ಮೋದಿ ನಾಮಮುದ್ರಿತ ಸೂಟ್ ಗಿನ್ನೆಸ್ ದಾಖಲೆಗೆ ಸೇರ್ಪಡೆ

0
824

ನವದೆಹಲಿ: ಹರಾಜಿನಲ್ಲಿ ೪ ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಾಮಮುದ್ರಿತ ಸೂಟ್ ಇದೀಗ ವಿಶ್ವದ ಅತ್ಯಂತ ‘ದುಬಾರಿ ಸೂಟ್’ ಎಂಬುದಾಗಿ ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದಲ್ಲಿದ್ದಾಗ ಮೋದಿ ಅವರು ಧರಿಸಿದ್ದ ನಾಮಮುದ್ರಿತ ಸೂಟ್‌ಅನ್ನು ೨೦೧೫ರಲ್ಲಿ ಹರಾಜಿಗಿಡಲಾಗಿತ್ತು.

ಗುಜರಾತಿನ ಸೂರತ್‌ನ ವಜ್ರದ ವ್ಯಾಪಾರಿ ಲಾಲಜಿಭಾಯಿ ತುಳಸಿಭಾಯಿ ಪಟೇಲ್ ಎಂಬುವರು ಹರಾಜಿನಲ್ಲಿ ಭಾಗವಹಿಸಿದ್ದ ೪೭ ಜನರನ್ನು ಹಿಂದಿಕ್ಕಿ ಸೂಟ್‌ಅನ್ನು ೪, ೩೧, ೩೧,೩೧೧ (ನಾಲ್ಕು ಕೋಟಿ ಮೂವತ್ತೊಂದು ಲಕ್ಷದ ಮೂವತ್ತೊಂದು ಸಾವಿರ ಮೂರು ನೂರ ಹನ್ನೊಂದು) ರೂಪಾಯಿ ಮೌಲ್ಯಕ್ಕೆ ತಮ್ಮದಾಗಿಸಿಕೊಂಡಿದ್ದರು.

ಮೋದಿ ಈ ಸೂಟ್ ಧರಿಸಿದ ನಂತರ ವಿಪಕ್ಷದಿಂದ ಸೂಟು ಬೂಟು ಸರ್ಕಾರ ಎಂಬ ಟೀಕೆಗೆ ಗುರಿಯಾಗಿದ್ದರು. ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ವಿರಾಣಿ ೧೧ ಲಕ್ಷ ಮೌಲ್ಯದ ಸೂಟನ್ನು ತಮ್ಮ ಮಗಳ ಮದುವೆ ಸಮಾರಂಭದ ವೇಳೆ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.