ಕೇವಲ ಒಂದು ರುಪಾಯಿಗೆ ಪಡೆದುಕೊಳ್ಳಿ ಒನ್ ಪ್ಲಸ್ ಸ್ಮಾರ್ಟ್ ಫೋನ್!!!

0
2036

ಪ್ರತಿಯೊಂದು ಕಂಪನಿಯು ದೀಪಾವಳಿಯಂದು ತಮ್ಮ ಸರಕುಗಳನ್ನು ಹೆಚ್ಚು ಮಾರಾಟವಾಗಬೇಕೆಂದು ಪಣ ತೊಟ್ಟಂತಿದೆ, ಒಂದರ ಮೇಲೆ ಒಂದು ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯಲು ನಾನ ವಿಧವಾದ ತಂತ್ರ ರೂಪಿಸಿದೆ. ಈಗ ಒನ್ ಪ್ಲಸ್ ಸಂಸ್ಥೆ ತನ್ನ ಹೊಚ್ಚ ಹೊಸ ಫೋನ್ ಆದ ಒನ್ ಪ್ಲಸ್ 3 ಅನ್ನು ಕೇವಲ ಒಂದು ರುಪಾಯಿಗೆ ಫ್ಲಾಶ್ ಸೇಲ್ಸ್ ಮೂಲಕ  ಮಾರಾಟ ಮಾಡುವುದಾಗಿ ಪ್ರಕಟಿಸಿದೆ. ಒನ್ ಪ್ಲಸ್ ಇತ್ತೀಚೆಗಷ್ಟೇ ಭಾರತದಲ್ಲಿ ತನ್ನದೇ ಆದ ಹೊಚ್ಚ ಹೊಸ e-commerce ವೆಬ್ಸೈಟ್ ಅನ್ನು ಬಿಡುಗಡೆ ಮಾಡಿತು, ಅದರ ಪ್ರಚಾರಕ್ಕಾಗಿ ಈ ಒಂದು ಬಗೆಯ ಮಾರಾಟವನ್ನು ಮಾಡುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಟೋಬರ್ ೨೪-೨೬ರಂದು ಈ ಒಂದು ಮಾರಾಟ ನಡೆಯುತ್ತಿದೆ, ಈ ಮೂರು ದಿನ ಮಧ್ಯಾಹ್ನ 12, ಸಂಜೆ 4 ಮತ್ತು ರಾತ್ರಿ 8  ಘಂಟೆಗೆ ನಡೆಯುತ್ತದೆ ಎಂದು ಒನ್ ಪ್ಲಸ್ ತನ್ನ ವೆಬ್ಸೈಟ್ ಮೂಲಕ ತಿಳಿಸುತ್ತಿದೆ. ಒನ್ ಪ್ಲಸ್ ಸಂಸ್ಥೆ ಕೇವಲ ೩ ವರ್ಷ ಹಳೆಯದಾಗಿದ್ದರು, ಉತ್ತಮ ಫೋನ್ ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ಜನಮನ್ನಣೆಯನ್ನು ಗಿಟ್ಟಿಸಿಕೊಂಡಿದೆ. ೨೦೧೪ರಲ್ಲಿ ಒನ್ ಪ್ಲಸ್ ಒನ್ ಎಂಬ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿತ್ತು, ಅಮೇರಿಕಾ, ಯುರೋಪ್, ಚೀನಾ ಹಾಗೂ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಉತ್ತಮ ಮಾರಾಟ ಹೊಂದಿತ್ತು, ನಂತರ ಒನ್ ಪ್ಲಸ್ 2 ಒನ್ ಪ್ಲಸ್ X ಎಂಬ ಫೋನ್ ಗಳನ್ನು ೨೦೧೫ ರಲ್ಲಿ ಪರಿಚಯಿಸಿತ್ತು, ಆದರೆ ಅದು ನಿರೀಕ್ಷೆಗೆ ತಕ್ಕಂತೆ ಹೆಚ್ಚು ಮಾರಟವಾಗಲಿಲ್ಲ. ಒನ್ ಪ್ಲಸ್ ಸಂಸ್ಥೆಯ ಹೊಸ ಫೋನ್ ಒನ್ ಪ್ಲಸ್ 3 ಎಲ್ಲಾ ವಲಯಗಳಲ್ಲೂ ತುಂಬಾ ಚೆನ್ನಾಗಿದೆ, ಇದರ hardware specifications ಇದಕ್ಕಿಂತ ದ್ವಿಗುಣ ದುಬಾರಿಯಾಗಿರುವ ಫೋನ್ ಗಳಿಗಿಂತಲೂ ಚೆನ್ನಾಗಿದೆ.

ಒನ್ ಪ್ಲಸ್ 3 ಯ ಮಾರುಕಟ್ಟೆ ಬೆಲೆ : ರೂ 28,೦೦೦/- ಇಂಥ ಒಳ್ಳೆಯ ಫೋನ್ ಅನ್ನು ಕೇವಲ ಒಂದು ರುಪಾಯಿಗೆ ಪಡೆಯುವುದು ಗ್ರಾಹಕನ ಅದೃಷ್ಟವೇ ಸರಿ. ಇಲ್ಲಿ ಭಾಗವಹಿಸಲು ನೀವು ಮಾಡ ಬೇಕಾಗಿರುವುದು ಇಷ್ಟೇ ಇಲ್ಲಿ Click Here ಮಾಡಿ ಒನ್ ಪ್ಲಸ್ ವೆಬ್ಸೈಟ್ ನಲ್ಲಿ ನೊಂದಾಯಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ. ನಂತರ ಅಕ್ಟೋಬರ್ ೨೪-೨೬ ರ ವರೆಗೆ ಮೇಲೆ ಹೇಳಿರುವ ಸಮಯದಲ್ಲಿ ಒನ್ ಪ್ಲಸ್ ವೆಬ್ಸೈಟ್ ಗೆ ಭೇಟಿ ನೀಡಿ.