ಮೇಷ
ವಸ್ತ್ರಭೂಷಣ ವೈಭವ ಪ್ರಾಪ್ತಿ, ವಿದೇಶ ಗಮನ, ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲೇ ಪರಿಹಾರ.
ವೃಷಭ
ಹೃದಯ ರೋಗ ಶಮನ, ವಿವಿಧ ಆಪತ್ತಿನಿಂದ ಪಾರು, ಮಡದಿ ಮಕ್ಕಳಿಂದ ಶುಭ, ವಾಹನ ಖರೀದಿಯ ಬಗ್ಗೆ ಚಿಂತೆ, ಸಂಗಾತಿಯ ಭೇಟಿ.
ಮಿಥುನ
ಗೃಹ ನಿರ್ಮಾಣಕ್ಕೆ ಸಿದ್ಧತೆ, ಮಹಿಳೆಯರಿಗೆ ಉದ್ಯೋಗದಲ್ಲಿ ಹಿನ್ನಡೆ, ಅಧಿಕಾರ ಪ್ರಾಪ್ತಿ, ನ್ಯಾಯಾಂಗ ಬಂಧನದಿಂದ ಮುಕ್ತಿ, ವಾಹನ ಖರೀದಿ.
ಕಟಕ
ಆಂತರಿಕ ಕಲಹ, ಸ್ವಜನರಲ್ಲಿ ವಿರೋಧ, ನಷ್ಟ ವಸ್ತು ಪ್ರಾಪ್ತಿ, ದೇವತಾದರ್ಶನ, ವಿವಾಹಯೋಗ, ಧಾನ್ಯಲಾಭ.
ಸಿಂಹ
ದೇವತಾನುಗ್ರಹದಿಂದ ಸಂಪತ್ಸಮೃದ್ಧಿ, ಕಳೆದು ಹೋದ ಸ್ಥಾನ ಪ್ರಾಪ್ತಿ, ಗೋವು ಕೃಷಿ ಇತ್ಯಾದಿಗಳಿಂದ ಮನಸ್ಸಿಗೆ ಹಿತ, ಸೀ ಸೌಖ್ಯ.
ಕನ್ಯಾ
ಕೃಷಿಯಲ್ಲಿ ಲಾಭ, ದೇವಾಲಯ ಸರೋವರಾದಿ ನಿರ್ಮಾಣ, ಮಡದಿ ಮಕ್ಕಳ ಸೌಖ್ಯ, ಬಂಧುಗಳ ಆಗಮನದ ವಾರ್ತೆ, ಕಾರ್ಯ ಸಿದ್ಧಿ.
ತುಲಾ
ರಾಜಸನ್ಮಾನ, ಧನಲಾಭ, ಸ್ಥಾನಮಾನ ಗೌರವಾದಿ ವೃದ್ಧಿ, ಅಗ್ನಿಯ ಭಯ ದೂರ ಪ್ರವಾಸ ಯೋಗ, ಮನೆಯಲ್ಲಿ ಸಂತಸದ ವಾತಾವರಣ.
ವೃಶ್ಚಿಕ
ಸಹೋದರ ಪುತ್ರ ಮಿತ್ರಾದಿ ಇವರಿ0ದ ಕಾಯ9ದಲ್ಲಿ ಸುಖ, ಉದ್ಯೋಗ ಭ0ಗ, ಯಶೋವೃದ್ಧಿ, ದೇಹಪೀಡೆ, ಅಧಿಕಾರಿಗಳ ಭಯ.
ಧನು
ಶತ್ರುಭಯ ನಿವಾರಣೆ, ಬಹುಜ್ಞಾನ ಪ್ರಾಪ್ತಿ, ರಾಜ ಮಾನ್ಯತೆ, ಧರ್ಮ ಪ್ರವೃತ್ತಿ, ವಿವಾಹಾದಿ ಮಂಗಳಕಾರ್ಯಗಳ ಚಟುವಟಿಕೆ, ಶಯನಸುಖ.
ಮಕರ
ಮಿತ್ರ ಬಂಧುಗಳ ಆಗಮನ, ಅಧಿಕಾರಿಗಳ ಪ್ರೀತಿ, ವಿದ್ಯಾ ವಸಾಲಂಕಾರ ಪ್ರಾಪ್ತಿ, ಉದರವ್ಯಾಧಿ, ವಿವಾಹದ ಮಾತುಕತೆಗೆ ಸಿದ್ಧತೆ.
ಕುಂಭ
ದೇಹದಲ್ಲಿ ಉತ್ಸಾಹ ವೃದ್ಧಿ, ಪಶುಲಾಭ, ಸ್ಥಾನಮಾನ ಪ್ರಾಪ್ತಿ, ದುಸ್ವಪ್ನಭಯ, ದೂರದಿಂದ ವಿಶೇಷ ಸುದ್ದಿ ಬಂದೀತು. ಸಂಸಾರದಲ್ಲಿ ಸುಖ.
ಮೀನ
ಗುರುದೇವತಾ ಭಕ್ತಿ, ದಾನ ಧರ್ಮ ಪ್ರವೃತ್ತಿ, ಮೃಷ್ಟಾನ್ನ ಭೋಜನ ಸುಖ, ನಷ್ಟ ಸಂಭವ, ಪುರಾಣ ಕಥೆಗಳನ್ನು ಕೇಳುವುದು, ವಿದೇಶ ಪ್ರಯಾಣಕ್ಕೆ ಸಿದ್ಧತೆ.