ಕೃಷ್ಣ ಮೃಗ ಬೇಟೆ ಪ್ರಕರಣದ ತೀರ್ಪು: ಸಲ್ಮಾನ್ ಖಾನ್ ನಿರ್ದೋಷಿ

0
1232

ಜೈಪುರ್,ಜು.25-ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಸಿಲುಕಿದ್ದ ಬಾಲಿವುಡ್ ನಟ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಅವರನ್ನು  ಪ್ರಕರಣದಿಂದ ರಾಜಸ್ಥಾನ ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ.

ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಸೇರಿದಂತೆ ಒಟ್ಟು 7 ಮಂದಿಯನ್ನು ಆರೋಪಿಗಳೆಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜೈಪುರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.   ಕಳೆದ ಹಲವು ದಿನಗಳಿಂದ ವಾದ-ವಿವಾದ ನಡೆದು ಇಂದು ತೀರ್ಪನ್ನು ಕಾಯ್ದಿರಿಸಲಾಯಿತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ವೇಳೆ ಸಲ್ಮಾನ್ಖಾನ್ ಮತ್ತು ಇತರೆ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸಲ್ಮಾನ್ ಪ್ರಕರಣದ ವಿಚಾರಣೆಯನ್ನು ಮೇ ತಿಂಗಳಲ್ಲಿ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಸೋಮವಾರ ಸಲ್ಲು ನಿರಪರಾಧಿ ಎಂದು ತೀರ್ಪಿತ್ತಿದೆ.

1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣ ವೇಳೆ ಜೋಧಪುರದ ಹೊರವಲಯದ ಭಾವದ್ ರಕ್ಷೀತಾರಣ್ಯದಲ್ಲಿ ಸಲ್ಮಾನ್ ಖಾನ್ ಜತೆ ಇನ್ನಿತರ 7 ಜನ ಕೃಷ್ಣಮೃಗ ಬೇಟೆಯಾಡಿದ ಆರೋಪದಡಿ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಕೆಲ ದಿನ ಜೋಧಪುರ ಜೈಲಿನ ಅತಿಥಿಯಾಗಿದ್ದರು. ಸುದೀರ್ಘ 18 ವರ್ಷಗಳ ಬಳಿಕ ಸಲ್ಲು ನಿರ್ದೋಷಿ ಎಂದು ತೀರ್ಪು ಹೊರಬಿದ್ದಿರುವುದು ಸಲ್ಮಾನ್ ನಿರಾಳಗೊಂಡಿದ್ದಾರೆ.