ವಿಶ್ವಸಂಸ್ಥೆ ವರದಿ : ಸಮುದ್ರ ಮಟ್ಟ ಏರಿಕೆಯಿಂದ 40 ದಶಲಕ್ಷ ಭಾರತೀಯರಿಗೆ ಸಂಕಷ್ಟ.

0
4527

ವಿಶ್ವಸಂಸ್ಥೆ:  ಸಮುದ್ರ ಮಟ್ಟ ಏರಿಕೆಯಿಂದಾಗಿ 2050 ರ ವೇಳೆಗೆ ಸುಮಾರು 40 ಮಿಲಿಯನ್ ಭಾರತೀಯರು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಅಭಿವೃದ್ಧಿ ಮತ್ತು ಕ್ಷಿಪ್ರ ನಗರೀಕರಣದ ಪ್ರಭಾವದಿಂದಾಗಿ ಕೋಲ್ಕೊತಾ ಮತ್ತು ಮುಂಬೈ ಕರಾವಳಿ ತೀರದ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದೆ.

ದಕ್ಷಿಣ ಫೆಸಿಫಿಕ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳು ಕೆಟ್ಟ ಹವಾಮಾನದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಾಗತಿಕ ಪರಿಸರ ಔಟ್ ಲುಕ್ ತಿಳಿಸಿದೆ.

ಏಷ್ಯಾ ಪೆಸಿಫಿಕ್ ಪ್ರದೇಶದ 10 ದುರ್ಬಲ ದೇಶಗಳಲ್ಲಿ 2050 ರ ವೇಳೆಗೆ ಸಮುದ್ರ ಮಟ್ಟ ಏರಿಕೆಯಿಂಗಾಗಿ ಜನರು ತೊಂದರೆಗೆ ಸಿಲುಕಲಿದ್ದಾರೆ ಎಂದು ಹೇಳಿದೆ.

ಬಾಂಗ್ಲಾದ 25 ಮಿಲಿಯನ್ ಜನ, ಚೀನಾದ 15 ಮಿಲಿಯನ್ ಜನ ಹಾಗೂ ಭಾರತದ 40 ಮಿಲಿಯನ್ ಜನ ಸಮುದ್ರ ಮಟ್ಟ ಏರಿಕೆಯಿಂದಾಗಿ ತೊಂದರೆ ಅನುಭವಿಸಲಿದ್ದಾರೆ.

ನಗರೀಕರಣ, ನಗರಗಳ ಬೆಳವಣಿಗೆ ಸೇರಿದಂತೆ ಹಲವು ಕಾರಣದಿಂದ ನೈಸರ್ಗಿಕ ಕರಾವಳಿ ತೀರದ ಸಾಮರ್ಥ್ಯವನ್ನು ಕಡಿಮೆ ಮಾಡುವುದರಿಂದ ಹವಾಮಾನ ತೀರ ಹದಗೆಡುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ಭಾರತದ ಕೋಲ್ಕೊತಾ ಮತ್ತು ಮುಂಬಯಿ, ಚೀನಾದ ಶಾಂಘೈ ಮತ್ತು ಗುಂಝೋವು, ಬಾಂಗ್ಲಾದ ಡಾಕಾ,  ಮ್ಯಾನ್ಮಾರ್ ನ ಯಾಂಗೋನ್, ಥೈಲ್ಯಾಂಡ್ ನ ಬ್ಯಾಂಕಾಕ್ ಗಳು 2070ರ ವೇಳೆಗೆ ಸಮುದ್ರ ಮಟ್ಟದ ಏರಿಕೆಯಿಂದಾಗಿ ಪ್ರವಾಹ ಎದುರಿಸಬೇಕಾಗುತ್ತದೆ.