ನಾರಿಮನ್ ವಿರುದ್ಧ ಸಾಮಾನ್ಯ ಕನ್ನಡಿಗರು !!

0
831

ತಮಿಳುನಾಡಿನ ವಿರುದ್ಧ ಕರ್ನಾಟಕ ಪರ ವಕೀಲರಾದ ನಾರಿಮನ್ ರವರು ಪದೇ ಪದೇ ಸೋಲನ್ನು ಅನುಭವಿಸುತ್ತಿದ್ದು ಜನ ಸಾಮಾನ್ಯರಲ್ಲಿ ನಾರಿಮನ್ ರನ್ನು ಬದಲಿಸುವಂತೆ ತೀವ್ರ ಆಕ್ಷೇಪಣೆ ವ್ಯಕ್ತವಾಗಿದೆ.

ಸಾಮಾನ್ಯ ಕನ್ನಡಿಗ ಪ್ರತಿಷ್ಠಾನ ಸಂಸ್ಥೆವು ತಮ್ಮ ಫೇಸ್ ಬುಕ್ ಖಾತೆಯಲ್ಲಿ #SackNariman ಟ್ವಿಟ್ಟರ್ ಅಭಿಯಾನಕ್ಕೆ ದಿನಾಂಕ 7/9/2016 ರಂದು ಚಾಲನೆ ನೀಡಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಟ್ವಿಟ್ಟರ್ ಅಭಿಯಾನ ದ ಹಿಂದಿನ ದಿನವೇ ದಿನಾಂಕ 6/9/2016 ರಂದು #SackNariman ಬೆಂಗಳೂರಿನ ಟಾಪ್ ಟ್ರೆಂಡಿಂಗ್ನಲ್ಲಿ ಇದ್ದದ್ದು ವಿಶೇಷ ಹಾಗೂ ದಿನಾಂಕ 7/9/2016 ರಂದು ಇಂಡಿಯಾ ಟಾಪ್ ಟ್ರೆಂಡಿಂಗ್ನಲ್ಲಿತ್ತು .

ಹೊಸ ವಕೀಲರ ತಂಡವನ್ನು ಕಟ್ಟಿ ಅವರಿಗೆ ಅವಕಾಶ ಕೊಡಿ ,6 ಕೋಟಿ ಕನ್ನಡಿಗರಲ್ಲಿ ಕನ್ನಡ ಪರ ಮನಸುಳ್ಳವರಿಗೆ ಅವಕಾಶ ಕೊಡಿ , ನಮಲ್ಲಿ ಸಮರ್ಪಕ ನಾಯಕರ ಕೊರತೆ ಇದೆ ಬಂಗಾರಪ್ಪನವರಂತ ನಾಯಕರು ನಮಗೆ ಬೇಕು ಎಂಬುದು ಸಾಮಾನ್ಯರ ಅಭಿಪ್ರಾಯವಾಗಿದೆ ಹಾಗೂ ಪೂರ್ಣ ಚಂದ್ರ ತೇಜಸ್ವಿಯವರ ಬರಹಗಳನ್ನು ಸಹ ಟ್ವಿಟಿಗರು ಅಪ್ಲೋಡ್ ಮಾಡಿದ್ದರು