ಶೀಘ್ರವೇ ಹೊಸ ವಿನ್ಯಾಸದ 1,000 ರೂ. ನೋಟು ಚಲಾವಣೆಗೆ ಬರಲಿವೆ…!

0
1558

ಶೀಘ್ರವೇ ಹೊಸ ವಿನ್ಯಾಸದ 1,000 ರೂ. ನೋಟು ಚಲಾವಣೆಗೆ ಬರಲಿವೆ

ನವದೆಹಲಿ: ಶೀಘ್ರವೇ ಹೊಸ ವಿನ್ಯಾಸದ 1,000 ರೂಪಾಯಿ ನೋಟುಗಳನ್ನು  ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಿದ್ಧತೆ ನಡೆಸಿದೆ.

ಆದರೆ 2,000 ರೂ. ಮುಖಬೆಲೆಯ ನೋಟುಗಳಿಗೆ ಚಿಲ್ಲರೆ ದೊರೆಯುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಹೊರಟಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರ ಹೊರಟಿದೆ.

ಹಳೆಯ 1,000 ರೂ. ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ. ಬಣ್ಣದಲ್ಲಿಯೂ ವ್ಯತ್ಯಾಸ ಇರಲಿದೆ ಎಂದು ಮೂಲಗಳು ತಿಳಿಸಿವೆ. ಬಣ್ಣವೂ ವಿಭಿನ್ನವಾಗಿದ್ದು ಹೆಚ್ಚಿನ ಸುರಕ್ಷತಾ ಅಂಶಗಳನ್ನು ಹೊಂದಿರಲಿದೆ. ಜತೆಗೆ ಅಂಧರಿಗೆ ಗುರುತಿಸಲು ಸಹಾಯವಾಗುವಂತೆ ಬ್ರೈಲ್ಸ್ನೇಹಿಯಾಗಿರಲಿವೆ.

 2,000 ರೂ. ನೋಟು ರದ್ದತಿಗೆ ಚಿಂತನೆ

ಹೆಚ್ಚು ಮುಖಬೆಲೆಯ ನೋಟುಗಳು ಕಪ್ಪುಹಣ ಸಂಗ್ರಹವನ್ನು ಸುಲಭವಾಗಿಸುತ್ತದೆ. ಅದನ್ನು ತಡೆಯುವುದಕ್ಕಾಗಿ ₹2,000 ಮುಖಬೆಲೆಯ ನೋಟು ಹಿಂದಕ್ಕೆ ಪಡೆಯುವ ಚಿಂತನೆ ನಡೆಯುತ್ತಿದೆ.

ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದ ಹೊತ್ತಿಗೆ ನಗದು ಕೊರತೆಯ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ವ್ಯಕ್ತಪಡಿಸಿತ್ತು.