ಕರ್ನಾಟಕದಲ್ಲಿ ಆಹಾಕಾರ, ಮೋದಿಯವರ ಹುಟ್ಟುಹಬ್ಬದ ಕೇಕ್ ಗಿನ್ನೀಸ್ ವರ್ಲ್ಡ್ ರೆಕಾರ್ಡ್

0
974

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಹಾಕಾರ ನಡಿತಾ ಇದೆ. ಇದರ ನಡುವೆ ಮೋದಿಯವರ ಹುಟ್ಟುಹಬ್ಬದ ಕೇಕ್ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಗೆ ಸೇರಿದೆಯಂತೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ 66 ನೇ ವರುಷದ ಹುಟ್ಟುಹಬ್ಬವನ್ನು ಹೊಸದಿಲ್ಲಿ ಯಲ್ಲಿ ಆಚರಿಸುತ್ತಿದ್ದರೆ. ಅವರ ಈ ವರ್ಷದ ಹುಟ್ಟುಹಬ್ಬ ಒಂದು ದೊಡ್ಡ ಆಚರೆಣೆಯಾಗಬೇಕೆಂದು ಅತುಲ್ ಬೇಕರಿ ಎಂಬ ಸೂರತ್ ಆಧಾರಿತ ಬೇಕರಿಯವರು ಅತಿ ಎತ್ತರದ ಪಿರಮಿಡ್ ಕೇಕ್ಅನ್ನು ಸಿದ್ಧಪಡಿಸಿದ್ದಾರೆ. ಇಲ್ಲಿಯವರೆಗೆ ಮಾಡಿದ ಎತ್ತರದ ಪಿರಮಿಡ್ ಕೇಕ್ ಎಂದು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ.

cssarhbukaeg_0p

ಬೇಕರಿ ಈ ಸಾಧನೆಗೆ “ಶಕ್ತಿ Fondation ಎಂಬ” NGO ಸಹಭಾಗಿತ್ವವಾಗಿದೆ. ಶಕ್ತಿ ಫೌಂಡೇಶನ್ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಮಹಿಳೆಯರ ಆರ್ಥಿಕ ನೆರವಿನ ಸಬಲೀಕರಣದ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ಕೇಕ್ ಮಾಡುವ ಮೂಲಕ ಮಹಿಳಾ ಸಬಲೀಕರಣದ ಪ್ರಯತ್ನಗಳಲ್ಲಿ ಒಂದಾದ ‘ಬೇಟಿ ಬಚಾವೊ, ಬೇಟಿ ಪಢಾವೋ’ ನಂತಹ ಯೋಜನೆಯನ್ನು ಜನರಿಗೆ ತಿಳಿಸುತ್ತಿದೆ.

ಅತೀ ಎತ್ತರದ ಪಿರಮಿಡ್ ಕೇಕ್ ಅನ್ನು 5,000 ಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರ ಉಪಸ್ಥಿತಿಯಲ್ಲಿ Maliba Party ಫ್ಲೋಟ್, ವೆಸು ಎಂಬಲ್ಲಿ ಮಾನಸಿಕ ತೊಂದರೆಯುಳ್ಳ ಮತ್ತು ಅನಾಥ ಹುಡುಗಿಯರು ಮೂಲಕ ಎತ್ತರದ ಪಿರಮಿಡ್ ಕೇಕ್ ಅನ್ನು ಕತ್ತರಿಸಲಾಯಿತು.

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಹಾಕಾರ ನಡಿತಾ ಇದೆ ಇದರ ನಡುವೆ ಮೋದಿಯವರ ಹುಟ್ಟುಹಬ್ಬದ ಕೇಕ್ ಗಿನ್ನೀಸ್ ವರ್ಲ್ಡ್ ರೆಕಾರ್ಡ್ಗೆ ಸೇರಿದೆಯಂತೆ. ಕಾವೇರಿ ನೀರಿನ ವಿವಾದವನ್ನು ಕಾನೂನು ಪರಿಮಿತಿಯಲ್ಲೇ ಪರಿಹರಿಸಿಕೊಳ್ಳಬೇಕು ಅಂತ ಹೇಳಿದ ಮೋದಿಯವರು ತಾವೇ ಖುದ್ದಾಗಿ ಬಂದು ಎರಡು ರಾಜ್ಯಗಳ ಮಂತ್ರಿಗಳೊಂದಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಮಹದಾಯಿ ಹಾಗೂ ಕಾವೇರಿ ನೀರಿನ ಸಮಸ್ಯೆಯಲ್ಲಿ ಮಣ್ಣುಮುಚ್ಚಿ ಕುಳಿತಿದ್ದಾರೆ. ಭಾರತ ದೇಶದ ಪ್ರಧಾನಿಯಾಗಿರುವ ಮೋದಿಯವರಿಗೆ ದೇಶದಲ್ಲಿರುವ ಕರ್ನಾಟಕ ಮತ್ತು ತಮಿಳುನಾಡಿನ ಸಮಸ್ಯೆ ಕಾಣುತ್ತಿಲ್ಲವೇ?