ಆಷಾಢಮಾಸದ ಅಂಗವಾಗಿ ತರಕಾರಿಗಳ ದರ ಇಳಿಕೆ

0
1423

ಬೆಂಗಳೂರು: ಆಷಾಢಮಾಸದ ಅಂಗವಾಗಿ ತರಕಾರಿಗಳ ದರದಲ್ಲಿ ಸ್ವಲ್ಪ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಂಮಾಧಾನ ತಂದಿದೆ.

ಹಸಿ ಮೆಣಸಿನಕಾಯಿ, ಬೀನ್ಸ್, ಟೊಮೇಟೊ ಮತ್ತಿತರ ತರಕಾರಿಗಳ ದರ ಗಗನಕ್ಕೇರಿದ್ದವು. ಇದೀಗ ಎಲ್ಲೆಡೆ ಬಾರಿ ಮಳೆ ಬಂದಿರುವಿದರಿಂದ ಸೊಪ್ಪು-ತರಕಾರಿಹಳ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಆಷಾಢ ಮಾಸ ಬಂದಿರುವುದರಿಂದ ಶುಭಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬೇಡಿಕೆಯೂ ಹೆಚ್ಚೇನೂ ಇಲ್ಲ. ಮೊನ್ನೆಯಷ್ಟೇ ರಂಜಾನ್ ಹಬ್ಬವೂ ಮಗಿದಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಲವು ತರಕಾರಿಗಳ ದರ ಆಗಸ್ಟ್ ಗೆ ಹೋಲಿಸಿದರೆ ಇದೀಗ ಶೇ.60 ಇಳಿಕೆಯಾಗಿದೆ.

ಕೆ.ಜಿ. ಬೀನ್ಸ್ 150-200 ರೂ.ಗೆ ಏರಿತ್ತು. ಟೊಮೇಟೊ ದರ 70-80 ರೂ ತಲುಪಿತ್ತು. ಆದರೆ ಇದೀಗ ಕ್ರಮವಾಗಿ 56 ರೂ. ಹಾಗೂ 30 ರೂ.ಗೆ ಇಳಿದಿದೆ. ಇದಲ್ಲದೆ 40 ರೂ ತಲುಪಿದ್ದ ಮೂಲಂಗಿ ಕೂಡ 24 ರೂ.ಗೆ ಇಳಿದಿದೆ. ಹಾಗಲಕಾಯಿ ದರ ಮಾತ್ರ 44 ರೂ .ಇದೆ. ಮಧುಮೇಹಿಗಳ ಸಂಖ್ಯೆ ಹೆಚ್ಚಾದ ಹಿನ್ನೇಲೆಯಲ್ಲಿ  ಹಾಗಲಕಾಯಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಬೆಲೆ ಕಳೆದ ಎರಡು ತಿಂಗಳಿಂದ ಹೆಚ್ಚಾಗಿಯೇ ಇದೆ.

ಸೊಪ್ಪುಗಳ ದರದಲ್ಲೂ ಇಳಿಕೆ

ಕೆ.ಜೆ. ಸಬ್ಸಿಗೆ ಸೊಪ್ಪು, ಮೆಂತ್ಯ ಸೊಪ್ಪುಗಳು 100 ರೂ. ದಾಟಿದ್ದವು. ಆದರೆ ಇದೀಗ ಕ್ರಮವಾಗಿ 54 ರೂ., 49 ರೂ.ಗೆ ಇಳಿಕೆಯಾಗಿದೆ. ನನಾ ಅಡುಗೆಗಳ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನ ದರ ಕೂಡ 120 ರೂ.ಗೆ ಏರಿತ್ತು. ಇದೀಗ ಅದರ ಬೆಲೆ 28 ರೂ.ಗೆ ಇಳಿದಿದೆ. ಪುದೀನ ಮಾತ್ರ 68 ರೂ. ಬೆಲೆಯಿದೆ.

ಇದೀಗ ಆಷಾಢಮಾಸ ಆರಂಭವಾಗಿರುವಿದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ಇಲ್ಲ. ಹೀಗಾಗಿ ಬೆಲೆಗಳು ಇಳಿದಿವೆ. ಹೀಗೆಯೇ ಸಕಾಲದಲ್ಲಿ ಮಳೆ ಬಂದರೆ ಬೆಲೆಗಳಲ್ಲಿ ಏರಿಕೆಯಾಗುವಿದಿಲ್ಲ.