ಬೆಂಗಳೂರು ಮೆಜೆಸ್ಟಿಕ್ ಮಾರ್ಗದ ಸುರಂಗ ಮಾರ್ಗದ ಮೇಲುಭಾಗದಲ್ಲಿ ಭೂ ಕುಸಿತ

0
2125

ಮೆಜೆಸ್ಟಿಕ್  ಮಾರ್ಗದ ಸುರಂಗ ಮಾರ್ಗದ ಮೇಲು ಭಾಗದಲ್ಲಿ ಭೂ ಕುಸಿತವಾಗಿದೆ.  ಈ ಹಿಂದೆಯೂ ಭೂ ಕುಸಿತವಾಗಿತ್ತು, ಅದೆತರಹ ಇಂದು ಭೂಕುಸಿತ ಸಂಭವಿಸಿದೆ ಇದರಿಂದ  ಸ್ಥಳಿಯರು   ಆತಂಕಕ್ಕೆ ಒಳಗಾಗಿದ್ದಾರೆ. ಆಶ್ಚರ್ಯ ಸಂಗತಿ ಎನೇಂದರೆ ಹಳ್ಳ ಬಿದ್ದಿರೋ ಬಗ್ಗೆ ಮಾಹಿತಿ ಇಲದೇ  ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ.

WhatsApp Image 2016-08-02 at 2.45.31 PM (1)

ಮೆಟ್ರೋ ಮಾಧ್ಯಮ ವಕ್ತಾರರು ಹೇಳಿರುವ ಪ್ರಕಾರ ಮೆಟ್ರೊ ಸೆಂಟ್ರಲ್ ಕಾಲೇಜ್ ನಿಲ್ದಾಣ ಹಾಗೂ ಮೆಜೆಸ್ಟಿಕ್ ಸುರಂಗ ಮಾರ್ಗದ ನಡುವೆ ಆಳವಾಗಿ ಬಿದ್ದಿದೆ. ಸೆಂಟರ್ ಕಾಲೇಜ್ ನಿಂದ ಮೆಜೆಸ್ಟಿಕ್ ನಡುವೆ ೧ ಕಿಮೀ ಅಂತರವಿದೆ, ಹಳ್ಳ ಬಿದ್ದಿರೊದು ಕಾಲೇಜಿನಿಂದ  ಕೇವಲ ೪೬೭ ಮೀ. ನಂತರ. ಸುರಂಗ ಮಾರ್ಗಕ್ಕೂ ಹಳ್ಳ ಬಿದ್ದಿರೊದಕ್ಕೂ ೫ ಅಡಿ ಅಂತರವಷ್ಟೇ ಇರೊದು ಸುಮಾರು ೧೦ ಅಡಿಗೂ ಹೆಚ್ಚು ಭೂಕುಸಿತವಾಗಿದೆ.

ಬಿಎಂಆರ್ ಸಿ ಎಲ್ ವಕ್ತಾರ ವಸಂತರಾವ್  “ಭೂಕುಸಿತದಿಂದ ಮೆಟ್ರೋಗೆ ಸಮಸ್ಯೆ ಆಗಿಲ್ಲ.ಪರಿಶೀಲನೆ ಮಾಡುತ್ತೀದೇವೆ. ಯಾವ ಕಾರಣಕ್ಕೆ ಭೂ ಕುಸಿತ ಆಗಿದೆ ಅನ್ನೋದು ಗೊತ್ತಿಲ್ಲ.ಭೂಕುಸಿತ ಆಗಿರೋ ಜಾಗವನ್ನು  ನಾವೇ ಮುಚ್ಚುತ್ತೇವೆ ಎಂದು ತಿಳಿಸಿದರು.