ವಿಶ್ವದ ಅತ್ಯಂತ ಪುರಾತನ ಚಿನ್ನ ಪತ್ತೆಯಾಗಿದೆ

0
2080

ಕಿ.ಪೂರ್ವ 4500 ವರ್ಷಗಳ ಹಿಂದೆಯೇ ಚಿನ್ನದ ಮಹತ್ವವನ್ನು ಜನರು ಅರಿತಿದ್ದರು. ಇದಕ್ಕೆ ಪುರಾವೆ ಎಂಬಂತೆ ಬಲ್ಗೇರಿಯನ್ ಪ್ರಾಚ್ಯಶಾಸಜ್ಞರು ಚಿನ್ನದ ಕಲಾಕೃತಿಯನ್ನು ಉತ್ಖನನ ಮಾಡಿದ್ದಾರೆ. ಅಷ್ಟೆ ಅಲ್ಲ ಇದನ್ನು ವಿಶ್ವದ ಅತ್ಯಂತ ಪುರಾತನ ಚಿನ್ನದ ಕಲಾಕೃತಿ ಎಂದು ನಂಬಲಾಗಿದೆ.

6.2 ಮಿ.ಮಿ ಸುತ್ತಳತೆ ಹೊಂದಿದೆ

0.005 ಔನ್ಸ್ ತೂಕವಿದೆ

6,500 ವರ್ಷದ ಹಿಂದನ ಚಿನ್ನದಹಾರದಲ್ಲಿನ ಒಂದು ತುಣಕು ಇದಾಗಿದೆ

ಸುರ್ವಣ ಕಾಲ : ಬಲ್ಗೇರಿಯನ್ ಪ್ರಾಚ್ಯಶಾಸಜ್ಞರ ಉತ್ಖನನದಲ್ಲಿ ದೊರೆತಿರುವ ಚಿನ್ನದ ಆಭರಣ ಸುಮಾರು ಕ್ರಿ.ಪೂ 4,500-4,600ನೇ ಶತಮಾನಕ್ಕೆ ಸೇರಿದೆ ಎಂದು ಅಂದಾಜಿಸಲಾಗಿದೆ.

ಸಿಕ್ಕಿದ್ದು ಎಲ್ಲಿ ? ಬಲ್ಗೇರಿಯಾದ ದಕ್ಷಿಣ ಭಾಗದ ಪಝರ್ಡ್ಜಿರ್‌ನಗರದ ಹೊರಭಾಗದಲ್ಲಿ ಉತ್ಖನನ ನಡೆಸಿದಾಗ ಈ ಚಿನ್ನದ ಕಲಾಕೃತಿ ಸಿಕ್ಕಿದ್ದು , ಸದ್ಯ ಇದನ್ನು ಪಝರ್ಡ್ಜಿರ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಕೋಟೆ ಕಟ್ಟಿದ್ದರು

ಈ ಚಿನ್ನದ ಮಣಿ ತಾಮ್ರ ಯುಗಕ್ಕೆ ಸೇರಿದ್ದು, ಯೂರೋಪಿಯನ್ನರಲ್ಲಿ ಆರಂಭವಾದ ಮೊದಲ ನಾಗರೀಕತೆ ಕುರುಹು ಇದು ಎಂದು ಹೇಳಲಾಗುತ್ತಿದೆ. ಜತೆಗೆ ಪಝರ್ಡ್ಜಿರ್‌ನಲ್ಲಿ 4500 ವರ್ಷಗಳ ಹಿಂದೆ ಅಂತ್ಯಂತ ಶ್ರೀಮಂತವಾದ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿದ ನಾಗರೀಕತೆ ಇತ್ತು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಸ್ಥಳ 12 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ಇದರ ಸುತ್ತ 9 ಅಡಿ ತ್ತರದ ಕೋಟೆಯನ್ನು ಕಟ್ಟಲಾಗಿದೆ.

ಪಕ್ಷಿ ಪೂಜೆ

ಉತ್ಖನನದ ವೇಳೆ 150ಕ್ಕೂ ಹಚ್ಚಿನ ಮಡಿಕೆ ಚೂರುಗಳು ಸಿಕ್ಕಿದ್ದು , ಪಕ್ಷಿಗಳ ಪ್ರತಿಮೆಗಳೂ ಸಿಕ್ಕಿವೆ, ಅಷ್ಟೆ ಅಲ್ಲ ಈ ನಾಗರೀಕತೆಯಲ್ಲಿ ಈ ಪಕ್ಷಿಗಳನ್ನು ಪೂಜಿಸುಲಾಗುತ್ತಿತ್ತು ಎಂದುನಂಬಲಾಗಿದೆ.

“ಇದು ಅತ್ಯಂತ ಮಹತ್ವದ ಉತ್ಖನನ ವಾಗಿದೆ. ಈ ಮಣಿಯಿಂದ ಮಾನವನ ನಾಗರೀಕನಾಗಲು ಹೊರಟ ಆರಂಭದ ಇತಿಹಾಸ ತಿಳಿಯಲಿದೆ.”

ಯಾವೊರ್ ಬೊಯ್ವ್ ಬಲ್ಗೇರಿಯನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ