ಪನ್ನೀರ್ ಚೆನ್ನಾ ಮಸಾಲ

0
2603

ಬೇಕಾಗುವ ಸಾಮಗ್ರಿಗಳು

ಕಾಬೂಲ್ ಕಡಲೆ 1 ಕಪ್, ಪನ್ನೀರ್ 100 ಗ್ರಾ೦,

ಈರುಳ್ಳಿ 2,

ಶು೦ಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ,

ಟೊಮೇಟೊ 2,

ಕೊತ್ತ೦ಬರಿ ಪುಡಿ 1ಚಮಚ,

ಅರಿಶಿನ ಪುಡಿ ಅಧ೯ ಚಮಚ,

ಜೀರಿಗೆ ಪುಡಿ 1 ಚಮಚ,

ಕರಿಮೆಣಸಿನ ಪುಡಿ ಅಧ೯ ಚಮಚ,

ಗರ೦ ಮಸಾಲ ಅಧ೯ ಚಮಚ,

ಖಾರದ ಪುಡಿ (ಖಾರಕ್ಕೆ ತಕ್ಕಷ್ಟು),

ಒಣಮಾವಿನ ಪುಡಿ 1 ಚಮಚ,

ಜೀರಿಗೆ ಅಧ೯ ಚಮಚ,

ಎಣ್ಣೆ 2 ಚಮಚ,

ನೀರು ಒ೦ದು ಕಪ್,

ಸ್ವಲ್ಪ ಕೊತ್ತ೦ಬರಿ,

ಉಪ್ಪು ರುಚಿಗೆ.

ಮಾಡುವ ವಿಧಾನ:

ಕಾಬೂಲ್ ಕಡಲೆಯನ್ನು 5-6 ಗ೦ಟೆಗಳ ಕಾಲ ನೆನೆ ಹಾಕಿ. ನ೦ತರ ಕಡಲೆಯನ್ನು ಪ್ರೆಶರ್ ಕುಕ್ಕರ್‍ನಲ್ಲಿ ಬೇಯಲು ತಕ್ಕ ನೀರು, ಉಪ್ಪು ಸೇರಿಸಿ ಮೂರು ವಿಶಲ್ ಬರುವವರೆಗೆ ಬೇಯಿಸಿ. ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಚಟಪಟ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕ೦ದು ಬಣ್ಣ ಬರುವವರೆಗೆ ಫ ಮಾಡಿ. ನ೦ತರ ಶು೦ಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮೂರು ನಿಮಿಷ ಫೆ ಮಾಡ್ಬೇಕು. ಈಗ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫೆ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಕೊತ್ತ೦ಬರಿ ಪುಡಿ, ಜೀರಿಗೆ ಪುಡಿ, ಒಣಮಾವಿನಕಾಯಿ ಪುಡಿ, ಕರಿಮೆಣಸಿನ ಪುಡಿ, ಗರ೦ ಮಸಾಲಾ ಮತ್ತು ಪನೀರ್ ಹಾಕಿ ಐದು ನಿಮಿಷ ಫೆù ಮಾಡಬೇಕು. ನ೦ತರ ಬೇಯಿಸಿದ ಕಡಲೆಯನ್ನು ಹಾಕಿ ಮಿಕ್ಸ್ ಮಾಡಿ, ಬೇಕಿದ್ದರೆ ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಬಹುದು. ಮಿಶ್ರಣ ಡೆ ರೀತಿಗೆ ತಲುಪುವ ವರೆಗೆ ಫೆ ಮಾಡಿ. ಕೊತ್ತ೦ಬರಿ ಸೊಪ್ಪಿನಿ೦ದ ಅಲ೦ಕರಿಸಿ ಉರಿಯಿ೦ದ ಇಳಿಸಿದರೆ ಚೆನ್ನಾ ಪನ್ನೀರ್ ಸವಿಯಲು ಸಿದ್ಧ.