ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರುವುದರ ಜತೆಗೆ ನೂತನ ಬಸ್ ನಲ್ಲಿ ಸಂಚರಿಸುವ ಮೂಲಕ ಅತ್ಯಾಧುನಿಕ ನಗರ ಸಾರಿಗೆ ಬಸ್ ಸೇವೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಕೆಎಸ್ಆರ್ಟಿಸಿ ಯಿಂದ 637 ಗ್ರೀನ್ ಸಿಟಿ ಬಸ್ಗಳ ಲೋಕಾರ್ಪಣೆ. ಅತ್ಯಾಧುನಿಕ ಹಸಿರು ಬಣ್ಣದ ಬಸ್ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆ ಮಾಡಿದರು. ಜೆ ನರ್ಮ್ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ನಗರ ಸಾರಿಗೆ ಬಸ್ಗಳನ್ನ ಖರೀದಿಸಲಾಗಿದೆ. ಹಾಸನ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ಕೋಲಾರ ಮತ್ತು ಕೆಜಿಎಫ್, ದಾವಣಗೆರೆ, ಮಂಗಳೂರು, ಪುತ್ತೂರು, ಉಡುಪಿ, ಮಡಿಕೇರಿ, ಚಿತ್ರದುರ್ಗ, ಮತ್ತು ಮಂಡ್ಯ ನಗರಗಲ್ಲಿ ಈ ಹಸಿರು ನಗರ ಸಾರಿಗೆ ಬಸ್ಗಳು ಕಾರ್ಯರ್ನಿವಹಿಸಲಿವೆ.
ಒಟ್ಟು 637 ಅತ್ಯಾಧುನಿಕ ಬಸ್ ಗಳ ಸೇವೆಯನ್ನು ಒದಗಿಸಲಾಗುತ್ತಿದ್ದು, ಉಳಿದ 396 ಬಸ್ ಗಳನ್ನು ಹಂತ-ಹಂತವಾಗಿ ಓಡಿಸಲಾಗುತ್ತದೆ.
13ನಗರಗಳಿಗೆ 487 ನಗರ ಸಾರಿಗೆ ಬಸ್ ಮಂಜೂರು: ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು ‘ಅಮೃತ್’ ಯೋಜನೆಯಡಿ ಕೆಎಸ್ಆರ್ ಟಿ ಸಿ ವ್ಯಾಪ್ತಿಗೆ ಬರುವ ಸಣ್ಣ ಮತ್ತು ಮಧ್ಯಮ ನಗರಗಳಾದ ಮೈಸೂರು, ತುಮಕೂರು, ಹಾಸನ, ಮಂಡ್ಯ, ರಾಮನಗರ, ಮಂಗಳೂರು, ಉಡುಪಿ, ಕೆಜಿಎಫ್, ಕೋಲಾರ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ಹಾಗೂ ಚಿತ್ರದುರ್ಗ ನಗರಗಳಿಗೆ 478 ನಗರ ಸಾರಿಗೆ ಬಸ್ ಗಳನ್ನು ಮಂಜೂರು ಮಾಡಿದೆ.
‘ರಾಜ್ಯ ನಗರ ಸಾರಿಗೆ ನಿಧಿ’ಯಡಿ 150 ಬಸ್: ಇದಲ್ಲದೆ, ರಾಜ್ಯ ನಗರ ಸಾರಿಗೆ ನಿಧಿಯಡಿ ಪ್ರಸ್ತುತ 150 ಬಸ್ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಂಗಳೂರು, ಪುತ್ತೂರು ಹಾಗೂ ಮಡಿಕೇರಿ ನಗರಗಳಲ್ಲಿ 175 ಬಸ್ ಸಂಚಾರ ಆರಂಭಿಸಲು 43.51 ಕೋಟಿ ರೂ.ಗಳ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಸಚಿವಾಲಯದ ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರಗಳಲ್ಲಿ 106 ಬಸ್ ಗಳನ್ನು ಈಟಿಸಲು ಅನುಮತಿ ದೊರೆತಿದೆ.
ಈ ಉದ್ದೇಶಕ್ಕಾಗಿ ರಾಜ್ಯ ಸರಕಾರ ಹಾಗೂ KSRTC ತಲಾ ಶೇ 50ರಷ್ಟು ಮೊತ್ತ ಭರಿಸಲಿದ್ದು, ಒಟ್ಟು 23.32 ಕೋಟಿ ರೂ. ಮಂಜೂರಾಗಿದೆ. ನಗರ ಭೂಸಾರಿಗೆ ನಿರ್ದೇಶನಾಲಯವು ಮೊದಲ ಕಂತಿನಲ್ಲಿ 3.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಚಿಕ್ಕಾಬಳ್ಳಾಪುರದಲ್ಲಿ 30 ಹಾಗೂ ಚಿಕ್ಕಮಗಳೂರು ನಗರದಲ್ಲಿ 40 ಅತ್ಯಾಧುನಿಕ ಬಸ್ ಗಳನ್ನು KSRTC ಓಟಡಿಸಲಿದೆ.