ಮುಖ್ಯಮಂತ್ರಿ ಬದಲಾಗಬೇಕು

0
852

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹ

ಹುಬ್ಬಳ್ಳಿ: ಸರಕಾರದ ಸಚಿವ ಸಂಪುಟ ಪುನಾರಚನೆ ಯಾದರೆ ಸಾಲದು, ಭಂಡತನ ಪ್ರದರ್ಶಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿ ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವಷ್ಟು ಆರೋಪ ಹೊತ್ತ ಸಚಿವರನ್ನು ಸಂಪುಟ ವಿಸ್ತರಣೆ ವೇಳೆ ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಲಾಗಿದೆ.

ಆದರೆ, ಅದಷ್ಟೇ ಅಭಿವೃದ್ಧಿಗೆ ಪೂರಕವಾಗುವು ದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಸಹ ಬದಲಾಗಬೇಕು. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದ ಅವರು ಅಸಮರ್ಥ ನಾಯಕರಾಗಿದ್ದಾರೆ ಎಂದು ಆರೋಪಿಸಿದರು. ನಾಲ್ಕೈದು ದಿನಗಳಿಂದ ಕಾಂಗ್ರೆಸ್ ಶಾಸಕರು ಹಾಗೂ ಸಚಿವ ಸ್ಥಾನದಿಂದ ನಿರ್ಗಮಿಸಿದ ಶಾಸಕರು ಮುಖ್ಯಮಂತ್ರಿ ವಿರುದ್ಧವೇ ಅಸಮಾ ಧಾನಗೊಂಡು ತೆರೆಮರೆಯ ರಾಜಕೀಯ ನಡೆಸುತ್ತಿದ್ದಾರೆ. ಅಭಿವೃದ್ಧಿ ಎನ್ನುವುದು ಸಂಪೂರ್ಣ ಕುಂಠಿತಗೊಂಡಿದ್ದು, ಆಡಳಿತ ಯಂತ್ರವೇ ಸ್ತಬ್ಧ ವಾಗಿದೆ. ಕುರ್ಚಿಗಾಗಿ ಕಿತ್ತಾಡುವುದರಲ್ಲೇ ಅತೃಪ್ತ ಶಾಸಕರು ಮಗ್ನವಾಗಿ ದ್ದಾರೆ. ದಿನಕ್ಕೊಂದು ಹೊಸ ನಾಟಕ ಮಾಡುತ್ತಿದ್ದಾರೆ ಎಂದರು.

ಸಮಂಜಸವಲ್ಲ

ವಿಧಾನ ಪರಿಷತ್ ಸಭಾಪತಿಯಾಗಿ ಡಿ.ಎಚ್. ಶಂಕರಮೂರ್ತಿಯವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬದಲಾವಣೆ ವಿಷಯ ಕುರಿತು ಪ್ರಸ್ತುತ ಸಂದರ್ಭದಲ್ಲಿ ಮಾತನಾಡುವುದು ಸಮಂಜಸವಲ್ಲ. ಹುದ್ದೆ ಖಾಲಿಯಿದ್ದಾಗ ಮಾತ್ರ ಪಕ್ಷದ ಮುಖಂಡರು ಒಂದೆಡೆ ಕುಳಿತು ಚರ್ಚೆ ನಡೆಸಬಹುದಿತ್ತು. ಸದ್ಯ, ಅದರ ಅವಶ್ಯಕತೆಯೇ ಇಲ್ಲ ಎಂದು ಶೆಟ್ಟರ್ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.