ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಬಂಧನ

0
1098

ನವದೆಹಲಿ: ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ರೋಹಿತ್ ಕುಮಾರ್ ಚಿಲ್ಲರ್ ಅವರ ಪತ್ನಿ ಲಲಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ರೋಹಿತ್ ಅವರನ್ನು ಬಂಧಿಸಿದ್ದಾರೆ.

ಡೆತ್ ನೋಟ್‌ನಲ್ಲಿ ಲಲಿತಾ ಅವರು ಬರೆದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ರೋಹಿತ್ ಅವರ ಶೋಧ ನಡೆಸಿದ್ದರು. ಪತ್ನಿ ಆತ್ಮಹತ್ಯೆ ಬಳಿಕ ಇವರು ಕಾಣಿಸಿಕೊಂಡಿರಲಿಲ್ಲ. ರೋಹಿತ್ ಅವರ ತಂದೆ ಸಹ ಗುರುವಾರ ದೆಹಲಿ ಪೊಲೀಸರಿಗೆ ಶರಣಾಗಿದ್ದರು.

ಮೃತ ಲಲಿತಾ (೨೭) ಅವರ ತಂದೆ ಸೋಮವಾರ ಸಂಜೆ ನಾಗಾಲೆಂಡ್‌ನ ಅಶೋಕ್ ಬಡವಾಣೆಯಲ್ಲಿ ತಮ್ಮ ಪುತ್ರಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೋಠಡಿಯನ್ನು ಪರಿಶೀಲಿಸಿದ್ದರು. ಲಲಿತಾಳ ತಂದೆ ಕರಣ್ ಸಿಂಗ್ ಅವರು ರೋಹಿತ್ ಹಾಗೂ ಅವರ ಪೋಷಕರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ರೋಹಿತ್ ಕುಟುಂಬಕ್ಕೆ ಗುರುವಾರ ನಾಗೋಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

ರೋಹಿತ್ ಅವರು ನಾಲ್ಕನೇ ಆವೃತ್ತಿಯ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಪರ ಕಾಣಿಸಿಕೊಂಡಿ ದ್ದರು. ಕಳೆದ ಆರು ತಿಂಗಳ ಹಿಂದೆ ರೋಹಿತ್ ಅವರು ಲಲಿತಾ ಅವರನ್ನು ಮದುವೆ ಆಗಿದ್ದರು.