ಬುದ್ದಿ ಕಲಿತ ಮೀನು

0
2363

ನಮ್ಮ ಮನೆಯಲ್ಲಿ ಒಂದು ಅಕ್ವೇರಿಯಂ ಇದ್ದು ಅದರಲ್ಲಿ ಏರಡು ಶಾರ್ಕ್ ಮೀನುಗಳನ್ನು ಮಾತ್ರ ಬಿಟ್ಟಿದ್ದೆವು. ಓಮ್ಮೆ ಭಾನುವಾರ ಹೊರಗೆ ಹೋಗಿದ್ದಾಗ ನಮ್ಮ ತಂದೆಯವನ್ನು ಕೇಳಿ ಅಕ್ವೇರಿಯಂಗೆ ಬಿಡಲು ಐದು ಕೆಂಪುಬಣ್ಣದ ಗಪ್ಪಿ ಮೀನುಗಳನ್ನು ಕೊಡಿಸಿಕೊಂದು ಬಂದು ಅಕ್ವೇರಿಯಂನಲ್ಲಿ ಹಾಕಿದೆ. ಈ ಗುಂಪಿನಲಿದ್ದ ಓಂದು ಗಪ್ಪಿ ಮೀನು ಏರಡುದಿನಗಳ ನಂತರ ತನ್ನದೆ ಜಾತಿಯ ಮೀನುಗಳನ್ನು ಕಚ್ಚಲಾರಂಬಿಸಿತು, ಇದು ಹೀಗೆ ಮುಂದುವರೆದು ಓಂದೆರಡು ದಿನಗಳಲ್ಲಿ ತನ್ನದೆ ಜಾತಿಯ ಏಲ್ಲಾಮೀನುಗಳನ್ನು ಕಚ್ಚಿಸಾಯಿಸಿತು. ಹಾಗೂ ಅಕ್ವೇರಿಯಂ ನಲ್ಲಿದ್ದ ಶಾರ್ಕ್ ಮೀನುಗಳನ್ನು ಕಚ್ಚಲಾರಂಬಿಸಿತು

ಇದನ್ನೆಲ್ಲಾ ನೋಡಿದ ನಾನು ನಮ್ಮತಂದೆಗೆ ವಿಷಯ ತಿಳಿಸಿದೆ. ಇದನ್ನು ಕೇಳಿದ ನಮ್ಮ ತಂದೆಯವರು ಓಂದು ಮಿನರಲ್ ವಾಟರ್ ಬಾಟಲ್‍ನ ತಳ ಹಾಗೂ ಮೇಲ್ಭಾಗವನ್ನು ಕತ್ತರಿಸಿ ಬೇರೆ ಮೀನುಗಳನ್ನು ಕಚ್ಚುತ್ತಿದ್ದ ಆ ಗಪ್ಪಿ ಮೀನನ್ನು ಅಕ್ವೇರಿಯಂನಲ್ಲಿ ಪ್ರತ್ಯೇಕವಾಗಿ ಇರಿಸಿದೆವು. ಅದರೂ ಅದು ಓಮ್ಮೊಮ್ಮೆ ಬಾಟಲಿನಿಂದ ನೆಗೆದು ಹೊರಬಂದು ಶಾರ್ಕ್ ಮೀನನ್ನು ಕಚ್ಚುತ್ತಿತ್ತು. ಅದನ್ನು ಮತ್ತೆ ಮತ್ತೆ ಪ್ರತ್ಯೇಕಿಸುತ್ತಿದ್ದೆವು. ಹೀಗೆಯೆ ಓಂದೆರಡು ತಿಂಗಳು ಸಾಗಿತು. ನಂತರ ಓಂದು ಸಣ್ಣ ಆಮೆ ಮರಿಯನ್ನು ತಂದು ಬಿಟ್ಟೆವು, ಆದರೆ ಶಾರ್ಕ್ ಮೀನುಗಳು ಆಮೆಗೆ ಏನೂ ಮಾಡಲಿಲ್ಲ.

ಓಂದು ದಿನ ನೋಡೊಣವೆಂದು ಬಾಟಲಿಯನ್ನು ತೆಗೆದು ಗಪ್ಪಿಮೀನನ್ನು ಶಾರ್ಕ್ ಹಾಗೂ ಆಮೆಯೊಂದಿಗೆ ಇರಲು ಬಿಟ್ಟೆವು. ಅದರೆ ಏನಾಶ್ಚರ್ಯ!! ಈ ಗಪ್ಪಿ ಮೀನು ಶಾರ್ಕ್ ಗಳಿಗಾಗಲಿ, ಆಮೆಮರಿಗಾಗಲಿ ಕಚ್ಚಲಿಲ್ಲ. ಇದನ್ನು ನೋಡಿದ ನಮ್ಮ ತಂದೆಯವರು ಏರಡು ದಿನ ಹಾಗೆಯೆ ಇರಲಿ, ಗಪ್ಪಿಮೀನನ್ನು ಗಮನಿಸುತ್ತಿರು, ಮತ್ತೆ ಕಚ್ಚಿದರೆ ಪ್ರತ್ಯೇಕಿಸೋಣ ಏಂದರು, ನಾನು ಏರಡು ದಿನಗಳ ಕಾಲ ಗಪ್ಪಿಮೀನನ್ನು ಸತತವಾಗಿ ಗಮನಿಸುತ್ತಿದ್ದೆನು, ಅದು ಶಾರ್ಕ್ ಗಳಿಗಾಗಲಿ, ಬೇರೆ ಮೀನುಗಳನ್ನಾಗಲಿ ಆಮೆ ಮರಿಗಾಗಲಿ ಕಚ್ಚುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಇರುತ್ತಿತ್ತು. ನಂತರ ಅದನ್ನು ಪ್ರತ್ಯೇಕಿಸುವುದನ್ನು ಬಿಟ್ಟೆವು. ಈಗ ಅದು ಇತರೆ ಮೀನು ಹಾಗೂ ಆಮೆ ಮರಿಗಳೊಂದಿಗೆ ಹೊಂದಿಕೋಂಡು ಬಾಳುತ್ತಿದೆ. ಇದರಿಂದ ನನಗೆ ತಿಳಿದ ವಿಷಯವೇನೆಂದರೆ ಗಪ್ಪಿ ಮೀನನ್ನು ಪ್ರತ್ಯೇಕಿಸಿದ್ದರಿಂದ ಅದಕ್ಕೆ ಬೇರೆ ಮೀನುಗಳಿಗೆ ತೊಂದರೆಕೊಡಬಾರದೆಂದು ಬುದ್ದಿ ಕಲಿತಂತೆ ಅನ್ನಿಸಿತು. ಮೀನು ಚಿಕ್ಕ ಪ್ರಾಣಿಯಾದರೆನು ಅದಕ್ಕೂ ಬುದ್ದಿ ಇದೆಯೆಂದು ಇದರಿಂದ ಸಾಬೀತಾಯಿತಲ್ಲವೇ ಗೆಳೆಯರೇ?

ಅಭಯ್ ಪಿ. ನಾಡಿಗ್
ಜ್ಯೆನ್ ಪಬ್ಲಿಕ್ ಸ್ಕೂಲ್
ಉರುಕೆರೆ,
ತುಮಕೂರು-572106.