ದ್ರಾವಿಡ್ ಹಾದಿಯಲ್ಲಿ ರಾಹುಲ್

0
1186

ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿಹೆಚ್ಚು ರನ್ ಮತ್ತು ಅತಿಹೆಚ್ಚು ಶತಕ ಹೊಡೆದಿರೋದು ವಿದೇಶದಲ್ಲಿ. ಭಾರತಕ್ಕಿಂತ ಹೊರದೇಶದಲ್ಲಿ ದ್ರಾವಿಡ್ ಕಮಾಲ್ ಮಾಡಿದ್ದಾರೆ. ಈಗ ಅದೇ ಹಾದಿಯಲ್ಲಿ ರಾಹುಲ್ ಸಾಗುತ್ತಿದ್ದಾರೆ. ಆಲ್ ದ ಬೆಸ್ಟ್ ರಾಹುಲ್.

ಆಗಸ್ಟ್ 01: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಆಕರ್ಷಕ ಶತಕ ಗಳಿಸಿದ್ದು ತಿಳಿದಿರಬಹುದು. 96ರನ್ ಆಗಿದ್ದಾಗ ಚೇಸ್ ಅವರ ಎಸೆತವನ್ನು ಸಿಕ್ಸರ್ ಬಾರಿಸಿ ನೂರರ ಗಡಿ ದಾಟಿದರು. ಈ ರೀತಿ ಸಿಕ್ಸ್ ಬಾರಿಸಿ, ಶತಕ ಗಳಿಸಿದ್ದೇಕೆ? ಎಂಬುದನ್ನು ರಾಹುಲ್ ವಿವರಿಸಿದ್ದಾರೆ. 24 ವರ್ಷ ವಯಸ್ಸಿನ ಕನ್ನಡಿಗ ಲೋಕೇಶ್ ರಾಹುಲ್ ಅವರು ತಮ್ಮ 6ನೇ ಟೆಸ್ಟ್ ಪಂದ್ಯದ 11ನೇ ಇನ್ನಿಂಗ್ಸ್ ನಲ್ಲಿ ಭಾನುವಾರದಂದು ಭರ್ಜರಿ ಶತಕ ಗಳಿಸುವ ಮೂಲಕ ತಂಡ ಮೇಲುಗೈ ಗಳಿಸಲು ನೆರವಾದರು.

– ಕೆ.ಎಲ್. ರಾಹುಲ್ ಜೀವನಶ್ರೇಷ್ಠ 158 – ಭಾರತ 358/5; ಮುನ್ನಡೆ 162 ರನ್

ಕಿಂಗ್ಸ್ಟನ್ (ಜಮೈಕಾ): ಆರಂಭಕಾರ ಕೆ.ಎಲ್. ರಾಹುಲ್ ಅವರ 158 ರನ್ನುಗಳ ಜೀವನಶ್ರೇಷ್ಠ ಬ್ಯಾಟಿಂಗ್ ಸಾಧನೆಯೊಂದಿಗೆ ಕಿಂಗ್ಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಭಾರೀ ಮುನ್ನಡೆಯೊಂದಿಗೆ ದಾಪುಗಾಲಿಕ್ಕಿದೆ. 2ನೇ ದಿನದಾಟದ ಅಂತ್ಯಕ್ಕೆ ಇನ್ನೂ 5 ವಿಕೆಟ್ಗಳನ್ನು ಕೈಲಿರಿಸಿಕೊಂಡು 162 ರನ್ನುಗಳ ಲೀಡ್ ಗಳಿಸಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಕೆರಿಬಿಯನ್ನರ ಮೇಲೆ ಒತ್ತಡ ಹೇರುವುದು ಕೊಹ್ಲಿ ಪಡೆಯ ಯೋಜನೆ. ಆಗ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶವೇ ಮರುಕಳಿಸುವುದು ಬಹುತೇಕ ಖಚಿತ.

ಭಾರತ ಒಂದಕ್ಕೆ 126 ರನ್ ಮಾಡಿದಲ್ಲಿಂದ ದಿನದಾಟ ಆರಂಭಿಸಿತ್ತು. ಆಗ ರಾಹುಲ್ 75, ಪೂಜಾರ 18ರಲ್ಲಿದ್ದರು. ಮೊದಲ ದಿನವೇ ಶತಕದ ನಿರೀಕ್ಷೆ ಮೂಡಿಸಿದ್ದ ಕನ್ನಡಿಗ ರಾಹುಲ್ ಭೋಜನ ವಿರಾಮದೊಳಗೆ ಈ ಸಂಭ್ರಮವನ್ನಾಚರಿಸಿದರು. 182 ಎಸೆತಗಳಿಂದ ಅವರ ಸೆಂಚುರಿ ಪೂರ್ತಿಗೊಂಡಿತು. ಇದು 6ನೇ ಟೆಸ್ಟ್ನಲ್ಲಿ ರಾಹುಲ್ ಹೊಡೆದ 3ನೇ ಶತಕ. ಅವರ ಹಿಂದಿನೆರಡು ಶತಕಗಳೂ ವಿದೇಶದಲ್ಲೇ ಬಂದಿದ್ದವು. ಇದಕ್ಕೂ ಮೊದಲು ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ 110 ಹಾಗೂ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ 108 ರನ್ ಹೊಡೆದಿದ್ದರು.