ನಲ್ಲಿ ಚಾನೆಲ್ ಹೆಸರೇ?

ಇನ್ನು ಬಹಳಷ್ಟು ವಾಹಿನಿಗಳಲ್ಲಿ ಪ್ರಸಾರವಾಗುವ ಕನ್ನಡ ಕಾರ್ಯಕ್ರಮಗಳ ಹೆಸರು ಅದರಲ್ಲೂ ಮ್ಯೂಸಿಕ್ ಚಾನೆಲಗಳ ಬಹಳಷ್ಟು ಕಾರ್ಯಕ್ರಮಗಳ ಶಿರ್ಷಿಕೆ ಹೆಸರುಗಳು ಇಂಗ್ಲೀಷ್ ಮಯ, ವಾಟೆಮಾರ್ನಿಂಗ್, ಜಾಲಿ ರೈಡ್, ರಿಕ್ವೆಸ್ಟ್ ಅಟ್ 12, ಇಂಗ್ಲೀಷ್‍ ಬ್ಯಾಕ್ ಮೊಮೊರಿಸ್, ಲಂಚಬಾಕ್ಸ, ಪೆಪೆ ಸಾಂಗ್ಸ, ಸುಪರ್ ಹಿಟ್ ರಿಕ್ವೆಸ್ಟ್, ಸ್ಯಾಂಡಲ್ ವುಡ್ ನಾನ್ ಸ್ಟಾಪ್, ಲೇಡಿಸ್ ಕ್ಲಬ್ ಹೀಗೆ ಪಟ್ಟಿ ಬೆಳೆಯುತ್ತಲೆ ಸಾಗುತ್ತದೆ, ಕಾರ್ಯಕ್ರಮಗಳಿಗೆ ಕನ್ನಡದಲ್ಲಿ ಅಂದವಾದ ಶಿರ್ಷಿಕೆ ನೀಡಲು ಸಾಧ್ಯವಿಲ್ಲವೇ? ಇನ್ನೂ ನ್ಯೂಸ್ ಚಾನೆಲ್‍ಗಳು ಇದಕ್ಕೆ ಹೊರತಲ್ಲಾ, ಹೆಚ್ಚಾಗಿ ಇಂಗ್ಲೀಷ್ ಪದಬಳಸುವ ಸುದ್ದಿವಾಹಿನಿಗಳಿಗೆ ಬ್ರೆಕಿಂಗ ನ್ಯೂಸ್ ಬದಲು “ಸ್ಫೋಟಕ ಸುದ್ದಿ” ಎಂದು ಬಿತ್ತರಿಸಿದರೆ ಗಂಟೆನು ಹೊಗುತ್ತದೆ? ಏಕೆ ಈ ಸುದ್ದಿ ಚಾನೆಲಗಳು ಅಧಿಕವಾಗಿ ಇಂಗ್ಲೀಷ್ ಪದ ಬಳಸುತ್ತದೆ? ಕನ್ನಡ ನೆಲದಲ್ಲಿದ್ದು ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಕೆಲಸ ಮಾಡಬೇಕಾದವರೆ ಹೀಗೆ ಮಾಡಿದರೆ ಹೇಗೆ?ಪಾಲಿಮರ್ ” ಕನ್ನಡ ” ಚಾನೆಲ್ ಇನ್ನೂ ಒಂದು ಹೆಜ್ಜಿ ಮುಂದೆ ಹೋಗಿ ತಮ್ಮ ವಾಹಿನಿಯಲ್ಲಿ ಮಧ್ಯಾನದವೇಳೆಯಲ್ಲಿ ತಮಿಳು ತೆಲುಗು ಹಾಡುಗಳನ್ನು ಪ್ರಾಸಾರ ಮಾಡುತ್ತವೆ. ಬೇರೆಭಾಷೆಗಳ ಚಾನೆಲ್ ಗಳಿಗೆನೂ ಕರ್ನಾಟಕದಲ್ಲಿ ಕೊರತೆಯಿಲ್ಲಾ!! ಹೀಗಿದ್ದಾಗ ಬೇರೆ ಭಾಷೇಯ ಕಾರ್ಯಕ್ರಮ ಪ್ರಸಾರ ಮಾಡುವುದು ಏಷ್ಟು ಸೂಕ್ತ? ಪಕ್ಕದ ರಾಜ್ಯಗಳಲ್ಲಿ ಕನ್ನಡದ ಚಾನೆಲ್‍ಗಳೆ ಪ್ರಸಾರವಾಗುವುದಿಲ್ಲಾ!!

ಈಗಾಗಲೇ ಸೆಟ್ ಟಾಪ್ ಬಾಕ್ಸ ಖಡ್ಡಾಯವಾಗಿದೆ, ಇದರ ನಿರ್ವಹಣೆಯ ಪ್ರಸಾರದ ಹಕ್ಕನ್ನು ಹೊಂದಿರುವ ಸೆಟ್‍ಟಾಪ್ ಬಾಕ್ಸ ತಯಾರಿಕಾ ಸಂಸ್ಥೆಗಳಾದ ಹ್ಯಾತ್‍ವೇ, ಡೆನ್, ಇಡಿಜಿಟಲ್ ಮುಂತಾದವರು ಕನ್ನಡ ಬಿಟ್ಟು ಬೇರೆ ಎಲ್ಲಾಭಾಷೆಯ ಚಲನಚಿತ್ರಗಳನ್ನು ಪ್ರಸಾರ ಮಾಡುತ್ತಾರೆ, ಹ್ಯಾತ್ ವೆಗೆ ಕರೆಮಾಡಿಕೇಳಿದರೆ ನಮಗೆ ಪ್ರಸಾರದ ಹಕ್ಕಿಲ್ಲಾ ಎನ್ನುತ್ತಾರೆ, ಇದೇನಿದು ಕರ್ನಾಟಕದಲ್ಲಿ ಕನ್ನಡದ ಚಲನಚಿತ್ರದ ಪ್ರಸಾರದ ಹಕ್ಕಿಲ್ಲ ಎಂದರೆ ನಂಬಲು ಸಾಧ್ಯವೇ?ಇದು ಹೀಗೆ ಮುಂದುವರೆದರೆ ಮುಂದೊಂದುದಿನ ಕರ್ನಾಟಕದಲ್ಲಿ ಕನ್ನಡಿಗರೆ ಅಲ್ಪಸಂಖ್ಯಾತರಾಗುವುದರಲ್ಲಿ ಸಂಶಯವಿಲ್ಲಾ!! ಹೀಗಾಗುವ ಮೊದಲು ನಮ್ಮನ್ನಾಳುವವರು ಕಟ್ಟುನಿಟ್ಟಿನ ಕಾನೂನು ತಂದು ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ.ಮಾಧ್ಯಮಗಳು ಜಾವಾಭ್ದಾರಿಯಿಂದ ಕನ್ನಡಕಟ್ಟುವ ಕ್ಯೆಂಕರ್ಯದಲ್ಲಿ ತೊಡಗಬೇಕಾಗಿದೆ.