ರಾಧಿಕಾಗೆ ಯಶ್ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?

0
2253

ಸ್ಯಾಂಡಲ್‌ವುಡ್‌ನ ಕ್ವೀಟ್ ಕಪಲ್ ಎಂದೇ ಹೆಸರಾದ ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸ್ನೇಹಿತರಾಗಿದ್ದ ಇವರಿಬ್ಬರು ಪ್ರೇಮಿಗಳಾಗಿದ್ದು ಯಾವಾಗ? ಯಾರು ಮೊದಲು ಪ್ರಪೋಸ್ ಮಾಡಿದ್ದು? ಎಲ್ಲಿ ಮದುವೆ ಆಗ್ತಾರೆ? ಯಾವಾಗ ಆಗ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಈ ಯುವ ಜೋಡಿ ಉತ್ತರಿಸಿದ್ದಾರೆ.

ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ಬೆಂಗಳೂರಿಗೆ ಹಿಂತಿರುಗಿದ ನಂತರ ಈ ಜೋಡಿ ಪತ್ರಿಕಾಗೋಷ್ಠಿ ನಡೆಸಿತು. ನಿಶ್ಚಿತಾರ್ಥಕ್ಕೆ ಹಾರೈಸಿದ ಅಭಿಮಾನಿಗಳು ಹಾಗೂ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ ನಂತರ ಈ ಜೋಡಿ ಎಲ್ಲರಿಗೆ ಕುತೂಹಲ ಕೆರಳಿಸಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

12345678
ಮದುವೆ ಯವಾಗ?
ಜನವರಿಯಲ್ಲಿ ಮದುವೆ ಮಾಡಬೇಕು ಎಂದು ಮಾತುಕತೆ ನಡೆಯುತ್ತಿದೆ. ಆದರೆ ಎರಡೂ ಕುಟುಂಬಗಳ ಹಿರಿಯರು ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಮೊದಲು ಪ್ರಪೋಸ್ ಮಾಡಿದ್ದು ಯಾರು?
ನಾನು ಎಂದು ಯಶ್ ಒಪ್ಪಿಕೊಳ್ಳುತ್ತಿದ್ದಂತೆ ಮಧ್ಯಪ್ರವೇಶಿಸಿದ ರಾಧಿಕಾ, ನನಗೆ ಫೋನ್‌ನಲ್ಲಿ ಪ್ರಪೋಸ್ ಮಾಡಿದರು. ಸಾಕಷ್ಟು ಸಿನಿಮಾಗಳಲ್ಲಿ ನಾವು ಪ್ರಪೋಸ್ ಮಾಡಿರುತ್ತೇವೆ. ಆದರೆ ನಮ್ಮ ಜೀವನದಲ್ಲಿ ಸಿನಿಮಾ ಶೈಲಿಯಲ್ಲಿ ನೇರವಾಗಿ ಆಗದೇ ಫೋನ್‌ನಲ್ಲಿ ಆಯಿತಲ್ಲಾ ಎಂದು ಯಾವಾಗಲೂ ಯಶ್ ಅವರನ್ನು ಕೇಳುತ್ತಿರುತ್ತೇನೆ.

ಪ್ರೇಮಿಗಳಾಗಿದ್ದು ಯಾವಾಗ?
ನಾವಿಬ್ಬರು ಧಾರವಾಹಿಗಳಲ್ಲಿ ನಟಿಸುತ್ತಿದ್ದಾಗ ಪ್ರೇಮಿಸುತ್ತಿದ್ದೆವು ಎಂದು ಮಾತುಗಳು ಕೇಳಿದೆವು. ಅದು ಸುಳ್ಳು. ನಾವಿಬ್ಬರು ಕಳೆದ ೫ ವರ್ಷಗಳಿಂದ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧ ಬೆಳೆದಿತ್ತು. ಮೊದಲ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಅವರ ಮನೆಗೆ ಹೋದಾಗ ಮನೆಯಲ್ಲಿ ಈ ವಿಷಯ ಗೊತ್ತಾಯಿತು ಎಂದು ರಾಧಿಕಾ ವಿವರಿಸಿದರು.

ಗೋವಾದಲ್ಲೇ ಯಾಕೆ ನಿಶ್ಚಿತಾರ್ಥ ಆಗಿದ್ದು?
ಗೋವಾದಲ್ಲಿ ನಿಶ್ಚಿತಾರ್ಥ ಆದ ಬಗ್ಗೆ ಕೆಲವು ಮಾತುಗಳು ಕೇಳಿ ಬಂದಿದೆ. ಆದರೆ ನಮ್ಮ ತಾಯಿ ಹಾಗೂ ಅಜ್ಜಿ ಮನೆ ಗೋವಾದಲ್ಲಿದೆ. ಇಲ್ಲಿ ನಮ್ಮ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಶ್ಚಿತಾರ್ಥ ಅನ್ನೋದು ಹೆಣ್ಣಿನ ಮನೆಯ ಸಂಭ್ರಮ ಆಗಿರೋದರಿಂದ ಗೋವಾದಲ್ಲಿ ಮಾಡಲು ನಿರ್ಧರಿಸಿದೆವು ಎಂದು ರಾಧಿಕಾ ಪಂಡಿತ್ ಹೇಳಿದರು.

ಗೋವಾದಲ್ಲಿ ನಿಶ್ಚಿತಾರ್ಥ ಆಗಿದ್ದಕ್ಕೆ ಬಂದ ಪ್ರತಿಕ್ರಿಯೆ ಹೇಗಿತ್ತು?
ನಾಡು-ನುಡಿಯ ಪ್ರಶ್ನೆ ಬಂದಾಗ ನಾವು ಕರ್ನಾಟಕದ ಬಗ್ಗೆ ಹೋರಾಟಕ್ಕೆ ಇಳಿದಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಆದರೆ ಇದು ಕುಟುಂಬದ ಕಾರ್ಯಕ್ರಮ. ಅಲ್ಲದೇ ನಾವು ಭಾರತೀಯರು ಹೌದು. ಪಾಕಿಸ್ತಾನದಲ್ಲಿ ಆಗಿದ್ದಕ್ಕೆ ಪ್ರಶ್ನಿಸಬಹುದು. ಆದರೆ ಗೋವಾದಲ್ಲಿ ಆದರೆ ಯಾಕೆ ಸಿಟ್ಟು? ಎಂದು ಯಶ್ ಖಾರವಾಗಿ ಉತ್ತರಿಸಿದರು