ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ ತಿಳಿಯಿರಿ!!

0
1386

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಾದ್ಯಂತ ವಿಜೃಂಭಣೆಯಿಂದೆ ಆಚರಿಸಲ್ಪಡುತ್ತದೆ, ಭಗವಾನ್ ವಿಷ್ಣು ಈ ದಿನದಂದು ಶ್ರೀ ಕೃಷ್ಣನ ರೂಪ ತಳೆದನೆಂದು ನಂಬಿಕೆಯಿದೆ. ಶ್ರೀ ಕೃಷ್ಣನು ಶ್ರವಣದ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ಜನ್ಮ ತಳೆದಿದ್ದಾನೆ ಎನ್ನುತ್ತದೆ ಪುರಾಣ..Screenshot_1-1

ಆಚರಣಾ ವಿಧಾನ!

ಶ್ರೀ ಕೃಷ್ಣನ ಜನನ ಕಥನವನ್ನು ಬಹುತೇಕ ಹಿಂದೂ ಕುಟುಂಬಗಳೂ ಹಾಗು ದೇವಸ್ಥಾನಗಳಲ್ಲಿ ಪಠಿಸಲ್ಪಡುತ್ತದೆ. ಆ ಕಥನವು ಶ್ರೀ ಕೃಷ್ಣ ಪರಮಾತ್ಮನ ದಿವ್ಯ ಶಕ್ತಿಯನ್ನು ಸಾರುತ್ತದೆ, ಅದರ ಜೊತೆ ಭಜನೆ, ಸಂಗೀತ ಕಾರ್ಯಕ್ರಮಗಳೂ ಕೂಡ ಬಲು ವಿಜೃಂಭಣೆಯಿಂದೆ ಇರುತ್ತದೆ.

ಶ್ರೀ ಕೃಷ್ಣನ ಪುಟ್ಟ ಮೂರ್ತಿಯನ್ನು ಒಂದು ಪುಟ್ಟ ತೊಟ್ಟಿಲೊಳಗೆ ಇರಿಸಿ, ಭಕ್ತಾದಿ ವೃಂದವೆಲ್ಲಾ ಕೃಷ್ಣನಿಗೆ ಜೋಕಾಲಿ ಹಾಡಿ ಭಕ್ತಿಯ ಪರವಶದಲ್ಲಿ ಮುಳುಗಿರುತ್ತಾರೆ. ಭಕ್ತಾದಿವರ್ಗವೆಲ್ಲರೂ ನಿಟ್ಟುಪವಾಸ ಆಚರಿಸುತ್ತಾರೆ, ಅಂದರೆ ಮರುದಿನದವರೆಗೂ ಒಂದು ಹನಿ ನೀರು ಕೂಡ ಸೇವಿಸುವುದಿಲ್ಲ. ಶ್ರೀ ಕೃಷ್ಣನ ದೇವಸ್ಥಾನಗಳಲ್ಲಂತೂ ಸುಮಧುರ ಸುವಾಸೆನೆಯ ಹೂವು, ಕರ್ಪೂರದ ಗಂಧ ಹಾಗೂ ಘಂಟೆ ನಾದ ದೈವಿಕ ವಾತಾವರಣವನ್ನು ಸೃಷ್ಟಿಸಿ ಭಕ್ತರನ್ನು ಭಕ್ತಿಯ ಪರಕಷ್ಠೆಯಲ್ಲಿ ತೇಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Bhagavad-Gita

ಜನ್ಮಾಷ್ಟಮಿಯ ಮಹತ್ವ:

ಪರಮಾತ್ಮನು ಗೀತೆಯಲ್ಲಿ ಹೇಳುತ್ತಾನೆ,

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|

ಅಭ್ಯುತ್ಥಾನಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ ತಾಮ್|

ಧರ್ಮಸಂಸ್ಥಾಪನಾಥಾಯ ಸಂಭವಾಮಿ ಯುಗೇ ಯುಗೇ||||

ಇದರ ಅರ್ಥ, ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ (ಪ್ರತಿ ಯುಗದಲ್ಲೂ ಪುನಾರಾವರ್ತಿತವಾಗುವ ವಿದ್ಯಮಾನವಿದು), ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ.

ಜನ್ಮಾಷ್ಟಮಿಯ ಮಹೋದ್ದೇಶ, ಸೌಹಾರ್ಧತೆಯಿಂದ ಧರ್ಮವನ್ನು ಕಾಪಾಡುವುದು ಮತ್ತು ದ್ವೇಷ, ಅಸೂಯೆ ಎಂಬ ದುಶಕ್ತಿಗಳಿಂದ ದೂರವಿರುವುದು. ಇದರ ಜೊತೆ ಹಲವಾರು ಸಮುದಾಯಗಳು ಒಟ್ಟಿಗೆ ಕೂಡಿ ಆಚರಿಸುವುದರಿಂದ ಏಕತೆಯನ್ನು ನಾವು ಕಾಣಬಹುದು.