ಗುಬ್ಬಿ ಮೇಲಿನ ಬ್ರಹ್ಮಾಸ್ತ್ರಕ್ಕೆ ಮತ್ತೊಂದು ಬಲಿ; ಅನಾಣ್ಯೀಕರಣಕ್ಕೆ ಮತ್ತೊಂದು ಬಲಿ !

0
1262

ಭ್ರಷ್ಟಾಚಾರ, ಖೋಟಾನೋಟಿನ ದಂಧೆಕೋರರ ವಿರುದ್ಧ ಮತ್ತು ಕಾಳಧನಿಕರ ಮೇಲೆಸೆಗಿರುವ ‘ಅನಾಣ್ಯೀಕರಣ’ ವೆಂಬ ಬ್ರಹ್ಮಾಸ್ತ್ರಕ್ಕೆ ಮತ್ತೊಂದು ಜೀವ ಬಲಿಯಾಗಿದೆ.

ಪೂರ್ವ ಮುಂಬೈನಲ್ಲಿರುವ ಮುಲುಂದ್ ಪ್ರದೇಶದಲ್ಲಿ ವಿಶ್ವನಾಥ್ ವರ್ತಕ್ ಎಂಬ ವೃದ್ಧರೊಬ್ಬರು ಸ್ಟೇಟ್ ಬ್ಯಾಂಕ್ ಆ ಇಂಡಿಯಾ ಶಾಖೆಯಲ್ಲಿ ನೋಟ್ ಬದಲಿಸಲು ನಿಂತಿರುವ ಆಯಾಸದಿಂದ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ಸರಣಿಯಲ್ಲಿದ್ದ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಸೇರಿಸುವ ಮುಂಚೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಕಾರ್ತಿಕೇಯನ್ ಎಂಬ ೭೫ ವರ್ಷದ ಹಿರಿಯ ನಾಗರೀಕರು ಸರಣಿಯಲ್ಲಿ ನಿಂತಿರುವಾಗ ಕುಸಿದು ಸಾವನ್ನಪ್ಪಿದ್ದಾರೆ. ಅಲಪುಸ್ಸ ಜಿಲ್ಲೆಯವರಾದ ಕಾರ್ತಿಕೇಯನ್ ರವರು ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರೆ ಬ್ಯಾಂಕ್ ನ ಶಾಖೆಯೊಂದರಲ್ಲಿ ನೋಟನ್ನು ‘ಬದಲಿ’ ಮಾಡಲು ನಿಂತಿದ್ದರು.

ಕೇಂದ್ರ ಸರ್ಕಾರ ಮಾನವೀಯತೆ ಮರೆತು ಈ ರೀತಿ ಮಾಡುತ್ತಿರುವುದು ತಪ್ಪು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಮುತ್ಸದಿ ಮತ್ತು ಭ್ರಷ್ಟಾಚಾರದ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿ ಜಯಗಳಿಸಿರುವ ಸಂಸದ ಸುಬ್ರಮಣಿಯಂ ಸ್ವಾಮಿ ರವರೇ ಕೇಂದ್ರ ಸರ್ಕಾರದ ‘ಅನಾಣ್ಯೀಕರಣ’ ಯೋಜನೆಯ ಬಗ್ಗೆ ಕಿಡಿಕಾರಿದ್ದಾರೆ. ೫೦೦ ಮತ್ತು ೧೦೦೦ ನೋಟುಗಳನ್ನು ನಿಷೇಧಿಸುವ ಮುನ್ನ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ವಿತ್ತ ಸಚಿವಾಲಯ ಇದರಲ್ಲಿ ವಿಫಲವಾಗಿದೆ. ಇದರಿಂದ ಸಾವಿರಾರು ಜನ; ಅನಕ್ಷರಸ್ಥರು; ಅಸಂಘಟಿತ ವಲಯದ ಕಾರ್ಮಿಕರು; ಹಿರಿಯ ನಾಗರೀಕರು ಬಲಿಪಶುವಾಗಿದ್ದರೆ ಎಂದು ಹೇಳಿದ್ದಾರೆ.

ಸದ್ಯ ಹಾಂಗ್ ಕಾಂಗ್ ನಲ್ಲಿರುವ ಸ್ವಾಮಿ-ಯವರು ಹಿರಿಯ ನಾಗರೀಕರಿಗೆ ವಿಶೇಷ kiosk ಗಳ ವ್ಯವಸ್ಥೆ ಮಾಡಿ ‘Ad hoc roadside kiosk’ (ತತ್ಪೂರ್ತ ರಸ್ತೆಬದಿ ಕಿಯೋಸ್ಕ್ ವ್ಯವಸ್ಥೆ)ಯನ್ನು ಮಾಡಬಹುದಾಗಿತ್ತೆಂದು ಹೇಳಿದ್ದಾರೆ. ಆದರೆ, Demonetisation (ಅನಾಣ್ಯೀಕರಣ)ದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮೋದಿ ರವರ ಈ ನಿರ್ಧಾರದ ಹಿಂದೆ ಸದುದ್ದೇಶವಿದ್ದರೂ; ಹಾರ್ವರ್ಡ್ನಲ್ಲಿ ಓದಿಕೊಂಡಿರುವ ಸ್ವಾಮೀ ಮತ್ತು ಇತರೆ ಆರ್ಥಿಕ ತಜ್ಞರ ಸಲಹೆ ಪಡೆದು ಈ ನಿರ್ಧಾರಕ್ಕೆ ಬರಬೇಕಾಗಿತ್ತು. ಮೋದಿ ಮತ್ತು ವಿತ್ತ ಸಚಿವಾಲಯವು ಅನಾಣ್ಯೀಕರಣದ ಯೋಜನಾ ಮತ್ತು ನಿರ್ವಹಣೆಯಲ್ಲಿ (planning and execution) ವಿಫಲವಾಗಿರುವದಕ್ಕೆ ಸಾಕ್ಷಿ ಮುಂಬೈ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ಆಗುತ್ತಿರುವ ಸಾವುಗಳು.

ಬಡವರಿಗೆ, ಮಾಧ್ಯಮ ವರ್ಗದವರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ; ಅವರ ತಾಪತ್ರಯ ಜಾಸ್ತಿಯಾಗಿದೆ. ಅನಕ್ಷಸ್ಥರಿಗೆ, ಬ್ಯಾಂಕ್ ಖಾತೆ ಇಲ್ಲದವರಿಗೆ, ನಗದು ವ್ಯವಹಾರ (cash transaction) ನಲ್ಲಿ ನಿರತವಾಗಿರುವ ಹಲವು ಉದ್ಯಮಗಳಿಗೆ ಈ ಯೋಜನೆಯಿಂದ ಪೆಟ್ಟುಬಿದ್ದಿದೆ.