ಸಂಚಾರ ನಿಯಮಗಳ ಉಲ್ಲಂಘಿಸಿದ್ರೆ ಭಾರಿ ದಂಡ! ಹುಷಾರ್…

0
1526

ಮೋಟಾರು ವಾಹನ ತಿದ್ದುಪಡಿ ವಿದೇಯಕಕ್ಕೆ ಸಂಪುಟ ಅಸ್ತು ಹೆಲ್ಮೆಟ್ ಧರಿಸದಿದ್ದರೆ 2 ಸಾವಿರ ದಂಡ, 3 ತಿಂಗಳ ಜೈಲು ಖಚಿತ

ನವದೆಹಲಿ: ನಿಯಮ ಉಲ್ಲಂಘನೆ ಮಾದುವವರಿಗೆ ದಂಡ ವಿಧಿಸುವ ಬಹು ನೀರಿಕ್ಷಿತ ಮೋಟಾರು ವಾಹನ (ತಿದ್ದುಪಡಿ)ವಿದೇಯಕ-2016ಕ್ಕೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ನೂತನ ನಿಯಮ ಉಲ್ಲಂಘಿಸುವ ವಾಹನ ಸವಾರರು ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಅದರಂತೆ, ಮದ್ಯ ಪಾನ ಮಾಡಿ ವಾಹನ ಚಲಾಯಿಸುವವರಿಗೆ ರೂ.10 ಸಾವಿರ, ಹಿಟ್ ಆ್ಯಂಡ್ ರನ್ (ಗುದ್ದೋಡು) ಪ್ರಕರಣಗಳಿಗೆ ರೂ.2 ಲಕ್ಷದವರೆಗೂ ದಂಡವಿದಿಸಲಾಗುತ್ತದೆ. ಅಲ್ಲದೆ, ಈ ಕಾಯ್ದೆಯ ಪ್ರಾಕರ, ರಸ್ತೆ ಅಪಘಾತದಿಂದ ಮೃತಪಟ್ಟರೆ, ಅಂಥವರಿಗೆ ರೂ.10 ಲಕ್ಷದವರೆಗೂ ಪರಿಹಾರ ನೀಡಲು ಅವಕಾಶವಿದೆ.

“ಪ್ರಾಧನಿ ಮೋದಿ ನೇತೃತ್ವದ ಸಂಪುಟವು ಬುಧವಾರ ಈ ಮೋಟಾರು ವಾಹನ ಕಾಯ್ದೆ-2016ರ ತಿದ್ದುಪಡಿಗೆ ಅನುಮೋದನೆ ನೀಡಿದೆ. ದೇಶದಲ್ಲಿ ವಾರ್ಷಿಕವಾಗಿ ಸಂಭವಿಸುವ 5 ಲಕ್ಷ ಅಪ ಘಾತ ಪ್ರಕರಣಗಳಲ್ಲಿ 1.5 ಲಕ್ಷ ಜನ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಈ ಹೆಜ್ಜೆ ಇಟ್ಟಿದೆ. ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವ, ವಾಹನ ಚಲಾವಣೆಗೆ ಶೈಕ್ಷಣಿಕ ಹಿನ್ನೆಲೆ ಕಡ್ಡಾಯ ಎಂಬ ನಿಯಮ ರದ್ದು, ಲೈಸನ್ಸ್ ಅವಧಿ ಹೆಚ್ಚಳ, ತಾತ್ಕಾಲಿಕ ನೋಂದಣಿ ವ್ಯವಸ್ಥೆ ರದ್ದು ಮಾಡುವ ಅಂಶಗಳೂ ಹೊಸ ಕಾಯ್ದೆಯಲ್ಲಿವೆ.

ಯಾವುದಕ್ಕೆ ಎಷ್ಟು ದಂಡ?

  • ಮಿತಿ ಮೀರಿದ ವೇಗ- ರೂ.1000
  • ವಿಮೆ ಇಲ್ಲದ ವಾಹನ ಚಾಲನೆ- ರೂ.2 ಸಾವಿರ ದಂಡ/ ಮೂರು ತಿಂಗಳು ಜೈಲು ಶಿಕ್ಷೆ
  • ಹೆಲ್ಮೆಟ್ ಧರಿಸದೆ ವಾಹನ ಚಾಲನೆ- ರೂ.2 ಸಾವಿರ ದಂಡ/ ಮೂರು ತಿಂಗಳು ಚಾಲನಾ ಪರವನಾಗಿ ಅಮಾನತು
  • ಅಪ್ರಾಪ್ತ ವಯಸ್ಸಿನವರು ರಸ್ತೆ ಅಪಘಾತ ನಡೆಸಿದರೆ- ಪೋಷಕರು/ಮಾಲೀಕನಿಗೆ ರೂ.25 ಸಾವಿರ ದಂಡ ಹಾಗೂ 3 ವರ್ಷಗಳ ಜೈಲು. ವಾಹನ ನೋಂದಣಿ ರದ್ದು
  • ಸಂಚಾರ ನಿಯಮ ಉಲ್ಲಂಘನೆ-ರೂ.100 ರಿಂದ ರೂ.500ಕ್ಕೇರಿಕೆ
  • ಅಧಿಕಾರಿಗಳ ಆದೇಶಕ್ಕೆ ಅಗೌರವ-ರೂ.500 ರಿಂದ ರೂ.2 ಸಾವಿರಕ್ಕೇರಿಕೆ
  • ಲೈಸನ್ಸ್ ಇಲ್ಲದೇ ವಾಹನ ಚಾಲನೆ- ರೂ.5 ಸಾವಿರ
  • ವಾಹನ ಓವರ್ ಲೋಡ್ ಆಗಿದ್ದರೆ- ರೂ.20 ಸಾವಿರ
  • ಸೀಟ್ ಬೆಲ್ಟ್ ಧರಿಸದಿದ್ದರೆ- ರೂ. 1 ಸಾವಿರ