ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮುಗಿಲೇರಿದ ಹಣ್ಣು, ಹೂ.

0
1810

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜನರು ಮಾರುಕಟ್ಟೆ ಕಡೆ ಮುಖ ಮಾಡಿದ್ದು ಹೂವು-ಹಣ್ಣು ಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಹಬ್ಬ ಬಂತೆಂದರೆ ಹೂ-ಹಣ್ಣುಗಳ ಬೆಲೆ ಹೆಚ್ಚುತ್ತವೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಆಚರಿಸದೆ ಇರಲಾಗದು. ಹೀಗಾಗಿ ಎಷ್ಟೇ ದುಬಾರಿಯಾದರೂ ಖರೀದಿಸುವ ಅನಿವಾರ್ಯತೆ ಇದೆ ಎಂದು ಕರಿದಿಸುತಿರುವ ಜನ.

ಎರಡು ದಿನದಿಂದಲೇ ಹಬ್ಬದ ಸಿದ್ಧತೆ ಶುರುವಾಗಿದ್ದು, ಗುರುವಾರ ಜನರು ಮಾರ್ಕೆಟ್ ಗಳತ್ತ ಮುಖ ಮಾಡಿದ್ದಾರೆ. ಹೂವು ಹಣ್ಣುಗಳ ದರ ಕೇಳಿ ಒಮ್ಮೆ ದಂಗಾದರೂ ಹಬ್ಬಕ್ಕೆ ಅನಿವಾರ್ಯ ಎಂದು ಕೊಂಡುಕೊಳ್ಳುತ್ತಿದ್ದಾರೆ. ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಜಯನಗರ 4ನೇ ಬ್ಲಾಕ್, ಎನ್ ಆರ್ ಕಾಲೋನಿ, ಬಸವನಗುಡಿ ಸೇರಿದಂತೆ ಎಲ್ಲ ಕಡೆ ಜನ ಧಾವಿಸುತ್ತಿದ್ದಾರೆ

ಹೂವಿನ ದರ ಪಟ್ಟಿನೋಡಿ : ಬಾಳೆ ದಿಂಡು  60 ರೂಪಾಯಿ, ಬಾಳೆ ಎಲೆ 5 ರೂ, ಕಮಲದ ಜೋಡಿ ಹೂ  20 ಇತ್ತು50 ಆಗಿದೆ, ಮಲ್ಲಿಗೆ ಮಾರಿಗೆ    100 ಇತ್ತು 250 ಆಗಿದೆ , ಸೇವಂತಿಗೆ ಮಾರಿಗೆ 150 ರೂ, ಕನಕಾಂಬರ ಕೆಜಿಗೆ ೫೦೦ ಇತ್ತು 2000 ಆಗಿದೆ, ಕನಕಾಂಬರ ಮಾರಿಗೆ 100 ಇತ್ತು 400 ಆಗಿದೆ. ಗಗನಕ್ಕೇರಿದ ಕನಂಕಾಬರ ಹಾಗೂ ಮಲ್ಲಿಗೆ ಹೂವಿನ ದರ

ಹಣ್ಣುಗಳ ದರ: ಆಪಲ್ ೧೪೦,  ಬಾಳೆ ಹಣ್ಣು 80 ಇತ್ತು 100 ಆಗಿದೆ, ಕಿತ್ತಳೆ ಹಣ್ಣು 120, ಸೀತಾಫಲ 100, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮೂರು ಪಾಲು ಹೆಚ್ಚಾದ ದರ.

ಮುಂಜಾನೆ ಇದ್ದ ದರ ಸಂಜೆಗೆ ಇರುವುದಿಲ್ಲ. ಮಳೆ ಬಿದ್ದಿರುವ ಕಾರಣ ನಾಗರಿಕರು ಸಂಜೆ ಒಮ್ಮೆಲೆ ಮಾರುಕಟ್ಟೆಗೆ ಧಾವಿಸಲಿದ್ದು ಎಲ್ಲ ದರಗಳಲ್ಲಿ 5 ರಿಂದ 10 ರು. ಏರಿಕೆಯಾದರೂ ಆಶ್ಚರ್ಯವಿಲ್ಲ.