ತಮಿಳಿಗರಿಗೊಂದು ಬಹಿರಂಗ ಪಾತ್ರ…

0
1201

ನಾವು ಕನ್ನಡಿಗರು,

ಸಕ್ಕರೆ ಕೇಳಿ ಪಾಯಸ ಕೊಡ್ತೀವಿ
ನೀರು ಕೇಳಿ ಪಾನಕ ಕೊಡ್ತೀವಿ
ಹೂವು ಕೇಳಿ ತೋಟವನ್ನೆ ಕೊಡ್ತೀವಿ
ಆದ್ರೆ, ರಕ್ತ ಕೊಡುತ್ತೇವೆ, ನೀರು ಬಿಡುವುದಿಲ್ಲ…

ಈ ಮೇಲಿನ ಮಾತು ಬರಿ ಮಾತಾಗಿ ಉಳಿದಿಲ್ಲ, ಅದು ನಮ್ಮೆಲರ ಹುಟ್ಟು ಗುಣವಾಗಿದೆ, ನೀರಿನ ವಿಚಾರದಲ್ಲಿ ಸಾಕಷ್ಟು ಬೆಂದಿದ್ದೇವೆ, ಕಷ್ಟಗಳ ಸೆರೆಮಾಲೆಯನ್ನು ಕತ್ತಿಗೆ ನೇತು ಹಾಕಿಕೊಂಡು ಬದುಕುವ ಪರಿಸ್ಥಿತಿ ನಮ್ಮ ನಾಡಿಗರದ್ದು.

ನಾವು ಮನುಷ್ಯರೆ… ಅದಕ್ಕೂ ಮಿಗಿಲಾಗಿ ನಾವು ಕನ್ನಡಿಗರು, ಸಹೃದಯಿಗಳು, ನಮಗು ನಿಮ್ಮ ಕಷ್ಟ,ಸುಖ ಗೊತ್ತಿದೆ. ನಮಗೆ ನೀರಿದ್ದಾಗ ಕಂಡಿತಾ ಬಿಡೋಣ… ನೀರು ಕೇಳಿದರೇ ಪಾನಕ ಕೊಡುವ ಸಜ್ಜನರು ನಾವು, ಅಂತಾದ್ರೆ ನಿಮಗೆ ನೀರು ಕೊಡಲು ಹಿಂದೆ ಮುಂದೆ ನೋಡುತ್ತೇವೆಯೇ…? ಆದರೆ ಇರುವ ನೀರನ್ನೆಲಾ ನಿಮಗೆ ಬಿಟ್ಟು ನಾವು ಹರಿಕತೆ ಮಾಡುತ್ತ ಕೂರುವುದಕ್ಕೆ ಆಗುತ್ತದೆಯೇ?

ಈಗಾಗಲೇ ಹೈರಾಣಾಗಿರುವ ನಮ್ಮ ರೈತರು ತಮ್ಮ ರಕ್ತ ಬಸಿದುಕೊಂಡು ವ್ಯವಸಾಯ ಮಾಡಬೇಕೆ? ನಮಗೆ ಕುಡಿಯಲಿಕ್ಕೆ ನೀರು ಬೇಡವ? ನಾವು ಮನುಷ್ಯರೆ ಅಲ್ಲವೇ? ಸುಕ್ಕ ಸುಮ್ಮನೆ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡಿಗೆ ಏನೆನ್ನಬೇಕು…? ಇಲ್ಲಿ ಕುಡಿಯುವುದಕ್ಕೆ ನೀರಿಲ್ಲದಿದ್ದಾಗ ಸಾಂಬ ಬೆಳೆಗೆ ನೀರು ಹರಿಸಿ ಎಂದು ವಾದಿಸುತ್ತಿರುವುದು ಎಷ್ಟು ಸರಿ..!?

ಸಾಲದಕ್ಕೆ, ನಿಮ್ಮ political gameನಿಂದಾಗಿ ಎರೆಡು ಜೀವ ಬೇಲಿ ತೆಗೆದುಕೊಂಡಿರಿ, ಇನ್ನಾದರೂ ಹಾಗೆತನ ಬಿಟ್ಟು, ಸಹಬಾಳ್ವೆ ಜೀವನ ನೆಡೆಸೋಣ. ಸುಮಾರು 15 ಲಕ್ಷ ತಮಿಳಿಗರು ಬೆಂಗಳೂರಿನಲ್ಲಿ ಇದ್ದಾರೆ, ಅವರನೊಮ್ಮೆ ವಿಚಾರಿಸಿ ನಮ್ಮ ಆತಿಥ್ಯದ ಬಗ್ಗೆ, ನಾವೆಂದೂ ಜಗಳವಾಡುವುದಾಗಲಿ, ಹಗೆ ಸಾದಿಸುವುದಾಗಲಿ ಮಾಡಿಲ್ಲ, ಮಾಡುವುದೂ ಇಲ್ಲ, ಆದರೆ ನಾವು ಏನು ಬೇಕಾದರೂ ಸಹಿಸಿಕೊಳ್ಳುತೇವೆ ಎಂದು ನಿಮ್ಮ ದುರ್ನಡತೆ ತೋರಿದರೆ ನಾವು ಸಹಿಸುವುದಿಲ್ಲ.

silent ಆಗಿರುತೇವೆ ಅಂದ್ರೆ ನಮ್ಗೆ ಕೋಪ ಬರಲ್ಲ ಅಂತಲ್ಲ…! ನಮ್ಗೆ ತಾಳ್ಮೆ ಜಾಸ್ತಿ ಅಂತ ಅರ್ಥ… ಕನ್ನಡಿಗರು ನೀರಿಗಾಗಿ ತಮ್ಮ ಜೀವನವನ್ನೇ ಅರ್ಪಿಸುತ್ತಾರೆ ಎಂದು ನಿಮಗೆ ಈಗ ತಿಳಿದಿರಬಹುದು, ಕ್ರಾಂತಿ ಬೇಡ ಶಾಂತಿ ಇಂದ ಬಾಳೋಣ…

-ಗಿರೀಶ್ ಗೌಡ