ನಿಧಿ ಆಸೆಗೆ ಶಿವಲಿಂಗ ಕಿತ್ತೆಸೆದ ಕಿಡಿಗೇಡಿಗಳು

0
2486

ಕಳ್ಳರು ದೇವಾಲಯಗಳಿಗೆ ನುಗ್ಗಿ ಕಾಣಿಕೆ, ಚಿನ್ನಾಭರಣ ದೋಚುವುದು ಇತ್ತೀಚೆಗೆ ಹೆಚ್ಚಾಗಿದೆ. ನಿಧಿಯ ಆಸೆಗೆ ಶಿವಲಿಂಗವನ್ನು ಸರಿಸಿ, ಅದರ ಕೆಳಗೆ 4 ಅಡಿ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಮಂಚೇರಿ ಗ್ರಾಮದಲ್ಲಿ ಜೀರ್ಣೋದ್ಧಾರಕ್ಕೆ ಕಾದಿರುವ 11ನೇ ಶತಮಾನದ ಕಲ್ಲೇಶ್ವರ ದೇವಾಲಯಕ್ಕೆ ನುಗ್ಗಿದ್ದ ಕಳ್ಳರು, ದೇವಾಲಯದಲ್ಲಿದ್ದ ಶಿವಲಿಂಗವನ್ನು ಪಕ್ಕಕ್ಕೆ ಸರಿಸಿದ್ದಾರೆ. ಅದರ ಕೆಳಗೆ ಸುಮಾರು 4 ಅಡಿಗಳಷ್ಟು ಗುಂಡಿ ತೋಡಿದ್ದು, ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ನಿಧಿ ಸಿಕ್ಕಿದೆಯೇ ಇಲ್ಲವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ, ದೇವಾಲಯದಲ್ಲಿ ವಾಮಾಚಾರ ನಡೆಸಿದ ಕುರುಹು ಸಹ ಪತ್ತೆಯಾಗಿದೆ.

ಮಲಯಾಳಿ ಅಕ್ಷರದಲ್ಲಿ ಬರೆದ ತಗಡು ಸೇರಿದಂತೆ ವಿವಿಧ ವಸ್ತುಗಳು ಕಂಡು ಬಂದಿವೆ. ರಾತ್ರಿ ವೇಳೆಯಲ್ಲಿ ಈ ದೇವಾಲಯದ ಸಮೀಪ ಜನ ಬರುವುದಿಲ್ಲ. ಇದನ್ನು ಅರಿತುಕೊಂಡೇ ನಿಧಿಗಳ್ಳರು ಕೃತ್ಯ ಎಸಗಿದ್ದಾರೆ. ಈ ದೇವಾಲಯಕ್ಕೆ ಕಾಯಕಲ್ಪ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Source: kannadadunia