ಭಾರತದ ಮುಂದೆ ಪಾಕಿಸ್ತಾನ ಶೂನ್ಯ..

0
1639

ಪಾಕಿಸ್ತಾನ ಕೇವಲ ಐದು ನಿಮಿಷದ ಅವಧಿಯೊಳಗೆ ದೆಹಲಿಯನ್ನು ಧ್ವಂಸಗೊಳಿಸುವಂತಹ ಸಾಮರ್ಥ ಹೊಂದಿದೆ ಎಂದು ಪಾಕಿಸ್ತಾನದ ಪರಮಾಣು ಪಿತಾಮಹ ಡಾ.ಅಬ್ದುಲ್ಲ್ ಖಾದೀರ್ ಖಾನ್ ಹೇಳಿದ್ದರು, ಆದರೆ ಪಾಕಿಸ್ತಾನದ ನಿಜ ಬಣ್ಣದ ಬಗ್ಗೆ ಇಲ್ಲಿದೆ ವಿವರಣೆ… ಓದಿ.

ಪಾಕಿಸ್ತಾನ ನೌಕಪಡೆಯ ಸಾಮರ್ಥ್ಯ ಕೇವಲ 14 ಯುದ್ದ ನೌಕೆಗಳು, 3 ಜಲಾಂತರ್ಗಾಮಿಗಳು ಹಾಗು 22000 ಯೋಧರು ಮಾತ್ರ ಹೊಂದಿದೆ, ಆದರೆ ಭಾರತದ 13 ಜಲಾಂತರ್ಗಾಮಿಗಳು, 1 ವಿಮಾನವಾಹಕ ಯುದ್ದ ನೌಕೆ, 150 ಕ್ಕೂ ಹೆಚ್ಚು ಯುದ್ದ ನೌಕೆಗಳು ಕಾರ್ಯ ನಿರ್ವಹಿಸುತ್ತಿವೆ.

ಇವರ ಬಳಿ ಇರೋದು 488 ಯುದ್ಧ ವಿಮಾನಗಳು, 150 ಹೆಲಿಕಾಪ್ಟರ್ ಗಳು, 10 ಸರಕು ಸಾಗಣೆ ಯುದ್ಧ ವಿಮಾನ ಹಾಗೂ 45000 ಯೋಧರು ಅಷ್ಟೇ, ಆದರೆ ಭಾರತದ ವಾಯುಪಡೆಯ ಬತ್ತಳಿಕೆಯಲ್ಲಿ 1200 ಕ್ಕೂ ಹೆಚ್ಚು ಯುದ್ದ ವಿಮಾನಗಳು. 600 ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳು, 200 ಕ್ಕೂ ಹೆಚ್ಚು ಸರಕು ಸಾಗಣೆ ಯುದ್ದ ವಿಮಾನಗಳಿವೆ.

ಇನ್ನೂ ಪಾಕಿಸ್ತಾನ ಭೂ ಸೇನೆಯ ಸಾಮರ್ಥ್ಯ ಭಾರತದ ಅರ್ಧದಷ್ಟು ಇಲ್ಲ. ಇಲ್ಲಿ ಒಟ್ಟು 6 ಲಕ್ಷ ಯೋಧರು, 5 ಲಕ್ಷ ಮೀಸಲು ಯೋಧರು, 3924 ಟ್ಯಾಂಕರ್ ಗಳು, 3500 ಇತರೆ ಗನ್ ಗಳು ಹಾಗೂ ಟ್ಯಾಂಕರ್ ಗಳು ಮಾತ್ರ ಇರೋದು , ಆದರೆ ಭಾರತದ ಒಟ್ಟು ಭೂ ಸೇನೆಯಲ್ಲಿ 14 ಲಕ್ಷ ಯೋಧರು, 21 ಲಕ್ಷ ಮೀಸಲು ಯೋಧರು, 13 ಲಕ್ಷ ಪಾರಮಿಲಿಟರಿ ಪಡೆ ಇದೆ. ಇದರ ಜೊತೆಗೆ ಶಕ್ತಿಶಾಲಿ 6000 ಕ್ಕೂ ಹೆಚ್ಚು ಯುದ್ದ ಟ್ಯಾಂಕರ್ ಗಳು, 4480 ಬಾರಿ ಗಾತ್ರದ ಗನ್ ಗಳು. 5000 ಕ್ಕೂ ಹೆಚ್ಚು ಇತರೆ ಯುದ್ದ ಟ್ಯಾಂಕರ್ ಹಾಗೂ ಸಾಮಾನ್ಯ ಗಾತ್ರದ ಗನ್ ಗಳು ಸೇರಿವೆ.

ಈ ವಿಚಾರವೆಲ್ಲಾ ಪಾಕಿಸ್ತಾನಕ್ಕೆ ತಿಳಿದಿಲ್ಲವೆಂದೇನಲ್ಲ, ಎಲ್ಲ ತಿಳಿದಿದಿದ್ದರೂ ಪಾಕ್ ಗೆ ಬುದ್ದಿ ಬಂದಿಲ್ಲ ಅಂದ್ರೆ ಭಾರಿ ಬೆಲೆ ತೆರಬೇಕಾಗಿರೋ ಮಾತ್ರ ಸತ್ಯ

source : google