ಹಳೆ ನೋಟುಗಳನ್ನ ಸುಡುವ ಬದಲು ಹೀಗೆ ಮಾಡಬಹುದು…

0
1138

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಾ ಇದ್ದಂತೆ ಕಪ್ಪುಹಣ ಸಂಗ್ರಹಿಸಿಟ್ಟವರು ನಿದ್ದೆ ಬಿಟ್ಟಿದ್ದಾರೆ. ಕೆಲವರು ಹಣವನ್ನು ಕಸದ ಬುಟ್ಟಿಗೆ ಹಾಕಿದ್ರೆ ಕೆಲವರು ಸುಟ್ಟುಹಾಕ್ತಿದ್ದಾರೆ. ಇದರಿಂದಾಗುವ ಪ್ರಯೋಜನವೇನು ಎಂದು ಯೋಚಿಸಿದಾಗ ಕಾಣುವುದು ಬರಿ ಶೂನ್ಯ. ಕಾಳಧನಿಕರು ತಾವು ಸಿಕ್ಕಿಬೀಳೋ ಭಯದಲ್ಲಿ ಈ ರೀತಿಯಾದ ಸ್ಟೆಪ್ ಅನ್ನು ಉಪಯೋಗಿಸುವುದರಿಂದ ಅವರಿಗೇನು ನಷ್ಟ ಆಗೋಲ್ಲ. ಅದೇ ದೇಶದ ಬಗ್ಗೆ ಯೋಚಿಸಿದಾಗ ಕಪ್ಪುಹಣವನ್ನು ನಾಶ ಮಾಡುವುದರಿಂದ ದೇಶಕ್ಕೆ ಲಾಸ್ ಆಗುತ್ತೆ ಅಂತ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ ಇದು ಈವಾಗ ವಾಟ್ಸಪ್‍ನಲ್ಲಿ ಹರಿದಾಡಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

@indiantweeter ಎಂಬ ಟ್ವಿಟ್ಟರ್ ಖಾತೆ ಹೊಂದಿರುವ ವ್ಯಕ್ತಿಯೊಬ್ಬರ ಸುಪ್ರೀಂ ಐಡಿಯಾ ಇದು. ಇವರು ಕೊಟ್ಟಿರುವ ಸೂಪರ್ ಸುಪ್ರೀಂ ವಿಚಾರಗಳು ಮೀಡಿಯಾದವರ ಮುಂದೆ ಬರಬೇಕು. ಇಂತಹ ವಿಚಾರಗಳಿಗೆ ಮಾಧ್ಯಮಗಳು ಸಹಕಾರ ನೀಡಿದರೆ, ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ಏನೆಲ್ಲ ಉಪಯೋಗವಾಗುತ್ತೆ ಅನ್ನುವುದನ್ನು ನೀವೇ ಯೋಚನೆ ಮಾಡಿ.

@indiantweeter ಎಂಬ ಟ್ವಿಟ್ಟರ್ ಖಾತೆ ಹೊಂದಿರುವ ವ್ಯಕ್ತಿ ಹೇಳಿರುವ ಪಾಯಿಂಟ್ಸ್ ಗಳನ್ನು ತಿಳಿದುಕೊಳ್ಳೋಣ

ಭಾರತೀಯ ಸೈನಿಕರ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು. ಅದಕ್ಕೆ ಯಾವುದೇ ವ್ಯಕ್ತಿ ತನಗೆ ಇಷ್ಟಬಂದಷ್ಟು ಹಣ ಹಾಕುವಂತಿರಬೇಕು. ಹಣ ಹಾಕಿದವರ ವಿರುದ್ಧ ತನಿಖೆ ಮಾಡಬಾರದು. ಹೀಗೆ ಮಾಡಿದಾಗ ಎರಡು ರೀತಿ ಲಾಭವಾಗುತ್ತದೆ. ಮೊದಲನೆಯದು ಅಕೌಂಟ್‍ಗೆ ಬಂದ ಹಣವನ್ನ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಎರಡನೆಯದು ನೋಟುಗಳನ್ನ ನಾಶ ಮಾಡೋದು ತಪ್ಪುತ್ತದೆ ಅಂತ ಸಲಹೆ ನೀಡಿದ್ದಾರೆ.

Newsism ತಂಡ ಇವರ ಈ ಸಲಹೆಗೆ ಅಭಿನಂದನೆ ವ್ಯಕ್ತಪಡಿಸುತ್ತದೆ. ದೇಶದಲ್ಲಿ ಎಷ್ಟು ಶ್ರೀಮಂತರಿದ್ದಾರೆಂದರೆ ಅವರು ತಮ್ಮ ಬಳಿ ಇರುವ ಕಪ್ಪುಹಣವನ್ನು ಈ ರೀತಿ ಮಾಡಿದರೆ ದೇಶಕ್ಕೆ ಹಾಗು ದೇಶ ಕಾಯೋ ಯೋಧರಿಗೆ ಸಹಾಯ ಮಾಡಿದಂತಾಗುತ್ತದೆ. ಇದರಿಂದ ದೇಶ ಅಭಿವೃದ್ಧಿಯ ಕಡೆ ಸಾಗುತ್ತದೆ.