ಒಂದೇ ಮನೆಯ ವಿಧುರ ಮತ್ತು ವಿಧವೆಗೆ ಕಂಕಣಭಾಗ್ಯ

0
2167

ಮೊದಲನೇ ಮಗನಿಗೆ 2ನೇ ಮಗನ ಪತ್ನಿಯನ್ನು ಮದುವೆ ಮಾಡಿಸಿದ ತಂದೆ ಎಚ್.ಸಿ ಕರ್ನಾಟಕ ಗೃಹ ಮಂಡಳಿ ನಿಗಮದ ಅಧ್ಯಕ್ಷ ನಂಜಯನ್‍ ಮಠ್….

ಮನೆಯ ಯಜಮಾನನ 2ನೇ ಮಗ ಆಕಸ್ಮಿಕವಾಗಿ ಮೃತಪಟ್ಟದ್ದರಿಂದ ಪತ್ನಿ ವಿಧವೆಯಾದರು. ಇನ್ನು ಇದೇ ಮನೆಯ ಹಿರಿಯ ಮಗ, ತನ್ನ ಪತ್ನಿಯನ್ನ ಕಳೆದುಕೊಂಡು ವಿಧುರರಾಗಿದ್ದರು. ಈ ಸಮಯದಲ್ಲಿ ಮನೆಯ ಯಜಮಾನ, ವಿಧವೆ ಸೊಸೆಗೂ ಹಾಗೂ ವಿಧುರ ಹಿರಿಯ ಮಗನಿಗೂ ಮದುವೆ ಮಾಡಿಸಿದ್ದಾರೆ.

whatsapp-image-2016-09-19-at-1-23-58-pm

ಈ ರೀತಿ ಮದುವೆ ಮಾಡಿಸಿ ಹೊಸದೊಂದು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದವರು ಕರ್ನಾಟಕ ಗೃಹ ಮಂಡಳಿ ನಿಗಮದ ಅಧ್ಯಕ್ಷ ಎಚ್.ಸಿ ನಂಜಯನ್‍ಮಠ್. ಬಾಗಲಕೋಟೆ ತಾಲೂಕಿನ ಸುಳೇಭಾವಿಯವರಾದ ಇವರ 2ನೇ ಮಗ ವಿಶ್ವನಾಥ್ 6 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ವಿಶ್ವನಾಥ್ ಪತ್ನಿ ನಂದಿನಿ ಕಳೆದ 6 ವರ್ಷಗಳಿಂದ ವಿಧವೆಯಾಗಿದ್ದರು.

ಈಗ ಒಂದೂವರೆ ವರ್ಷದ ಹಿಂದೆ ಮೊದಲನೆ ಮಗ ರಾಜು ಅವರ ಪತ್ನಿ ಅನಾರೋಗ್ಯದಿಂದ ಸಾವೀಗೀಡಾದರು. ಹೀಗಾಗಿ ಮನೆಯಲ್ಲಿ ಗಂಡನಿಲ್ಲದ ಸೊಸೆ. ಹೆಂಡತಿಲ್ಲದ ವಿಧುರ ಮಗನನ್ನು ನಂಜಯನ್ ಮಠ್ ಅವರಿಗೆ ನೋಡಲಾಗಲಿಲ್ಲ. ಏನಾದರು ಮಾಡಬೇಕು ಎಂದುಕೊಂಡ ನಂಜಯನ್ ಮಠ್, ಇಬ್ಬರನ್ನು ಒಪ್ಪಿಸಿ ತಮ್ಮ ಕಿರಿಯ ಸೊಸೆ ನಂದಿನಿ ಹಾಗೂ ವಿಧುರನಾಗಿದ್ದ ಮಗ ರಾಜುಗೆ ಮದುವೆ ಮಾಡಿಸಿದ್ದಾರೆ.

ಗಣ್ಯರ ಹಾರೈಕೆ: ಒಂದೇ ಮನೆಯ ವಿಧುರ ಮತ್ತು ವಿಧವೆಗೆ ಕಂಕಣಭಾಗ್ಯ ಕೂಡಿ ಬಂದ್ದಿದ್ದೇ ಶುಭ ಸುದ್ದಿ. ಅಲ್ಲದೇ ಈ ಮದುವೆಗೆ ಅನೇಕ ಗಣ್ಯರು ಬಂದು ಆರ್ಶೀವಾದ ಮಾಡಿದ್ದಾರೆ ಎಂದು ಎಚ್.ಸಿ.ನಂಜಯ್‍ನ ಮಠ್ ತಮ್ಮ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸಮಾಜದಲ್ಲಿ ವಿಧವೆ, ವಿಧುರ ಎಂದರೆ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ ಅಂತಹುದರಲ್ಲಿ ತಮ್ಮ ಹಿರಿಯ ವಿಧುರ ಮಗನಿಗೆ, ಕಿರಿಯ ವಿಧವೆ ಸೊಸೆಯನ್ನು ಮದುವೆ ಮಾಡಿಸಿದ ನಂಜಯನ್ ಮಠ್ ಅವರ ಚಿಂತನೆಯನ್ನು ಶ್ಲಾಘಿಸಲೇಬೇಕು….