ಮಾಸಾಲ ಮ್ಯಾಕ್ರೋನಿ ಮ್ಯಾಜಿಕ್:

0
1259

ಮಾಸಾಲ ಮ್ಯಾಕ್ರೋನಿ ಮ್ಯಾಜಿಕ್:

ಮ್ಯಾಕ್ರೋನಿ ಬೇಯಿಸುವ ವಿಧಾನ:

ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದು ಕುದಿಯಲು ಪ್ರಾರಂಬಿಸಿದಾಗ ಅದಕ್ಕೆ ಒಂದು ಚಮಚ ಅಡುಗೆ ಏಣ್ಣೆ ಹಾಗು ಅರ್ಧ ಚಮಚ ಉಪ್ಪನ್ನು ಹಾಕಿ, ಇದಕ್ಕೆ ಮ್ಯಾಕ್ರೋನಿಯನ್ನು ಹಾಕಿ ಐದು ನಿಮಿಷ ಕುದಿಸಿ, ಹೀಗೆ ಕುದಿಸಿದ ಮ್ಯಾಕ್ರೋನಿಯನ್ನು ತೂತವಿರುವ ಪಾತ್ರೆಗೆ ಸುರಿದು ನೀರನ್ನು ಬಸಿಯಿರಿ,ಬಸಿದ ಮ್ಯಾಕ್ರೋನಿಯನ್ನು ಏರಡು ಲೋಟ ತಣ್ಣಿರಿನಿಂದ ತೋಳೆದು ನೀರನ್ನು ಬಸಿದುಹೋಗಲು ಬಿಡಿ, ನೆನಪಿಡಿ ಮ್ಯಾಕ್ರೋನಿಯನ್ನು ಐದು ನಿಮಿಷಕಿಂತ ಜಾಸ್ತಿ ಕುದಿಸಬೇಡಿ, ಹೀಗೆ ಕುದಿಸಿದರೆ ಅದು ತುಂಬಾ ಮೆದುವಾಗಿ ಹಿಟ್ಟಿನಂತಾಗುತ್ತದೆ.

download (1)

ಸಾಮಗ್ರಿ:

ಮ್ಯಾಕ್ರೋನಿ, ಇನ್ನೂರು ಗ್ರಾಂ. ಕ್ಯಾಪ್ಸಿಕಂ ಒಂದು, ಕ್ಯಾರೆಟ್ ಎರಡು, ಹತ್ತು ಬೀನ್ಸ್, ಗರಂ ಮಸಾಲ ಒಂದು ಚಮಚ, ಶುಂಠಿ ಬೆಳ್ಳುಳ್ಳಿ ಪೆಸ್ಟ್ ಒಂದು ಚಮಚ, ಅಡುಗೆ ಏಣ್ಣೆ ಐವತ್ತು ಗ್ರಾಂ,ಈರುಳ್ಳಿ ಒಂದು,ಉಪ್ಪು

ವಿಧಾನ:

ಕ್ಯಾರೆಟ್, ಕ್ಯಾಪ್ಸಿಕಂ,ಬೀನ್ಸ್ ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದುಕಾದನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ ಸ್ವಲ್ಪಹೊತ್ತುಬಾಡಿಸಿ, ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೆಯಿಸಿ, ತರಕಾರಿ ಬೆಂದ ನಂತರ ಒಂದು ಚಮಚ ಗರಂ ಮಸಾಲಾವನ್ನು ಹಾಕಿ ಒಂದೆರಡು ನಿಮಿಷ ಬಿಡಿ, ಇದಕ್ಕೆ ಮೇಲಿ ಬೇಯಿಸಿಟ್ಟುಕೊಂಡ ಮ್ಯಾಕ್ರೋನಿಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಏರಡು ನಿಮಿಷ ಕ್ಯೆಯಾಡಿಸಿದರೆ ರುಚಿಯಾದ ಮಸಾಲಾ ಮ್ಯಾಕ್ರೋನಿ ಮ್ಯಾಜಿಕ್ ತಿನ್ನಲು ರೆಡಿ.